ಪಿಎಸ್ಸೈ ಬಂಡೆ ಸಾವಿಗೆ ಕಾರಣವಾದ ಪಾತಕಿ ಇವನೇ

ಬೆಂಗಳೂರು, ಜ.15: ಇತ್ತ ಇಡೀ ನಾಡು ಬಂಡೆಯಂತಹ ದಿಟ್ಟೆದೆಯ ಅಧಿಕಾರಿಯನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವಾಗ ಆ ದಕ್ಷ ಅಧಿಕಾರಿಯ ಸಾವಿಗೆ ಕಾರಣವಾದ ಹೇತ್ಲಾಂಡಿ ಪಾತಕಿಯ (Munna Darbadar) ಬಗ್ಗೆ ಪತ್ರಿಕೆಯೊಂದು ಸಾಫ್ಟ್ ಧ್ವನಿಯಲ್ಲಿ ಹೇಳುತ್ತಾ ಅವನನ್ನು 'ಬ್ಯಾಂಕ್ ಕಳವು ಆರೋಪಿ' ಎಂದು ಬಿಂಬಿಸಿದೆ.

ಹಾಗಾದರೆ ಯಃಕಶ್ಚಿತ್ ಕಳವು ಆರೋಪಿಯ ಬಳಿ ಶಾರ್ಪ್ ವೆಪನ್ ಬಂದಿದ್ದಾದರೂ ಹೇಗೆ? ಪೊಲೀಸ್ ಅಧಿಕಾರಿಗಳನ್ನೇ point-blank rangeನಲ್ಲಿ ಉಡಾಯಿಸುವಷ್ಟು/ ಗಾಯಗೊಳಿಸುವಷ್ಟು ಶಾರ್ಪ್ ಶೂಟರ್ ಆಗಿದ್ದನೇ ಆ ಯಃಕಶ್ಚಿತ್ ಕಳವು ಆರೋಪಿ ಎಂಬ ಪ್ರಶ್ನೆಗಳು ಏಳುತ್ತವೆ. ಇರಲಿ ಈ ಪಾತಕಿಯ ಬಗ್ಗೆ ಒಂದಷ್ಟು ವಿವರ ಇಲ್ಲಿದೆ. ಪಾಯಿಂಟ್ ವೈಸ್...

Gulbarga PSI Mallikarjun Bande killer Munna Darbadar details
* Munna Darbadarನ ವಯಸ್ಸು 43 ವರ್ಷ. ಪತ್ನಿ ಗೌಸಿಯಾ ಬೇಗಂ. ದಂಪತಿಗೆ 3 ಪುತ್ರರು.
* ಮುಂಬೈ ಸೇರಿಕೊಂಡು ಅಲ್ಲಿನ ಭೂಗತ ಲೋಕದ ಜತೆ ನಂಟು ಹೊಂದಿದ್ದವ.
* ಭಾರತಕ್ಕೆ ಪೀಡೆಯಂತೆ ಬಾಧಿಸುತ್ತಿರುವ ಛೋಟಾ ರಾಜನ್ ನ ಬಂಟ.
* ಗುಲ್ಬರ್ಗಾದಲ್ಲಿ ಶೂಟ್ ಔಟ್ ಆಗಿದ್ದರೂ ಪಾತಕಿಯ ದಫನ್ ಮುಂಬೈನ ದಾದರ್ ನಲ್ಲಿ ನಡೆದಿತ್ತು.
* 13 ವರ್ಷಗಳ ಹಿಂದೆ ಗೌಸಿಯಾಳನ್ನು ನಿಖಾ ಆಗಿದ್ದವ ಗುಲ್ಬರ್ಗಾದಲ್ಲೇ ಸೆಟ್ಲ್ ಆಗಿದ್ದ.
* ಗುಲ್ಬರ್ಗಾದಲ್ಲಿದ್ದುಕೊಂಡೇ ಭೂಗತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಮಂಗಳೂರು ಪಾತಕಿ ರಶೀದ್ ಮಲಬಾರಿ ಜತೆ ಗುರುತಿಸಿಕೊಂಡಿದ್ದವ.
* ಹೆಸರಿಗಷ್ಟೇ ಬಟ್ಟೆ ವ್ಯಾಪಾರ ಮಾಡಿಕೊಂಡು ಆಟೋ ಓಡಿಸುತ್ತಿದ್ದ. ಹೆಚ್ಚಾಗಿ ಜನರ ಜತೆ ಗುರುತಿಸಿಕೊಳ್ಳುತ್ತಿರಲಿಲ್ಲ.
* ಗುಲ್ಬರ್ಗಾದ ಮುತ್ತೂಟ್ ಫೈನಾನ್ಸ್ ಕಂಪನಿಯ ಡಕಾಯಿತಿ ಪ್ರಕರಣದಲ್ಲಿ ಗುಲ್ಬರ್ಗಾ ನಗರ ಪೊಲೀಸರಿಗೂ ಬೇಕಾಗಿದ್ದವ.
* 13 ವರ್ಷಗಳ ಹಿಂದೆ ಗುಲ್ಬರ್ಗಾದಲ್ಲಿನ ಮನೆಯೊಂದಕ್ಕೆ ನುಗ್ಗಿದವ ಮಾಲೀಕನನ್ನು ಬೆದರಿಸಿ, ಬಲವಂತವಾಗಿ ತನ್ನ ಕಬ್ಜಾಗೆ ತೆಗೆದುಕೊಂಡಿದ್ದ.
* ಪತ್ರಿಕೆಗಳು ಅವನಿಗೆ Mumbai gangster ಹಣೆಪಟ್ಟಿ ಹಚ್ಚಿದ್ದವು.
* ಅವನ ಅಸಲಿ ಹೆಸರು ಸಯ್ಯದ್ ಮೊಹಮದ್ ಅಲಿಯಾಸ್ ಮುನ್ನಾ ದರ್ಬದಾರ್ ಅಲಿಯಾಸ್ ಮುನ್ನಾ ಶೂಟರ್.
* ಮುನ್ನಾ ವಿರುದ್ಧ ಮುಂಬೈ ಮತ್ತು ಗುಲ್ಬರ್ಗ ನಗರದಲ್ಲಿ 11 ಕೊಲೆ ಪ್ರಕರಣಗಳು ದಾಖಲಾಗಿವೆ.
* ಗುಲ್ಬರ್ಗ ನಗರದಲ್ಲಿ ರೋಜಾ ಪೊಲೀಸ್ ಸ್ಟೇಸನ್ ವ್ಯಾಪ್ತಿಗೆ ಬರುವ ಛೋಟಾ ದೇವಡಿ ಪ್ರದೇಶದಲ್ಲಿ ಖದೀಮ ಮುನ್ನಾ ದರ್ಬದಾರ್ ನನ್ನು ಹಿಡಿಯಲು PSIಗಳಾದ ಬಂಡೆ, ಮುರಳಿ, ASI ಉದ್ದಂಡಪ್ಪ ಜತೆಗೆ 15 ಪೇದೆಗಳು ಬುಧವಾರ ಮಧ್ಯಾಹ್ನ (ಜ. 8) ಮನೆಯೊಂದಕ್ಕೆ ನುಗ್ಗುತ್ತಾರೆ.

ಮನೆಯಲ್ಲಿದ್ದವರು ಪೊಲೀಸರನ್ನು ಹೌಹಾರುತ್ತಾರೆ. ಅಪಾಯದ ಸುಳಿವರಿತ ಪಾತಕಿ ಮುನ್ನಾ ಅಲ್ಲಿಂದ ಹಾರುತ್ತಾನೆ. ಬೆಂಬಿಡದ ಪೊಲೀಸರು ಅನತಿ ದೂರದಲ್ಲೇ ಅವನ ಸುತ್ತುವರಿಯುತ್ತಾರೆ. ಪೊಲೀಸರು ಅವನನ್ನು ಜೀವಂತವಾಗಿ ಹಿಡಿಯಲು ಮುಂದಾಗುತ್ತಾರೆ. ಆದರೆ ಅವನು ಪೊಲೀಸರ ಮೇಲೆ ಗುಂಡಿನ ಮಳೆಗರೆಯುತ್ತಾನೆ. ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಳ್ಳುತ್ತಾರೆ. ಆದರೆ ಪಾತಕಿಯನ್ನು ಗುಂಡಿಟ್ಟು ಸಾಯಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಸಮರದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಬಂಡೆ ಇಂದು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+