ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಚಾಟಿ
ಬೆಂಗಳೂರು, ಫೆ. 17 : ಮಹಾನಗರದ ವಾಯು ಮತ್ತು ಶಬ್ದಮಾಲಿನ್ಯ ತಡೆಯುಲ್ಲಿ ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದುಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ವಿಭಾಗೀಯ ಪೀಠ ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.[ಜಾಹೀರಾತು ಫಲಕಗಳ ವಿರುದ್ಧ ಬಿಬಿಎಂಪಿ ಸಮರ]

ವಾದ ಮಂಡಿಸಿದ ಬಿಬಿಎಂಪಿ ಪರ ವಕೀಲರು ಮಾದರಿ ರಸ್ತೆಗಳ ಅಭಿವೃದ್ಧಿ ಸಕಲ ಕ್ರಮ ತೆಗೆದುಕೊಳ್ಳಲಾಗಿದೆ. ಕಬ್ಬನ್ ರಸ್ತೆ, ಡಿಕೆನ್ಸನ್ ರಸ್ತೆ ಹಾಗೂ ರೇಸ್‌ಕೋರ್ಸ್ ರಸ್ತೆಗಳನ್ನು ಮಾಲಿನ್ಯ ಮುಕ್ತ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಮರುಪ್ರಶ್ನೆ ಹಾಕಿದ ನ್ಯಾಯಪೀಠ, ಉಳಿದ ರಸ್ತೆಗಳ ಗತಿಯೇನು? ನೀವು ಕೇವಲ ಆರೋಗ್ಯವಂತರ ಆರೋಗ್ಯ ರಕ್ಷಣೆ ಮಾಡುತ್ತಿದ್ದೀರಿ. ಆದರೆ ಉಳಿದವರ ಪಾಡನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾದರೆ ಪ್ರಯೋಜನವೇನು? ಎಂದು ಮರುಪ್ರಶ್ನೆ ಹಾಕಿತು.[ಗ್ರಾಮೀಣ ಭಾಗಕ್ಕೆ ಪಶು ಆಸ್ಪತ್ರೆ ಸ್ಥಳಾಂತರಿಸಲು ಹೈ ಒಪ್ಪಿಗೆ]
ಪರಿಸರ ನಿಯಂತ್ರಣ ಮಂಡಳಿ ಪರ ಮಾತನಾಡಿದ ವಕೀಲರು, ಬೆಂಗಳೂರು ಮೆಟ್ರೊಪಾಲಿಟನ್ ಸಾರಿಗೆ ಕಂಪೆನಿಯಲ್ಲಿ (ಬಿಎಂಟಿಸಿ) ವಾಹನಗಳು ಹೊರಸೂಸುವ ಹೊಗೆಯನ್ನು ಪತ್ತೆ ಹಚ್ಚುವ ಸಾಧನಗಳ ಕೊರತೆ ಇದೆ. ಇದಕ್ಕಾಗಿ ಬಿಎಂಟಿಸಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ನೀವು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಿ ಅದು ನಮಗೆ ಸಂಬಂಧವಿಲ್ಲ. ಆದರೆ ಮಾಲಿನ್ಯ ನಿಯಂತ್ರಣವಾಗುವುದು ಮುಖ್ಯ. ಇಲ್ಲದ ಸಬೂಬುಗಳನ್ನು ನೀಡಿ ಹಾದಿ ತಪ್ಪಿಸಬೇಡಿ. ಇನ್ನು ಮುಂದಾದರೂ ಸಕಲ ಮುಂಜಾಗೃತೆ ತೆಗೆದುಕೊಳ್ಳಿ ಎಂದು ಖಾರವಾಗಿಯೇ ತಿಳಿಸಿದೆ.












Click it and Unblock the Notifications