ಬಿಎಂಸಿಗೆ ಛೀಮಾರಿ ಹಾಕಿ ವಿದ್ಯಾರ್ಥಿಗೆ ಮೂಲ ದಾಖಲೆ ಕೊಡಿಸಿದ ಹೈಕೋರ್ಟ್

ಬೆಂಗಳೂರು, ಜು.14: ಬಿಎಂಸಿ ಕಾಲೇಜು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಮೂಲ ದಾಖಲೆ ನೀಡಲು ನಿರಾಕರಿಸಿರುವ ಕಾರಣ ವಿದ್ಯಾರ್ಥಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದೀಗ ಹೈಕೋರ್ಟ್‌ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ನ್ಯಾಯಾಲಯದಲ್ಲಿಯೇ ದಾಖಲೆಗಳನ್ನು ಕೊಡಿಸಿರುವ ಘಟನೆ ನಡೆದಿದೆ. ಏಮ್ಸ್‌ ನಡೆಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪದ್ಮನಾಭನಗರದ ನಿವಾಸಿ ಡಾ . ಸುಮಂತ್‌ ಐದನೇ RANK ಪಡೆದಿದ್ದರು.

ಅವರು ಅಲ್ಲಿ ಪ್ರವೇಶ ಪಡೆಯಲು ಜು.15ರೊಳಗೆ ಮೂಲದಾಖಲೆ ಸಲ್ಲಿಸಬೇಕಿತ್ತು. ಹೀಗಾಗಿ ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ಎಂಬಿಬಿಎಸ್‌ ಪ್ರವೇಶದ ಸಂದರ್ಭದಲ್ಲಿ ಸಲ್ಲಿಸಿದ್ದ ಮೂಲ ದಾಖಲೆಗಳನ್ನು ಹಸ್ತಾಂತರಿಸುವಂತೆ ಮನವಿ ಸ ಸಲ್ಲಿಸಿದ್ದರು. ಆದರೆ ಅದನ್ನು ಬಿಎಂಸಿ ಪರಿಗಣಿಸಿರಲಿಲ್ಲ. ಆದರೆ ಹೈಕೋರ್ಟ್‌ ವಿದ್ಯಾರ್ಥಿಗೆ ನ್ಯಾಯ ಒದಗಿಸಿದೆ.

HC slaps on BMC: student gets original documents

ಈ ಪ್ರಕರಣ ಕುರಿತು ವಾದ ಪ್ರತಿವಾದ ಆಲಿಸಿ ಅಖಿಲ ಭಾರತ ಮಟ್ಟದಲ್ಲಿ ಐದನೇ RANK ಗಳಿಸಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕಿತ್ತು, ಆದರೆ ಕಾಲೇಜಿನ ಸಿಬ್ಬಂದಿ ಮೂಲ ದಾಖಲೆ ನೀಡದೆ ಅಲೆಸುವುದು ಸರಿಯಲ್ಲ ಎಂದು ಪೀಠ ಅಸಮಧಾನ ವ್ಯಕ್ತಪಡಿಸಿತು.ಅಲ್ಲದೆ ಬಿಎಂಸಿ ವಿಧಿಸುವ ಷರತ್ತುಗಳನ್ನು ಪಾಲಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದರೆ, ಮೂಲ ದಾಖಲೆಗಳನ್ನು ನೀಡಬೇಕು ಎಂದು ಆದೇಶ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+