ಮಾಜಿ ಪ್ರೇಯಸಿಯಿಂದ ಬ್ಲಾಕ್‌ಮೇಲ್: ಟ್ರಾಫಿಕ್ ನಡುವೆ ಹೆಂಡತಿ ಬಿಟ್ಟು ಓಡಿಹೋದ ನವವಿವಾಹಿತ!
"ನಾನು ಅಷ್ಟು ಭರವಸೆ ನೀಡಿದರೂ ಕೂಡ ಅವರು ಏಕೆ ಓಡಿಹೋದರೆಂದು ನನಗೆ ತಿಳಿದಿಲ್ಲ" ಎಂದು ಹೆಂಡತಿ ಸಂಕಟ ತೋಡಿಕೊಂಡಿದ್ದಾರೆ.
ಬೆಂಗಳೂರು, ಮಾರ್ಚ್ 09: ಮದುವೆಯಾಗಿ ಕೆಲವೇ ದಿನಗಳಲ್ಲಿ ಮದುಮಗ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಜಿ ಪ್ರೇಯಸಿಯಿಂದ ಬ್ಲಾಕ್‌ಮೇಲ್‌ಗೆ ಒಳಗಾಗುತ್ತಿದ್ದ ಮದುಮಗ, ಟ್ರಾಫಿಕ್ ಜಾಮ್ ಆಗಿದ್ದ ವೇಲೆ ಕಾರಿನಿಂದ ಇಳಿದು ಹೆಂಡತಿಯನ್ನು ಬಿಟ್ಟು ಓಡಿಹೋಗಿದ್ದಾರೆ.
26 ವರ್ಷದ ವ್ಯಕ್ತಿಯೊಬ್ಬರು ಫೆಬ್ರವರಿ 15 ರಂದು ಮದುವೆಯಾಗಿದ್ದರು. ಕೆಲ ದಿನಗಳ ನಂತರ ಚರ್ಚ್‌ನಿಂದ ಮನೆಗೆ ವಾಪಸ್ ಬರುವಾಗ ಟ್ರಾಫಿಕ್‌ನಲ್ಲಿ ಕಾರು ನಿಂತ ವೇಳೆ ತಪ್ಪಿಸಿಕೊಂಡಿದ್ದಾರೆ. ಮಾಜಿ ಪ್ರೇಯಸಿ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ವಿಷಯ ಪತ್ನಿಗೂ ತಿಳಿದಿತ್ತು. ಆಕೆಯೂ ಬೆಂಬಲವಾಗಿ ನಿಲ್ಲುವುದಾಗಿ ಮಾತು ನೀಡಿದ್ದರೂ ಅವರು ನಾಪತ್ತೆಯಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಭಾನುವಾರ ಮಾರ್ಚ್ 5 ರಂದು ಆ ವ್ಯಕ್ತಿಯ 22 ವರ್ಷದ ಪತ್ನಿ ಮಹದೇವಪುರ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಕಾಣೆಯಾದ ದೂರನ್ನು ದಾಖಲಿಸಿಕೊಂಡು ವ್ಯಕ್ತಿಯನ್ನು ಹುಡುಕಲು ತನಿಖೆ ಪ್ರಾರಂಭಿಸಿದ್ದಾರೆ. ಆದರೆ, ಇದುವರೆಗೆ ಆ ವ್ಯಕ್ತಿ ಪತ್ತೆಯಾಗಿಲ್ಲ. ತನ್ನ ಪತಿ ಬಿಬಿಎ ಪದವೀಧರರಾಗಿದ್ದು, ಕರ್ನಾಟಕ ಮತ್ತು ಗೋವಾದಲ್ಲಿ ಉದ್ಯೋಗಿಗಳ ಏಜೆನ್ಸಿಯನ್ನು ನಡೆಸುವ ತನ್ನ ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ಮಾಜಿ ಪ್ರೇಮಿ ಗೋವಾದ ಕಂಪನಿಯ ಉದ್ಯೋಗಿ ಎಂದು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 15 ರಂದು ಆ ವ್ಯಕ್ತಿ ತನ್ನನ್ನು ವಿವಾಹವಾದರು. ಅವನು ಖಿನ್ನತೆಯಲ್ಲಿದ್ದಾಗ ಏನಾಯಿತು ಎಂದು ಕೇಳಿದಕ್ಕೆ, ಗೋವಾದಲ್ಲಿ ನೆಲೆಸಿರುವ ತನ್ನ ಮಾಜಿ ಪ್ರೇಮಿಯಿಂದ ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ತಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೆಂಡತಿ ಭರವಸೆ ನೀಡಿ, ಬ್ಲಾಕ್‌ಮೇಲ್‌ಗೆ ಒಳಗಾದ ಅವರ ಸಂಕಟವನ್ನು ಕುಟುಂಬದ ಇತರ ಸದಸ್ಯರಿಗೆ ತಿಳಿಸಿದ್ದಾರೆ. ಅವರೆಲ್ಲರೂ ಅವನೊಂದಿಗೆ ನಿಲ್ಲಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಮಾರ್ಚ್ 5 ರಂದು ಮಧ್ಯಾಹ್ನ 2.15 ರ ಸುಮಾರಿಗೆ ಪತಿ ಮತ್ತು ಪತ್ನಿ ಚರ್ಚ್‌ನಿಂದ ಹಿಂದಿರುಗಿದಾಗ ಪೈ ಲೇಔಟ್ ಬಳಿ ಅವರ ವಾಹನ ಟ್ರಾಫಿಕ್‌ನಲ್ಲಿ ಸಿಲುಕಿತ್ತು. ಇದ್ದಕ್ಕಿದ್ದಂತೆ, ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ, ಬಾಗಿಲು ತೆರೆದು ಓಡಿಹೋದನು. ಪತ್ನಿ ಕೂಡ ಕಾರಿನಿಂದ ಹೊರಬಂದು ಆತನನ್ನು ಹಿಂಬಾಲಿಸಿದರೂ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ.
"ನಾನು ಅಷ್ಟು ಭರವಸೆ ನೀಡಿದರೂ ಕೂಡ ಅವರು ಏಕೆ ಓಡಿಹೋದರೆಂದು ನನಗೆ ತಿಳಿದಿಲ್ಲ" ಎಂದು ಹೆಂಡತಿ ಸಂಕಟ ತೋಡಿಕೊಂಡಿದ್ದಾರೆ. "ಅವರು ತಮ್ಮ ಮೊಬೈಲ್ ಫೋನ್ ಅನ್ನು ಕಾರಿನೊಳಗೆ ಬಿಟ್ಟು ಹೋಗಿದ್ದಾರೆ ಮತ್ತು ನಾವು ಈಗಾಗಲೇ ಅವರ ಸ್ನೇಹಿತರು ಮತ್ತು ಇತರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದೇವೆ. ಅವರು ಯಾರ ಬಳಿಗೂ ಹೋಗಿಲ್ಲ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications