ಬಾಗ್ಮನೆ ಟೆಕ್ ಪಾರ್ಕ್ ಪ್ರಕರಣ: ಲೋಕಾಯುಕ್ತರ ಹಸ್ತಕ್ಷೇಪಕ್ಕೆ ಹೈಕೋರ್ಟ್ ತಪರಾಕಿ
ಬೆಂಗಳೂರು, ಸೆ.28. ರಾಜಕಾಲುವೆ ಒತ್ತುವರಿ ತೆರವು ಕುರಿತು ಹೈಕೋರ್ಟ್ ಆದೇಶವಿದ್ದರೂ ಸಹ ನಗರದ ಬಾಗ್ಮನೆ ಟೆಕ್ ಪಾರ್ಕ್ ಸಂಸ್ಥೆ ದೂರು ಆಧರಿಸಿ ಲೋಕಾಯುಕ್ತರು ಮಧ್ಯಪ್ರವೇಶ ಮಾಡಿರುವುದಕ್ಕೆ ಹೈಕೋರ್ಟ್, ಲೋಕಾಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ.
ಜತೆಗೆ ಒತ್ತುವರಿ ತೆರವು ಸಂಬಂಧ ಬಾಗ್ಮನೆ ಟೆಕ್ ದೂರು ಕುರಿತು ಲೋಕಾಯುಕ್ತರ ಮುಂದೆ ನಡೆಯುತ್ತಿರುವ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಈ ರೀತಿ ಹಸ್ತಕ್ಷೇಪವನ್ನು ಎಳ್ಳಷ್ಟೂ ಸಹಿಸುವುದಿಲ್ಲವೆಂದು ಪರೋಕ್ಷವಾಗಿ ಲೋಕಾಯುಕ್ತ ಸಂಸ್ಥೆಗೆ ಎಚ್ಚರಿಕೆ ನೀಡಿದೆ.
ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ''ರಾಜಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ ಸಹ ಲೋಕಾಯುಕ್ತರು ಈ ಪ್ರಕರಣದಲ್ಲಿಹಸ್ತಕ್ಷೇಒ ಮಾಡಿದ್ದಾರೆ. ಆ ಮೂಲಕ ಹೈಕೋರ್ಟ್ ಅಧಿಕಾರವನ್ನು ದುರ್ಬಲಗೊಳಿಸುವ ಅಥವಾ ಹತ್ತಿಕ್ಕುವ ಪ್ರಯತ್ನ ನಡೆಸಲಾಗಿದೆ. ನ್ಯಾಯಾಲಯಕ್ಕೆ ಸಮಾನಾಂತರ ಶಕ್ತಿ ರಚನೆಗೆ ಸಮನಾಗಿದೆ. ಹಾಗಾಗಿ ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು'', ಎಂದು ಕೋರಿದರು.
ಕಾಯಿದೆ ಮೀರಿ ಅಧಿಕಾರ ಚಲಾವಣೆ:
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮತ್ತು ನಿಯಮ ಮೀರಿ ಮಧ್ಯ ಪ್ರವೇಶಿಸಿದ್ದು ಏಕೆ? ಬಿಲ್ಡರ್ ಭಾನುವಾರದಂದು ಲೋಕಾಯುಕ್ತದ ಮೊರೆ ಹೋಗಿದ್ದಾರೆ. ಅಂದು ಒತ್ತುವರಿ ತೆರವಿಗೆ ತಡೆ ನೀಡಲಾಗಿದೆ, ಏನಾಗುತ್ತಿದೆ ಲೋಕಾಯುಕ್ತದಲ್ಲಿ ಎಂದು ಖಾರವಾಗಿ ಪ್ರಶ್ನಿಸಿತು.
ನ್ಯಾಯಾಲಯ ''ಲೋಕಾಯುಕ್ತ ಕಾಯಿದೆಯಡಿ ಒತ್ತುವರಿ ತೆರವಿಗೆ ತಡೆ ನೀಡುವ ಅಧಿಕಾರವಿದೆಯೇ? ಲೋಕಾಯುಕ್ತ ಕಚೇರಿಯೇ ಅಂತಹ ಆದೇಶ ನೀಡಬಹುದೇ? ಜನರು ಇನ್ನು ಕೋರ್ಟ್ ಬದಲು ಲೋಕಾಯುಕ್ತಕ್ಕೆ ಹೋಗಬಹುದಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿತು. ಈ ರೀತಿ ವ್ಯಾಪ್ತಿ ಮೀರಿದ ಆದೇಶ ನೀಡಲು ನಾವು ಅವಕಾಶ ನೀಡುವುದಿಲ್ಲ ಎಂದು ಹಂಗಾಮಿ ಸಿಜೆ, ಲೋಕಾಯುಕ್ತದಿಂದ ಸಮಾನಾಂತರ ವಿಚಾರಣೆಗೆ ತಡೆಯಾಜ್ಞೆ ಜಾರಿಗೊಳಿಸಿತು.
ಅರ್ಜಿದಾರರ ಆಕ್ಷೇಪ:
ಬಿಬಿಎಂಪಿಯು ಬಾಗ್ಮನೆ ಟೆಕ್‌ಪಾರ್ಕ್ ಬಳಿ ನಡೆದಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಗುರುತು ಮಾಡಿತ್ತು. ಈ ಸಂಬಂಧ ಸಂಸ್ಥೆ, ಲೋಕಾಯುಕ್ತರಿಗೆ ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿ ನೋಟಿಸ್ ಜಾರಿ ಮಾಡಿಲ್ಲಎಂದು ದೂರು ನೀಡಿತ್ತು. ಆ ಮನವಿ ಪರಿಗಣಿಸಿದ್ದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, 'ಧಿ'ರಾಜಕಾಲುವೆ ಮೇಲೆ ಅಳವಡಿಸಿರುವ ಚರಂಡಿ ತೆರೆವು ಮಾಡಿದರೆ ಪ್ರವಾಹದ ನೀರು ತುಂಬಿಕೊಳ್ಳಬಹುದು ಎಂಬ ಆತಂಕ ದೂರುದಾರರಲ್ಲಿದೆ.
ಇದರಿಂದ ಪ್ರಾಧಿಕಾರಗಳು ತಾರತಮ್ಯದಿಂದ ರಾಜಕಾಲುವೆ ಒತ್ತುವರಿ ತೆರವುಗೊಳಿಸಬಾರದು ಎಂದು ಮಧ್ಯಂತರ ಆದೇಶ ಮಾಡಿದ್ದರು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಲೋಕಾಯುಕ್ತ ನಡೆ ಕಾನೂನು ಬಾಹಿರ ಕ್ರಮ ಮತ್ತು ಈ ರೀತಿ ಕೋರ್ಟ್‌ನ ಮುಂದೆ ವಿಷಯ ಬಾಕಿ ಇದ್ದಾಗ ಲೋಕಾಯುಕ್ತರು ಪರಾರಯಯ ವಿಚಾರಣೆ ನಡೆಸುವುದು ಸರಿಯಲ್ಲಎಂದು ಆಕ್ಷೇಪ ಎತ್ತಿದ್ದರು.












Click it and Unblock the Notifications