ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೇತನ ತಾರತಮ್ಯ ಖಂಡಿಸಿ ಎಚ್ ಎಎಲ್ ನೌಕರರಿಂದ ಉಪವಾಸ ಸತ್ಯಾಗ್ರಹ

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಜೂನ್ 28: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಉದ್ಯೋಗಿಗಳು ಜೂನ್ ಇಪ್ಪತ್ತೈದರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇತರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಯಾವ ಪ್ರಮಾಣದಲ್ಲಿ ವೇತನ ನೀಡುತ್ತಿದ್ದಾರೋ ಅದೇ ಪ್ರಮಾಣದಲ್ಲಿ ಎಚ್ ಎಎಲ್ ಸಿಬ್ಬಂದಿಗೂ ದೊರೆಯಬೇಕು ಎಂಬುದು ಒತ್ತಾಯವಾಗಿದೆ.

ಐನೂರು ಸಿಬ್ಬಂದಿ ಧರಣಿ ನಡೆಸುತ್ತಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಏಳು ರಾಜ್ಯಗಳಲ್ಲಿ ಇರುವ, ಎಲ್ಲ ಒಂಬತ್ತು ಘಟಕಗಳ ಸ್ಕೇಲ್ ಐದರಿಂದ ಹನ್ನೊಂದರ ತನಕದ ಸಿಬ್ಬಂದಿ- ನೌಕರರ ಒಕ್ಕೂಟದ ಸದಸ್ಯರೂ ಆಗಿರುವ ಹದಿನೆಂಟು ಸಾವಿರ ಉದ್ಯೋಗಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇತಿಹಾಸದಲ್ಲೇ ಅತ್ಯಧಿಕ ವಹಿವಾಟು ನಡೆಸಿದ ಎಚ್ಎಎಲ್ಇತಿಹಾಸದಲ್ಲೇ ಅತ್ಯಧಿಕ ವಹಿವಾಟು ನಡೆಸಿದ ಎಚ್ಎಎಲ್

"ಎಲ್ಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಒಂದೇ ಪ್ರಮಾಣದ ವೇತನ ಹಾಗೂ ಸವಲತ್ತು ನೀಡಲಾಗುದೆ. ಆದರೆ ನಮಗೆ ಎಚ್ ಎಎಲ್ ಆ ಅನುಕೂಲವನ್ನು ನಿರಾಕರಿಸುತ್ತಿದೆ" ಎಂದು ಸಮಿತಿಯ ಪ್ರಧಾನ ಕಾಯದರ್ಶಿ ಸೂರ್ಯದೇವ್ ಚಂದ್ರಶೇಖರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

HAL employees rely hunger strike over alleged discrimination in pay hike

ಕಾರ್ಮಿಕರಿಗೂ ಚುಕ್ತಾ ಮಾಡುವುದು ನೈತಿಕ ಜವಾಬ್ದಾರಿ
ಅಧಿಕಾರಿಗಳಿಗೆ ನವೆಂಬರ್ 2017ರಲ್ಲೇ ಸವಲತ್ತು, ವೇತನಗಳನ್ನು ಚುಕ್ತಾ ಮಾಡಿದ್ದು, ಕಾರ್ಮಿಕರಿಗೂ ಅದೇ ರೀತಿಯಲ್ಲಿ ಚುಕ್ತಾ ಮಾಡುವುದು ಎಚ್ ಎಎಲ್ ನ ನೈತಿಕ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳಿಗೆ ಮೂಲ ವೇತನದಲ್ಲಿ 15% ಹೆಚ್ಚಳವಾಗಿದೆ. ಇನ್ನು ಸವಲತ್ತುಗಳು 35% ಏರಿಕೆ ಆಗಿದೆ.

ಆದರೆ, ಕಾರ್ಮಿಕರಿಗೆ ಹತ್ತು ಪರ್ಸೆಂಟ್ ಮೂಲ ವೇತನ ಹೆಚ್ಚಳ ಹಾಗೂ 18% ಸವಲತ್ತು ಹೆಚ್ಚಳದ ಪ್ರಸ್ತಾವ ಮಾಡಲಾಗಿದೆ. ಮೂಲವೇತನ ಹಾಗೂ ಇತರ ಸವಲತ್ತು ಸೇರಿ ಅಧಿಕಾರಿಗಳಿಗೆ ಹತ್ತರಿಂದ ನಲವತ್ತು ಪರ್ಸೆಂಟ್ ಏರಿಕೆ ಮಾಡಲಾಗಿದೆ. ಆದರೆ ಚೌಕಾಶಿ ನೆಪದಲ್ಲಿ ನಮ್ಮ ಸವಲತ್ತುಗಳಿಗೆ ಐವತ್ತು ಪರ್ಸೆಂಟ್ ಕತ್ತರಿ ಹಾಕುತ್ತಿದ್ದಾರೆ. ಇದೆಂಥ ಒಪ್ಪಂದ ಎಂದು ಸೂರ್ಯದೇವ್ ಪ್ರಶ್ನೆ ಮಾಡಿದ್ದಾರೆ.

16ನೇ ಎಲ್‌ಸಿಎ ತೇಜಸ್ ಯುದ್ಧ ವಿಮಾನ ನಿರ್ಮಾಣ ಪೂರ್ಣಗೊಳಿಸಿದ ಎಚ್‌ಎಎಲ್16ನೇ ಎಲ್‌ಸಿಎ ತೇಜಸ್ ಯುದ್ಧ ವಿಮಾನ ನಿರ್ಮಾಣ ಪೂರ್ಣಗೊಳಿಸಿದ ಎಚ್‌ಎಎಲ್

ಜುಲೈ ಎರಡನೇ ತಾರೀಕಿನ ತನಕ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಆನಂತರವೂ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ. ಜುಲೈ ಮೂರನೇ ತಾರೀಕಿನಂದು ಬೆಂಗಳೂರಿನಲ್ಲಿ ಇರುವ ಎಚ್ ಎಎಲ್ ಕಾರ್ಪೋರೇಟ್ ಕಚೇರಿಯಲ್ಲಿ ಘೇರಾವ್ ಮಾಡುತ್ತೇವೆ ಎಂದಿದ್ದಾರೆ.

HAL employees rely hunger strike over alleged discrimination in pay hike

ಪ್ರತಿಭಟನೆ ನ್ಯಾಯ ಸಮ್ಮತವಲ್ಲ: ಎಚ್ ಎಎಲ್
ಈ ಮಧ್ಯೆ ಎಚ್ ಎಎಲ್ ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನೆಯು 'ನ್ಯಾಯಸಮ್ಮತವಲ್ಲ' ಎಂದಿದೆ. ಈ ವರೆಗೆ ಒಂಬತ್ತು ಸುತ್ತಿನ ಮಾತುಕತೆ ನೌಕರರ ಒಕ್ಕೂಟದ ಜತೆ ಆಗಿದೆ. ಒಕ್ಕೂಟದ ಸಹಕಾರದಿಂದ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯ. ಅವರ ನಿರೀಕ್ಷೆಗಳು ವಾಸ್ತವದಿಂದ ಕೂಡಿರಬೇಕು ಹಾಗೂ ಈಡೇರಿಸಲು ಸಾಧ್ಯವಿರುವ ನಿರೀಕ್ಷೆ ಆಗಿರಬೇಕು ಎಂದು ಹೇಳಿದೆ.

ಅಧಿಕಾರಿಗಳಿಗೆ ಸಮವಾಗಿ ಅಥವಾ ಅದಕ್ಕಿಂತ ಹೆಚ್ಚು ವೇತನ ಹಾಗೂ ಸವಲತ್ತು ನೀಡಬೇಕು ಎಂಬುದು ಸಮರ್ಥನೀಯವಲ್ಲ. ಅಧಿಕಾರಿಗಳಿಗೆ ಜನವರಿ 1, 2017ರಿಂದ ವೇತನ ಪರಿಷ್ಕರಣೆ ಜಾರಿಯಾಗಿದೆ. ಅದ ಕೂಡ ಹತ್ತು ವರ್ಷಗಳ ನಂತರ. ಆದರೆ ಕಾರ್ಮಿಕರಿಗೆ ಐದು ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಜತೆಗೆ ಅಧಿಕಾರಿಗಳ ಮಟ್ಟದಲ್ಲಿ ಇರುವವರಿಗೆ ಇತರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಚ್ ಎಎಲ್ ಗಿಂತ ಹೆಚ್ಚಿನ ವೇತನ ಇದೆ ಎಂದು ಸಂಸ್ಥೆ ಹೇಳಿದೆ.

HAL employees rely hunger strike over alleged discrimination in pay hike

ಎಚ್ ಎಎಲ್ ನೀಡಿದ ಮಾಹಿತಿ ಸಂಪೂರ್ಣ ಸುಳ್ಳು: ಸೂರ್ಯದೇವ್
ಆದರೆ, ಎಚ್ ಎಎಲ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಸಂಪೂರ್ಣ ಸುಳ್ಳು. ಅದರಲ್ಲಿ ನೀಡಿರುವ ಮಾಹಿತಿ ಸುಳ್ಳು ಹಾಗೂ ಜನರನ್ನು ದಾರಿ ತಪ್ಪಿಸುವಂಥದ್ದು. ನಮ್ಮ ಬೇಡಿಕೆಗಳು ಸಂಪೂರ್ಣವಾಗಿ ಸಮರ್ಥನೀಯ ಹಾಗೂ ನಾವು ಯಾವುದನ್ನು ಹೇಳುತ್ತಿದ್ದೇವೆ ಅದು ನೂರು ಪರ್ಸೆಂಟ್ ಸತ್ಯ ಎಂದು ಸೂರ್ಯದೇವ್ ಹೇಳಿದ್ದಾರೆ.

ಏರೋ ಇಂಡಿಯಾ 2019: ಎಚ್‌ಎಎಲ್ ಈಗಲೂ ಮುಂಚೂಣಿಯಲ್ಲಿಏರೋ ಇಂಡಿಯಾ 2019: ಎಚ್‌ಎಎಲ್ ಈಗಲೂ ಮುಂಚೂಣಿಯಲ್ಲಿ

ಜುಲೈ ಮೂರನೇ ತಾರೀಕಿನಂದು ಟೋಕನ್ ಧರಣಿಗೆ ನೋಟಿಸ್ ನೀಡಲು ನಿರ್ಧರಿಸಿದೆ. ಸದ್ಯಕ್ಕೆ ತೀರ್ಮಾನ ಕೈಗೊಂಡಿರುವಂತೆ ಜುಲೈ ಹದಿನೆಂಟನೇ ತಾರೀಕು ಟೋಕನ್ ಧರಣಿ ನಡೆಸಲು ಎಚ್ ಎಎಲ್ ನೌಕರರ ಸಂಘ ನಿರ್ಧಾರ ಮಾಡಿದೆ.

English summary
Public sector undertaking Hindustan Aeronautic Limited employees rely hunger strike over alleged discrimination in pay hike. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X