• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಚ್. ಸಿ ಶಿವರಾಮು

By Mahesh
|

ಬೆಂಗಳೂರು, ನ.23: ಏಷ್ಯಾಖಂಡದಲ್ಲೇ ಅತಿ ದೊಡ್ಡ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಚ್. ಸಿ ಶಿವರಾಮು ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ 29 ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಗೆ ಭಾನುವಾರ ಮತದಾನ ನಡೆದು ಫಲಿತಾಂಶ ಸಂಜೆ ವೇಳೆಗೆ ಪ್ರಕಟವಾಗಿದೆ.

ಬೆಂಗಳೂರು ವಕೀಲರ ಸಂಘ(ಎಎಬಿ) ದ ಒಟ್ಟು 32 ಹುದ್ದೆಗಳಿಗೆ 150ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಹೈಕೋರ್ಟ್ ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಮೇಯೋಹಾಲ್ ಕೋರ್ಟ್ ಘಟಕಗಳ ಪದಾಧಿಕಾರಿಗಳ ಆಯ್ಕೆಯೂ ಕೂಡ ಇಲ್ಲೆ ನಡೆಯಿತು. ಸಿಟಿ ಸಿವಿಲ್ ಕೋರ್ಟ್ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಸ್ಮಾರ್ಟ್‌ಕಾರ್ಡ್ ಇದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಯಾವುದೇ ರೀತಿಯ ಫೋರ್ಜರಿಗೆ ಅವಕಾಶವಿಲ್ಲ.

HC Shivaramu elected President of Advocates Association of Bangalore

ಅಧ್ಯಕ್ಷ ಹುದ್ದೆಗೆ ಬಸವರಾಜ್, ಎ.ಪಿ.ರಂಗನಾಥ್, ಎಚ್.ಸಿ ಶಿವರಾಮು, ಸದಾಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಶೇಖರ್,ಪುಟ್ಟೇಗೌಡ, ರಾಜಣ್ಣ, ಖಜಾಂಚಿ ಹುದ್ದೆಗೆ ಅಮೃತೇಶ್, ಪ್ರವೀಣ್‌ಗೌಡ ಮುಂತಾದವರು ಸ್ಪರ್ಧಿಸಿದ್ದರು.

ಕಳೆದ 15 ದಿನಗಳಿಂದಲೂ ಮತಯಾಚನೆ ಜೋರಾಗಿ ಸಾಗಿತ್ತು. ಇಂದು ಕೂಡ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ತಮ್ಮ ಅಭ್ಯರ್ಥಿಗಳ ಪರ ಬೆಂಬಲಿಗರು ಕೊನೆ ಕ್ಷಣದವರೆಗೆ ಮತಯಾಚನೆ ಮಾಡಿದರು. ಸಿಟಿ ಸಿವಿಲ್ ಕೋರ್ಟ್ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಮಾರ್ಟ್‌ಕಾರ್ಡ್ ಇದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಯಾವುದೇ ರೀತಿಯ ಫೋರ್ಜರಿಗೆ ಅವಕಾಶವಿಲ್ಲ.

ಹೈಕೋರ್ಟ್‌ನಲ್ಲಿ 2800 ವಕೀಲ ಮತದಾರರು, ಸಿಟಿ ಸಿವಿಲ್‌ಕೋರ್ಟ್‌ನಲ್ಲಿ 7700, ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 2900, ಮೇಯೋಹಾಲ್‌ನಲ್ಲಿ 900 ಸೇರಿದಂತೆ 14,500 ವಕೀಲರು ಮತದಾನದ ಹಕ್ಕು ಹೊಂದಿದ್ದಾರೆ. ಒಟ್ಟಾರೆ 22,500ಕ್ಕೂ ಅಧಿಕ ಮತದಾರರು ಬೆಳಗ್ಗೆ 9 ರಿಂದ ಮತದಾನ ಮಾಡಿದರು ಸಂಜೆ ಫಲಿತಾಂಶ ಹೊರ ಬಂದಿದ್ದು, ಮುಂದಿನ ಮೂರು ವರ್ಷ ಅವಧಿಗೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಫಲಿತಾಂಶ ಇಂತಿದೆ:

ಅಧ್ಯಕ್ಷರಾಗಿ ಎಚ್. ಸಿ ಶಿವರಾಮು ಆಯ್ಕೆ 3371 ಮತಗಳು

ಎ.ಪಿ ರಂಗನಾಥ್ : 2013 ಮತಗಳು

ಸದಾಶಿವರೆಡ್ಡಿ : 2741 ಮತಗಳು

ಕಾರ್ಯದರ್ಶಿಯಾಗಿ ಪುಟ್ಟೇಗೌಡ ಆಯ್ಕೆ

ಎಚ್. ಸಿ ಶಿವರಾಮು ಅವರು ವಿದ್ಯಾವರ್ಧಕ ಕಾನೂನು ಕಾಲೇಜಿನ ಯೂನಿಯನ್, ಹೈಕೋರ್ಟ್ ಬಾರ್ ಅಸೋಸಿಯೇಷನ್ಸ್, ಬೆಂಗಳೂರು, ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ, ರಾಜ್ಯ ಬಾರ್ ಕೌನ್ಸಿಲ್ ಮಾಜಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
HC Shivaramu elected President of Advocates Association of Bangalore. Shivaramu was also Former Chairman of Karnataka State Bar Council, Bangalore, he secured victory over Sadashiv Reddy and Ranganath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more