ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸತಿ ಪ್ರದೇಶದಲ್ಲಿ ಕಮರ್ಷಿಯಲ್ ಚಟುವಟಿಕೆ; ಪಾಲಿಕೆಯಿಂದ ಸಮಗ್ರ ವರದಿ ಕೇಳಿದ ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಅ.21 ವಸತಿ ಪ್ರದೇಶದಲ್ಲಿ ಅನುಮತಿ ಇಲ್ಲದೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವವರಿಗೆ ಇಲ್ಲೊಂದು ಕೆಟ್ಟ ಸುದ್ದಿ ಇದೆ.

ಅದೆಂದರೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತು ಎಂಟು ವಾರಗಳಲ್ಲಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್, ಪಾಲಿಕೆಗೆ ನಿರ್ದೇಶನ ನೀಡಿದೆ.

ಹಾಗಾಗಿ ಈವರೆಗೆ ವಸತಿ ಪ್ರದೇಶದಲ್ಲಿ ಅನುಮತಿ ಇಲ್ಲದೆ ಆರಾಮಾಗಿ ಅಂಗಡಿ ಮುಂಗಟ್ಟು ಮಾಡಿಕೊಂಡು ವ್ಯಾಪಾರ ಮಾಡಿಕೊಂಡು ಆರಾಮಾಗಿರುವವರಿಗೆ ಕಾದಿದೆ ಸಂಕಷ್ಟ.

ನಗರದ ವಿಲ್ಸನ್ ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಿರ್ಬಂಧ ಕೋರಿ ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಲೆ ನೇತೃತ್ವದ ವಿಭಾಗೀಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

HC asked BBMP to submit comprehensive report on commercial activities in residential areas

ಹೈಕೋರ್ಟ್ ಸೂಚನೆ ಏನು? "ಜನವಸತಿ ಪ್ರದೇಶಗಳಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಪ್ರತ್ಯೇಕ ನಿಯಮಗಳಿವೆಯೇ ಅಥವಾ ಸಂಪೂರ್ಣ ನಿಷೇಧವಿದೆಯೇ ? ಷರತ್ತು ಬದ್ಧ ಅನುಮತಿ ನೀಡಲು ಅವಕಾಶವಿದೆಯೇ, ಒಂದು ವೇಳೆ ಷರತ್ತುಬದ್ಧ ಅನುಮತಿ ನೀಡಲು ಅವಕಾಶವಿದ್ದಲ್ಲಿ, ಯಾವೆಲ್ಲಷರತ್ತುಗಳನ್ನು ವಿಧಿಸಲಾಗುತ್ತದೆ" ಎಂದು ನ್ಯಾಯಪೀಠ ಕೇಳಿತು. '

ಅಲ್ಲದೆ, ಒಂದು ವೇಳೆ ಅಂತಹ ಷರತ್ತು ಉಲ್ಲಂಘಿಸಿದವರ ವಿರುದ್ಧ ಕಾಲ-ಕಾಲಕ್ಕೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗಿದೆಯೇ ಎಂಬ ಬಗ್ಗೆ ಎಂಟು ವಾರಗಳಲಿ ಸಮಗ್ರ ವರದಿ ಸಲ್ಲಿಸಬೇಕು" ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಅಲ್ಲದೆ, ವಿಲ್ಸನ್‌ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರ ವಿರುದ್ದ ಅದರಲ್ಲೂಮುಖ್ಯವಾಗಿ ಹೂವಿನ ವ್ಯಾಪಾರಿಗಳ ಕುರಿತು ಪರಿಶೀಲನೆ ನಡೆಸಿ ಬೆಂಗಳೂರ ದಕ್ಷಿಣದ ಚೀಫ್ ಇಂಜಿನಿಯರ್ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಆ ವರದಿ ಆಧರಿಸಿ ಏನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಮೂರು ವಾರಗಳಲ್ಲಿನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನ್ಯಾಯಾಲಯ ಸೂಚನೆ ನೀಡಿತು.

ಅರ್ಜಿದಾರರ ಸಂಕಷ್ಟವೇನು? ರಸ್ತೆಯಲ್ಲಿಯೇ ಅಂಗಡಿಗೆ ಸಂಬಂಧಿಸಿದ ವಸ್ತುಗಳನ್ನು ಹಾಕಲಾಗಿರುತ್ತದೆ. ತಡರಾತ್ರಿಯಾದರೂ ಮಳಿಗೆದಾರರು ಹಾಗೂ ಗ್ರಾಹಕರು ಇರುತ್ತಾರೆ. ಇದರಿಂದ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿಓಡಾಡುವುದು ಕಷ್ಟವಾಗಿದೆ. ಮಹಿಳೆಯರು ಹಾಗೂ ಯುವತಿಯರಿಗೆ ಸುರಕ್ಷತೆ ಇಲ್ಲವಾಗಿದೆ. ಆದ್ದರಿಂದ, ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲು ಮತ್ತು ಅವುಗಳ ತೆರವಿಗೆ ವಿಫಲರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿಕೋರಲಾಗಿದೆ.

"ರಸ್ತೆಗಳಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಅಲ್ಲಿ115 ಮಳಿಗೆಗಳಿದ್ದು, ಅವುಗಳಲ್ಲಿಎಂಟಕ್ಕೆ ಮಾತ್ರ ಬಿಬಿಎಂಪಿ ಅನುಮತಿ ನೀಡಿವೆ. ಇನ್ನೂ ರಸ್ತೆಯ ಎರಡೂ ಬದಿಗಳಲ್ಲಿಅನಧಿಕೃತವಾಗಿ ಹೂ ಹಾಗೂ ದ್ರಾಕ್ಷಿ ಅಂಗಡಿ, ಟ್ಯಾಕ್ಸಿ ಕಚೇರಿಗಳನ್ನು ತೆರೆಯಲಾಗಿದೆ. ಚಾಲಕರು ಟ್ಯಾಕ್ಸಿಗಳನ್ನು ಮನೆಗಳ ಮುಂದೆ ನಿಲ್ಲಿಸುತ್ತಿದ್ದಾರೆ. ಟ್ಯಾಕ್ಸಿಯಲ್ಲೇ ಮದ್ಯಪಾನ ಮಾಡುತ್ತಾ, ಇಸ್ಪೀಟು ಆಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಅರ್ಜಿದಾರರು ಅರೋಪಿಸಿದ್ದಾರೆ.

English summary
Karnataka High Court asked BBMP to submit comprehensive report on commercial activities in residential areas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X