ಬೆಂಗಳೂರು ಪಾಲಿಕೆಗೆ ತಮಿಳು, ತೆಲುಗು & ಮಲಯಾಳಿ ಮೇಯರ್ ಬರುವ ಸಮಯ!

ಬೆಂಗಳೂರಿನಲ್ಲಿ ಈಗಾಗಲೇ ಪರಭಾಷಿಕರ ಹಾವಳಿ ಹೆಚ್ಚಾಗಿದೆ. ಕನ್ನಡ ಮಾತನಾಡುವವರ ಹಾಗೂ ಕನ್ನಡ ಬಳಸುವವರ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನುವ ಆತಂಕ ಇದೆ. ಇದರ ನಡುವೆ ಬೆಂಗಳೂರನ್ನು ಏಳು ವಿಭಜನೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡಿದ್ದು. ಇದರಿಂದ ಬೆಂಗಳೂರಿನಲ್ಲಿ ಇಷ್ಟರಲ್ಲೇ ತಮಿಳು, ಮಲಯಾಳಿ ಹಾಗೂ ತೆಲುಗು ಮೇಯರ್‌ಗಳು ಬರುವ ಕಾಲ ದೂರವಿಲ್ಲ ಎಂದೇ ಹೇಳಲಾಗುತ್ತಿದೆ. ಹೌದು ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಬೆಂಗಳೂರಿನ ಕೆಲವೊಂದು ನಿರ್ದಿಷ್ಟ ಭಾಗದಲ್ಲಿ ಕೆಲವು ಭಾಷಿಕರ ಸಂಖ್ಯೆ ಹೆಚ್ಚಾಗಿ ಇದೆ. ಇದೀಗ 7 ಭಾಗಗಳಾಗಿ / 5ಕ್ಕೂ ಹೆಚ್ಚು ಪಾಲಿಕೆಗಳನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ಬೇರೆ ಭಾಷೆಯವರೇ ಬೆಂಗಳೂರಿನಲ್ಲಿ ಮೇಯರ್‌ ಆಗಲಿದ್ದಾರೆ ಎನ್ನುತ್ತಿದ್ದಾರೆ ಕನ್ನಡಿಗರು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ತಂದು ಬೆಂಗಳೂರು ಪಾಲಿಕೆಯನ್ನು ವಿಭಜನೆ ಮಾಡುವ ಅಥವಾ ಹೊಸ ಪಾಲಿಕೆಗಳನ್ನು ರಚನೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ. ಹೊಸ ಮಾದರಿಯನ್ನು ರಾಜ್ಯ ಬಿಜೆಪಿಯು ತೀವ್ರವಾಗಿ ಖಂಡಿಸಿದೆ. ಇದರ ಹೊರತಾಗಿಯೂ ಬೆಂಗಳೂರಿನ ವಿಭಜನೆ ವಿಷಯ ಇದೇ ಬಜೆಟ್‌ ಸಂದರ್ಭದಲ್ಲಿ ಮಂಡನೆಯಾಗಿ ಚರ್ಚೆಯಾಗಲಿದೆ.

Greater Bengaluru Tamil Telugu and Malayalam Mayor for Bengaluru Corporation

ಬೆಂಗಳೂರು ವಿಭಜನೆಗೆ ಕನ್ನಡಿಗರ ವಿರೋಧ!

ಇನ್ನು ಈಗ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿ 7 ಪಾಲಿಕೆಗಳನ್ನು ರಚನೆ ಮಾಡುವುದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪಾಲಿಕೆಯನ್ನು ಏಳು ಭಾಗಗಳಾಗಿ ವಿಭಜನೆ ಮಾಡಿದರೆ ಒಂದೊಂದು ಪಾಲಿಕೆಗೂ ಒಬ್ಬೊಬ್ಬರು ಪರಭಾಷಿಕರು ಮೇಯರ್‌ ಆಗಿ ಆಯ್ಕೆಯಾಗಲಿದ್ದಾರೆ. ಇದರಿಂದ ಕನ್ನಡಿಗರು ಬೆಂಗಳೂರಿನಲ್ಲಿ ಇನ್ನಷ್ಟು ಕಡೆಗಣೆನೆಗೆ ಒಳಗಾಗಲಿದ್ದಾರೆ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Federal Bangalore soon? Bangalore= Union of Municipalities. ಬೆಂಗಳೂರು ಮಹಾನಗರಗಳ ಒಕ್ಕೂಟ 🤷 ಆಗಲಿದೆಯೇ ಎಂದು @Neonteal1 ಎನ್ನುವ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ. ಅರುಣ್‌ ಜಾವಗಲ್‌ ಎನ್ನುವವರು ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ. ಬೆಂಗಳೂರಿನ ರಾಜಕೀಯದ ಮೇಲೆ ಕನ್ನಡಿಗರ ಹಿಡಿತ ಕಡಿಮೆ ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ ಅವರು ಸಹ ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವಿಭಜನೆ ಕನ್ನಡಿಗರ ಬಲಗುಂದಿಸುವ ನಿರ್ಧಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗ್ರೇಟರ್ ಬೆಂಗಳೂರಿನಲ್ಲಿ ಇರುವ ಪ್ರಮುಖ ಶಿಫಾರಸ್ಸುಗಳೇನು

* ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಭಾಗಗಳಾಗಿ ವಿಭಜನೆ ಮಾಡುವುದು.

* ಈ ರೀತಿ ವಿಭಜನೆಯಾಗುವ ಪಾಲಿಕೆಗಳಿಗೆ ಪ್ರತಿ ಪಾಲಿಕೆಗೂ 100ರಿಂದ 125 ವಾರ್ಡ್‌ಗಳನ್ನು ರಚನೆ ಮಾಡುವುದು. ಆದರೆ ಈ ರೀತಿ ರಚನೆ ಮಾಡುವ ನಿರ್ಧಾರವನ್ನು ಸರ್ಕಾರಕ್ಕೆ ಬಿಡಲಾಗಿದೆ.

* ಈಗ ಮೇಯರ್ ಅವಧಿಯು 1 ವರ್ಷ ಇದೆ. ಇನ್ಮುಂದೆ ಪಾಲಿಕೆಗಳ ಮೇಯರ್ ಅವಧಿಯು 30 ತಿಂಗಳು ಆಗಲಿದೆ / ಮಾಡಲು ಶಿಫಾರಸ್ಸು ಮಾಡಲಾಗಿದೆ.

* ಗ್ರೇಟರ್ ಬೆಂಗಳೂರು ಜಾರಿಯಿಂದ ಬೆಸ್ಕಾಂ, ಜಲಮಂಡಳಿ, ಮೆಟ್ರೋ ಹಾಗೂ ಬಿಬಿಎಂಪಿ ನಡುವೆ ಸಮನ್ವಯತೆ.

* ಗ್ರೇಟರ್ ಬೆಂಗಳೂರು ಅಥಾರಿಟಿಯಿಂದ ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಬೇಕು.

* ಪ್ರತಿ ಮೂರು ತಿಂಗಳಿಗೆ ಒಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ನಿರ್ಧಾರ.

* ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಪಶ್ಚಿಮ ಇರಲಿದೆ.

* ಹೊಸ ಪಾಲಿಕೆಗಳಿಗೆ ಬೇರೆ ಜಿಲ್ಲೆಗಳನ್ನು ಸೇರಿಸುವುದಿಲ್ಲ.

* ಕೆಎಂಸಿ ಕಾಯ್ದೆ ಪ್ರಕಾರವೇ ಹೊಸ ಪಾಲಿಕೆ ರಚನೆಯಾಗಲಿದೆ.

* ಪಾಲಿಕೆ ಸಮೀದಲ್ಲಿರುವ ಅಭಿವೃದ್ಧಿ ಆಗಿರುವ ಗ್ರಾಮಗಳನ್ನು ಸೇರಿಸುವುದಕ್ಕೆ ಇದರಲ್ಲಿ ಅವಕಾಶವಿದೆ.

* ಜೂನ್ 30ರ ಒಳಗಾಗಿ ವಾರ್ಡ್‌ಗಳ ಗಡಿ ಗುರುತಿಸಲು ಶಿಫಾರಸ್ಸು.

* ಪ್ರತಿ ಪಾಲಿಕೆಯ ಇಂಟ್ರನಲ್ ಆಡಿಟ್. ಭ್ರಷ್ಟಾಚಾರ ಕಡಿವಾಣಕ್ಕೆ ವಿಜಿಲಿನ್ಸ್ ಸ್ಥಾಪನೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+