ಅರ್ಕಾವತಿ ಬಡಾವಣೆ: ಮೂಲೆ ನಿವೇಶನ ಹರಾಜಿಗೆ ಹೈಕೋರ್ಟ್ ಬ್ರೇಕ್
ಬೆಂಗಳೂರು ಜೂ.2. ಬೆಂಗಳೂರು ನಗರದಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಲ್ಲಿರುವ ಮೂಲೆ ನಿವೇಶನಗಳ ಹರಾಜಿಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಅಲ್ಲದೆ, ಬಿಡಿಎಯ ತಪ್ಪಿನಿಂದಾಗಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಿಂದ ವಂಚಿತರಾದವರು ಪರ್ಯಾಯ ನಿವೇಶನಗಳಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಂತೆ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದೆ. ಆ ಮೂಲಕ ನ್ಯಾಯಾಲಯ ನಿವೇಶನ ಹಂಚಿಕೆಗಾಗಿ ಕಾಯುತ್ತಿರುವವರ ಪರವಾಗಿ ನಿಂತಿದೆ.
ಅರ್ಕಾವತಿ ಲೇಔಟ್ 7ನೇ ಬ್ಲಾಕ್‌ನಲ್ಲಿ ಬಿಡಿಎ ನಿವೇಶನ ಹೊಂದಿದ್ದ ಮಂಜುನಾಥ ರಾವ್, ಮಂಜುಳಾ ಆರ್.ಶೆಟ್ಟಿ ಮತ್ತು ಇಂದುಮತಿ ಬಾಬು ಶೇಖರ್ ಅವರು ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ಪರವಾಗಿ ಮಾರಾಟ ಪತ್ರಗಳನ್ನು ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಮಧ್ಯಂತರ ಆದೇಶ ನೀಡಿದೆ.

"ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಮೊದಲು ಬಗೆಹರಿಸಬೇಕು, ಹರಾಜು ಖರೀದಿದಾರರಾಗಿ ಹೊಸ ವ್ಯಕ್ತಿಗಳನ್ನು ಕರೆತರುವ ಬದಲು ಈಗಾಗಲೇ ನಿವೇಶನಗಳನ್ನು ಮಂಜೂರು ಮಾಡಿದವರಿಗೆ ನಿವೇಶನ ಹಂಚಿಕೆಗೆ ಆದ್ಯತೆ ನೀಡಬೇಕು. ಬಿಡಿಎಯು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಂತೆ ವರ್ತಿಸಿ, ಕಾರ್ನರ್ ಸೈಟ್‌ಗಳನ್ನು ಹರಾಜು ಮಾಡುವ ಮೂಲಕ ಲಾಭವನ್ನು ಹೆಚ್ಚಿಸಲು ಸಾಧ್ಯವಿಲ್ಲ'' ಎಂದು ಹೇಳಿರುವ ನ್ಯಾಯಪೀಠ ಮೊದಲು ಸದ್ಯ ನಿವೇಶನ ಹಂಚಿಕೆ ವ್ಯಾಜ್ಯಗಳನ್ನು ಪರಿಹರಿಸಲು ಸಹಾನುಭೂತಿ ಹೊಂದಿರಬೇಕು ಎಂದು ಬಿಡಿಎಗೆ ಆದೇಶಿಸಿದೆ.
"ಹಂಚಿಕೆದಾರರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಪರಿಹಾರಕ್ಕಾಗಿ ಬಾಕಿ ಉಳಿದಿರುವಾಗ ಮತ್ತು ಆ ಹಂಚಿಕೆದಾರರನ್ನು ಕಚೇರಿಯಿಂದ ಕಚೇರಿಗೆ ದಿನವೂ ಎಡತಾಕುತ್ತಿದ್ದಾರೆ ಮತ್ತು ವಿವಿಧ ಪರಿಹಾರಗಳನ್ನು ಕೋರಿ ಈ ನ್ಯಾಯಾಲಯವನ್ನು ಸಂಪರ್ಕಿಸುತ್ತಿರುವಾಗ, ಬಿಡಿಎ ಹೋಗಲು ಅನುಮತಿ ನೀಡಿದರೆ ಅದು ಯಾರಿಗೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ಮೊದಲು ನಿವೇಶನ ಹಂಚಿಕೆದಾರರಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವವರೆಗೆ ಮೂಲೆ ನಿವೇಶನಗಳನ್ನು ಹರಾಜು ಮಾಡಬಾರದು" ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ ನಿವೇಶನಗಳನ್ನು ಮೂರನೇ ವ್ಯಕ್ತಿಗಳಿಗೆ ಹರಾಜು ಹಾಕುವ ಬದಲು ನಿವೇಶನ ಹಂಚಿಕೆ ಮಾಡಬಹುದಾಗಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಅರ್ಜಿದಾರರಿಗೆ ನಿವೇಶನ ನೀಡುವ ಮುನ್ನ ಬಿಡಿಎ ಈ ಸಾಧ್ಯತೆಯನ್ನು ಪರಿಶೀಲಿಸಬೇಕಿದೆ ಎಂದರು.
ಅರ್ಜಿದಾರರು, ಬಿಡಿಎ ತಮಗೆ ಯಾವುದೇ ನೋಟಿಸ್ ನೀಡದೆ, ಬಡಾವಣೆಯ ಮರುವಿನ್ಯಾಸವನ್ನು ಉಲ್ಲೇಖಿಸಿ ರಸ್ತೆ ರಚನೆಗೆ ತಮ್ಮ ನಿವೇಶನಗಳನ್ನು ಬಳಸಿಕೊಂಡಿದ್ದು, ಈಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲು ಮುಂದಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ದ್ವಿತೀಯ ನಾಲಾ ಬಫರ್ ಝೋನ್‌ನಲ್ಲಿ ನಿವೇಶನಗಳನ್ನು ರೂಪಿಸಿದ ಗಂಭೀರ ಪ್ರಮಾದವನ್ನು ಮನಗಂಡ ಬಿಡಿಎ ತಾನಾಗಿಯೇ ಬಡಾವಣೆ ಯೋಜನೆ ಮಾರ್ಪಾಡು ಮಾಡಿ, ತಾನಾಗಿಯೇ ಅನುಮೋದನೆ ನೀಡಿ, ರಸ್ತೆ ನಿರ್ಮಿಸಿ ನಿವೇಶನಗಳನ್ನು ಅಳಿಸಿ, ಈಗ ಸುಮಾರು 35 ಕಿಲೋಮೀಟರ್ ದೂರದಲ್ಲಿ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲು ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
Recommended Video
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications