ವೆಂಕಟೇಶ್ ಗೋಡ್ಖಿಂಡಿ ಅವರಿಗೆ ನಾದನಮನ ಜುಲೈ 23ಕ್ಕೆ
ಬೆಂಗಳೂರು, ಜುಲೈ, 22: ಕೊಳಲಿನ ನಾದದಿಂದ ಹಿಂದುಸ್ಥಾನಿ ಪರಂಪರೆಯನ್ನು ಸಂಗೀತ ಪ್ರಿಯರಿಗೆ ಹಂಚಿದ್ದ ದಿವಂಗತ ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥವಾಗಿ ಗುರುವಂದನೆ ಕಾರ್ಯಕ್ರಮವನ್ನು ಜುಲೈ, 23, ಶನಿವಾರ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ಅವರ್ ಸ್ಕೂಲ್ ನ ಶ್ರೀ ವಿದ್ಯಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೋಗ್ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಅವರ ಪುತ್ರ ಮಾಸ್ಟರ್ ಷಡ್ಜ ಗೋಡ್ಖಿಂಡಿ ಜೊತೆ ಜುಗಲ್‍ಬಂದಿ ಪ್ರಸ್ತುತ ಪಡಿಸಲಿದ್ದಾರೆ. ತಬಲಾದಲ್ಲಿ ವಿದ್ವಾನ್ ಕಿರಣ್ ಗೋಡ್ಖಿಂಡಿ ಸಹಕರಿಸಲಿದ್ದಾರೆ.

ಸಂಜೋಗ್ ನ ವಿದ್ಯಾರ್ಥಿಗಳು ಸಹ ಗುರುವಿಗೆ ಸಂಗೀತ ನಮನ ಸಲ್ಲಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.
* ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥ ಗುರುವಂದನೆ 2016
* ಸ್ಥಳ: ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ಅವರ್ ಸ್ಕೂಲ್ ನ ಶ್ರೀ ವಿದ್ಯಾ ಸಭಾಭವನ
* ಜುಲೈ, 23, ಶನಿವಾರ. ಮಧ್ಯಾಹ್ನ 4 ಗಂಟೆಗೆ ಆರಂಭ












Click it and Unblock the Notifications