ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

GST: ವ್ಯಾಪಾರಿಗಳನ್ನು ಕಾಡುವ 5 ಪ್ರಮುಖ ಪ್ರಶ್ನೆಗಳು ಮತ್ತು ಉತ್ತರ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 30: ಜಿಎಸ್ಟಿ ನಾಳೆಯಿಂದ (ಜುಲೈ 1) ಜಾರಿಗೆ ಬರುತ್ತಿದೆ. ಎಲ್ಲಾ ಕ್ಷೇತ್ರಗಳಂತೆ ಜಿಎಸ್ಟಿ ವ್ಯಾಪಾರಿಗಳ ಮೇಲೆಯೂ ಪರಿಣಾಮ ಬೀರಲಿದೆ. ಇಂಥಹ ಸಂದರ್ಭದಲ್ಲಿ ವ್ಯಾಪಾರಿಗಳ ಅನುಮಾನಗಳನ್ನು ನಿವಾರಿಸುವ ಕೆಲಸಕ್ಕೆ 'ಜಿಎಸ್ಟಿ' ಮುಂದಾಗಿದೆ.

ಜಿಎಸ್ ಟಿ ರೂವಾರಿ ನವೀನ್ ಕುಮಾರ್ ಬಗ್ಗೆ ತಿಳಿಯಿರಿಜಿಎಸ್ ಟಿ ರೂವಾರಿ ನವೀನ್ ಕುಮಾರ್ ಬಗ್ಗೆ ತಿಳಿಯಿರಿ

ವ್ಯಾಪಾರಿಗಳು ದಿನ ನಿತ್ಯದ ವ್ಯಾಪಾರದಲ್ಲಿ ಎದುರಾಗಬಹುದಾದ ಸಾಮಾನ್ಯ ಪ್ರಶ್ನೆಗಳಿಗೆ ಜಿಎಸ್ಟಿ ಕಡೆಯಿಂದ ಉತ್ತರಗಳನ್ನು ನೀಡಲಾಗಿದೆ. ವ್ಯಾಪಾರಿಗಳು ಕೇಳುವ ಪ್ರಶ್ನೆಗಳು ಮತ್ತು ಅದಕ್ಕೆ ಜಿಎಸ್ಟಿ ನೀಡಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ

ವ್ಯಾಪಾರಿಗಳಿಗೆ ತಮ್ಮ ಗೊಂದಲ ನಿವಾರಣೆಗೆ ಇದು ಸಹಾಯಕ್ಕೆ ಬರಬಹುದು ಒಮ್ಮೆ ನೋಡಿ.

1. ಒಂದೇ ಅಂಗಡಿಯಲ್ಲಿ ಗ್ರಾಹಕರೊಬ್ಬರಿಗೆ ತೆರಿಗೆ ವ್ಯಾಪ್ತಿಗೆ ಬರುವ ಮತ್ತು ಬರದ ವಸ್ತುಗಳ್ನು ಮಾರಲಾಗುತ್ತದೆ. ಈ ಸಂದರ್ಭದಲ್ಲಿ ತೆರಿಗೆಯ ಬಿಲ್ ಮತ್ತು ಬಿಲ್ ಬೇರೆ ಬೇರೆಯಾಗಿ ನೀಡಬೇಕಾ?

ಉತ್ತರ: ಇಂಥಹ ಸಂದರ್ಭದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಉತ್ಪನ್ನಗಳ ಮೇಲೆ ತೆರಿಗೆಯ ಬಿಲ್ ನೀಡಬಹುದು ಮತ್ತು ಅದೇ ಬಿಲ್ ನಲ್ಲಿ ತೆರಿಗೆಯೇತರ ಉತ್ಪನ್ನಗಳ ಬಿಲ್ ಕೂಡಾ ಸೇರಿಸಬಹುದು.

2. ನೋಂದಣಿಯಾಗದ ಡೀಲರ್ ಗಳಿಗೆ ಉತ್ಪನ್ನಗಳನ್ನು ಮಾರುವಾಗ ನೋಂದಣಿಯಾದ ಮಧ್ಯವರ್ತಿಗಳು ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ದಾಖಲು ಮಾಡಿಕೊಳ್ಳಬೇಕಾ?

ಉತ್ತರ: ಜಿಎಸ್ಟಿ ಅಡಿಯಲ್ಲಿ ಗ್ರಾಹಕರ ಆಧಾರ್ ಮತ್ತು ಪ್ಯಾನ್ ತೆಗೆದುಕೊಳ್ಳುವ ಯಾವ ಅಗತ್ಯವೂ ಇಲ್ಲ.

3. ಮಾರಾಟದ ವೇಳೆ ಸಾರಿಗೆ, ಪ್ಯಾಕಿಂಗ್ ವೆಚ್ಚಗಳನ್ನು ಮಾರಾಟದ ಬಿಲ್ ನಲ್ಲಿ ತೋರಿಸಿದರೆ ಅದರ ಮೇಲೆ ಜಿಎಸ್ಟಿ ತೆರಿಗೆ ಬೀಳುತ್ತದಾ? ಇದನ್ನು ಬಿಲ್ ನಲ್ಲಿ ನಮೂದು ಮಾಡುವುದು ಹೇಗೆ?

ಉತ್ತರ: ಎಲ್ಲಾ ವೆಚ್ಚಗಳನ್ನೂ ಒಟ್ಟು ಮೊತ್ತದಲ್ಲಿ ತೋರಿಸಬೇಕು ಮತ್ತು ಅವುಗಳ ಆಧಾರದ ಮೇಲೆ ತೆರಿಗೆಯ ಬಿಲ್ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಸಿಜಿಎಸ್ಟಿಯ ಸೆಕ್ಷನ್ 15 ಮತ್ತು ಇನ್ ವಾಯ್ಸ್ ನಿಯಮಗಳನ್ನು ನೋಡಬಹುದು.

4. ಕಟ್ಟಡ ನಿರ್ಮಾಣಕ್ಕೆ ಬಳಸುವ ಸಲಕರಣೆಗಳನ್ನು ಡೆಲಿವರಿ ಚಲನ್ ಮೂಲಕ ಸ್ಥಳಕ್ಕೆ ತಲುಪಿಸಿ ಕೆಲಸ ಮುಗಿದ ಮೇಲೆ ತೆರಿಗೆ ಬಿಲ್ ನೀಡಬಹುದಾ?

ಉತ್ತರ: ಯಾವುದೇ ಸರಕುಗಳನ್ನು ನಿರ್ಮಾಣಕ್ಕೆ ಬಳಸುತ್ತಿದ್ದರೆ ಅದಕ್ಕೆ ಬಿಲ್ ನೀಡಲೇಬೇಕು. ಒಂದೊಮ್ಮೆ ನಿರ್ಮಾಣಕ್ಕಾಗಿ ಉಪಕರಣಗಳನ್ನು ಮಾತ್ರ ಬಳಸುತ್ತಿದ್ದರೆ ಅದಕ್ಕೆ ಡೆಲಿವರಿ ಚಲನ್ ನೀಡಬೇಕು.

5. ಜಿಎಸ್ಟಿಯಲ್ಲಿ ಈ ರೀತಿಯ ವರ್ಗಾವಣೆಗಳಾದರೆ ಏನು ಮಾಡುವುದು?

a. ಡೆಲಿವರಿ ಮಾಡಿದ ವಸ್ತುಗಳು ಕಡಿಮೆ ಆದರೆ?

b. ಡೆಲಿವರಿ ಮಾಡಲು ಹೋದಾಗ ಗ್ರಾಹಕರು ಕಡಿಮೆ ತೆಗೆದುಕೊಂಡು, ಕಡಿಮೆ ಬಿಲ್ ಪಾವತಿಸಿದರೆ?

ಉತ್ತರ: ಇಂಥಹ ಸಂದರ್ಭಗಳಲ್ಲಿ ಗ್ರಾಹಕರು ಪಾವತಿಸಿದ ಬಿಲ್ ಗಳನ್ನು ಇಟ್ಟುಕೊಳ್ಳಬೇಕು ಜತೆಗೆ ತೆಗೆದುಕೊಳ್ಳದೇ ಇರುವುದನ್ನು ಸರಿ ಮಾಡಿಕೊಂಡರೆ ಆಯಿತು.

English summary
Goods and Service Tax: Here are the some of the frequently asked question by sellers and answers to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X