ರಾಹುಲ್ ನೇತೃತ್ವದ ರಫೇಲ್ ಡೀಲ್ ಚರ್ಚೆಗೆ ಎಚ್‌ಎಎಲ್ ನಕಾರ

ಬೆಂಗಳೂರು, ಅಕ್ಟೋಬರ್ 11: ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ನೌಕರರ ಬಳಿ ನೇರ ಸಂವಾದ ನಡೆಸಲು ಮುಂದಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿನ್ನಡೆಯುಂಟಾಗಿದೆ. ಸಂವಾದ ಮಾಡಲು ಎಚ್‌ಎಎಲ್ ಅನುಮತಿ ನಿರಾಕರಿಸಿದೆ.

ಅಕ್ಟೋಬರ್ 13ರಂದು ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಆವರಣದಲ್ಲಿ ಅಲ್ಲಿನ ನೌಕರರ ಜತೆ ರಫೇಲ್ ಒಪ್ಪಂದ ಕುರಿತಂತೆ ರಾಹುಲ್ ಚರ್ಚೆ ನಡೆಸಲು ನಿರ್ಧರಿಸಲಾಗಿತ್ತು.
ಈ ಮಧ್ಯೆ ಬೆಂಗಳೂರಿನ ಎಚ್‌ಎಎಲ್ ಆವರಣದಲ್ಲೇ ರಫೇಲ್ ಡೀಲ್ ಒಪ್ಪಂದ ಕುರಿತಂತೆ ಸಂವಾದ ಏರ್ಪಡಿಸುವ ಮೂಲಕ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಲು ಮುಂದಾಗಿತ್ತು. ರಾಹುಲ್ ಬೆಂಗಳೂರು ಭೇಟಿ ವೇಳೆ ಹಳೆಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದು, ಮುಂಬರುವ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ಕುರಿತಂತೆಯೂ ಮಾತುಕತೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿರುವ ರಫೇಲ್ ಡೀಲ್ ಒಪ್ಪಂದಕ್ಕೆ ಮೂಲ ಕಾರಣವಾದ ಎಚ್‌ಎಎಲ್ ರದ್ದತಿ ಕುರಿತ ಸಂವಾದವನ್ನು ಎಚ್‌ಎಎಲ್ ಅಂಗಳದಲ್ಲೇ ನಡೆಸಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಎಚ್‌ಎಎಲ್ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.

HAL denies permission for Rahul event in its premises

ಅನುಮತಿ ನಿರಾಕರಣೆ ಹಿನ್ನೆಲೆ ಸೂಕ್ತ ಸ್ಥಳಕ್ಕೆ ರಾಜ್ಯ ಕಾಂಗ್ರೆಸ್ ಹುಡುಕಾಟ ನಡೆಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ಮಿನ್ಸ್ ಸ್ಕ್ವೇರ್ ನಲ್ಲಿ ಸಂವಾದ ನಡೆಸಲು ಚಿಂತನೆ ನಡೆಸಿದೆ. ಈ ಕುರಿತು ಪೊಲೀಸರ ಬಳಿ ಅನುಮತಿ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+