HAL To ISRO: ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಪೂರೈಕೆ
ಬೆಂಗಳೂರು,ನವೆಂಬರ್ 30: ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಇಸ್ರೋಗೆ ಅತಿ ದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್‌ನ್ನು ಪೂರೈಕೆ ಮಾಡಿದೆ.
ಒಪ್ಪಂದದಲ್ಲಿದ್ದ ಸಮಯಕ್ಕಿಂತ ಬಹುಬೇಗ ಪೂರೈಕೆ ಮಾಡಿದೆ. ಹೆಚ್ ಎಎಲ್ ಪ್ರಕಾರ, 89 ಘನ ಮೀಟರ್ ಪರಿಮಾಣದಲ್ಲಿ 5, 755 ಕೆಜಿ ಪ್ರೊಪೆಲ್ಲಂಟ್ ತುಂಬಲು 8 ಮೀಟರ್ ಉದ್ದದ ನಾಲ್ಕು ಮೀಟರ್ ವ್ಯಾಸದ ಟ್ಯಾಂಕ್ ಇದಾಗಿದೆ. ಕಠಿಣ ಗುಣಮಟ್ಟದ ಅವಶ್ಯಕತೆಗಳಿಗೆ ಅಲ್ಯೂಮಿನಿಯಂ ಮಿಶ್ರಲೋಹದ ಬೆಸುಗೆ ಹಾಕಿದ ಪ್ರೊಪೆಲ್ಲಂಟ್ ಟ್ಯಾಂಕ್‌ಗಳನ್ನು ತಯಾರಿಸಲು ಅಗತ್ಯವಾದ ಕೌಶಲ್ಯ ಮತ್ತು ತಂತ್ರಜ್ಞಾನಗಳನ್ನು ಎಚ್‌ಎಎಲ್ ಕರಗತ ಮಾಡಿಕೊಂಡಿದೆ ಎಂದು ಅದು ಹೇಳಿದೆ.
ಎಚ್ಎಎಲ್ , ಕಳೆದ ಐದು ದಶಕಗಳಿಂದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಇಸ್ರೋ ಜೊತೆ ಸಹಭಾಗಿತ್ವ ಹೊಂದಿದ್ದು, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ-ಎಂಕೆಐಐ ಮತ್ತು ಜಿಎಸ್‌ಎಲ್‌ವಿ-ಎಂಕೆ 3 ಉಡಾವಣಾ ವಾಹಕಗಳಿಗಾಗಿ ನಿರ್ಣಾಯಕ ರಚನೆಗಳು, ಟ್ಯಾಂಕೇಜ್ ಗಳು ಮತ್ತು ಸ್ಯಾಟಲೈಟ್ ರಚನೆಗಳನ್ನು ಪೂರೈಸಿದೆ ಎಂದು ಹೆಚ್ ಎಎಲ್ ತಿಳಿಸಿದೆ.

ಸಿ 32-ಎಲ್‌ಹೆಚ್ 2 ಟ್ಯಾಂಕ್ ಅಲ್ಯೂಮಿನಿಯಂ ಮಿಶ್ರಲೋಹದ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಆಗಿದ್ದು, ಜಿಎಸ್ ಎಲ್ ವಿ ಎಂಕೆ-3 ಉಡಾವಣಾ ವಾಹಕದ ಪೆಲೋಡ್ ಸಾಮರ್ಥ್ಯವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೆಚ್ ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications