ಸಮನ್ವಯ ಸಮಿತಿಗೆ ಸೇರ್ಪಡೆ ವಿಚಾರ: ಕಾದು ನೋಡೋಣ ಎಂದ ವಿಶ್ವನಾಥ್

ಬೆಂಗಳೂರು, ಸೆ.27: ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಆದ ನಂತರ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಸದಸ್ಯನಾಗಬೇಕಿತ್ತು. ಆದರೆ ಅಧ್ಯಕ್ಷ ಆಗಿಬಿಟ್ಟೆ ಎಂಬ ಕಾರಣಕ್ಕೆ ನಾನಾಗಿಯೇ ಹೋಗಿ ಸಮನ್ವಯ ಸಮಿತಿ ಸಭೆಯಲ್ಲಿ ಹೋಗಿ ಕುಳಿತುಕೊಳ್ಳಲು ಆಗವುದಿಲ್ಲ. ಹೀಗಾಗಿ ಸ್ವಲ್ಪ ಕಾದು ನೋಡಬೇಕು ಎಂದು ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯ ಸಮಿತಿಗೆ ಹೋಗಬೇಕೆಂಬ ಇಚ್ಛೆ ಇದೆ ಆದರೆ ರಾಜ್ಯಾಧ್ಯಕ್ಷರಾದ ತಕ್ಷಣ ಹೋಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಮುಂದೆ ನೋಡೋಣ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ಪಕ್ಷದಲ್ಲಿ ಆರೋಪ, ಪ್ರತ್ಯಾರೋಪಗಳು ಸಹಜ, ಇದು ಎಲ್ಲಾ ಪಕ್ಷಗಳಲ್ಲೂ ಇರುತ್ತೆ, ಪಂಚಾಯ್ತಿ ಮಟ್ಟದಿಂದ ಪಾರ್ಲಿಮೆಂಟ್ ವರೆಗೂ ಎಷ್ಟು ಜನ ಕ್ರಿಮಿನಲ್ ಹಿನ್ನೆಲೆಯವರಿಲ್ಲ ಹೇಳಿ, ಒಮ್ಮೊಮ್ಮೆ ರಾಜಕೀಯದಲ್ಲಿ ಇದೆಲ್ಲಾ ಆಗುತ್ತದೆ ಎಂದರು.

H.Vishwanath still hope to join coordination committee

ಜೆಡಿಎಸ್ ಎಂಎಲ್ ಸಿ ಅಭ್ಯರ್ಥಿಯಾಗಿ ರಮೇಶ್ ಗೌಡ ಆಯ್ಕೆ ವಿಚಾರ ಮಾತನಾಡಿ, ನಮ್ಮ ರಾಷ್ಟ್ರಾಧ್ಯಕ್ಷರು ಒಪ್ಪಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ, ಇದು ಮುಗಿದ ಅಧ್ಯಾಯ ದೊಡ್ಡವರು ಎಲ್ಲರ ಸಹಮತ ಪಡೆದು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+