ಆಂಬ್ಯುಲೆನ್ಸ್‌ಗಳಿಗೆ ಇನ್ನು ಸಿಗ್ನಲ್ ಫ್ರೀ ವ್ಯವಸ್ಥೆ

ಬೆಂಗಳೂರು, ನ.12 : ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆ­ಯಿಂದ ಜೀವಂತ ಹೃದಯವನ್ನು ಚೆನ್ನೈಗೆ ಸಾಗಿಸಲು ವಿಮಾನ ನಿಲ್ದಾಣದ ತನಕ ಆಂಬ್ಯುಲೆನ್ಸ್‌ಗೆ ಗ್ರೀನ್ ಕಾರಿಡಾರ್ ಮೂಲಕ ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಿದ್ದು ನೆನಪಿರಬಹುದು. ನಗರದಲ್ಲಿ ಆಂಬ್ಯುಲೆನ್ಸ್‌ ಮತ್ತು ಅಗ್ನಿ ಶಾಮಕ ವಾಹನಗಳಿಗೆ ಇಂತಹ ಕಾರಿಡಾರ್ ವ್ಯವಸ್ಥೆ ನಿರ್ಮಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಬಿ.ದಯಾನಂದ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಪಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ಮತ್ತು ಬೆಂಕಿ ಅನಾಹುತಗಳು ಸಂಭವಿಸಿದಾಗ ಶೀಘ್ರ ನೆರವಿಗೆ ಧಾವಿಸಲು ಈ ಸಿಗ್ನಲ್‌ ಮುಕ್ತ ವ್ಯವಸ್ಥೆಯಿಂದ ಸಾಧ್ಯ­ವಾಗಲಿದೆ ಎಂದರು. [ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಹೃದಯ]

ambulance

ಪ್ರಾಯೋಗಿಕವಾಗಿ ನಗರದಲ್ಲಿರುವ 353 ಸಿಗ್ನಲ್‌ಗಳಲ್ಲಿ ಅತ್ಯಾಧುನಿಕ ಸೆನ್ಸರ್‌ ಅಳವಡಿಸಲಾಗುತ್ತದೆ. ಆಂಬ್ಯುಲೆನ್ಸ್‌ ಮತ್ತು ಅಗ್ನಿಶಾಮಕ ವಾಹನ­ಗಳು ಬಂದಾಗ ಸ್ವಯಂಚಾಲಿತವಾಗಿ ಹಸಿರು ದೀಪ ಹೊತ್ತಿ­ಕೊಳ್ಳಲಿದ್ದು, ಸಿಗ್ನಲ್ ಮುಕ್ತವಾಗಲಿದೆ ಎಂದು ಮಾಹಿತಿ ನೀಡಿದರು. [ಇವರು ಸಿವಿ ರಾಮನ್‌ ನಗರದ ಸಿಂಗಂ ]

ಸುಮಾರು 75 ಕೋಟಿ ವೆಚ್ಚದಲ್ಲಿ ಈ ಯೋಜನೆ ತಯಾರಿಸಲಾಗಿದೆ. ಸೆನ್ಸರ್‌ ಆಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ನಡೆಯು­ತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಎಲ್ಲ ಟ್ರಾಫಿಕ್‌ ಸಿಗ್ನಲ್‌­ಗಳಲ್ಲಿ ಸೆನ್ಸರ್‌ ಅಳವಡಿಕೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ದಯಾನಂದ ಹೇಳಿದರು.

ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ­ಯಿಂದ ಜೀವಂತ ಹೃದಯವನ್ನು ಚೆನ್ನೈಗೆ ಸಾಗಿಸಲು ವಿಮಾನ ನಿಲ್ದಾಣಕ್ಕೆ ಸಿಗ್ನಲ್ ಮುಕ್ತ ವ್ಯವಸ್ಥೆ ಮಾಡಲಾಗಿತ್ತು. ಕೇವಲ 40 ನಿಮಿಷಗಳಲ್ಲಿ ಹೃದಯವನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿತ್ತು ಇದು ಗ್ರೀನ್ ಕಾರಿಡಾರ್ ಸಹಾಯದಿಂದ ಸಾಧ್ಯವಾಯಿತು.

ಕಾರ್ಲ್‌ಟನ್‌ ಬೆಂಕಿ ಅನಾಹುತ ಪ್ರಕರಣದಲ್ಲಿಯೂ ಅಗ್ನಿಶಾಮಕ ಠಾಣೆಯಿಂದ ವಾಹನ­ಗಳು ಬರಲು ತಡವಾಗಿತ್ತು. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಯಿತು. ಇಂತಹ ಪ್ರಕರಣಗಳು ನಡೆದಾಗ ಗ್ರೀನ್ ಕಾರಿಡಾರ್ ಸಹಾಯಕವಾಗಿದೆ ಎಂದು ಆಯುಕ್ತರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+