ಇ - ಖಾತಾ ಮಹತ್ವದ ಹೊಸ ಅಪ್ಡೇಟ್ಸ್‌ ಕೊಟ್ಟ ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಇ - ಖಾತಾಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಇ ಖಾತಾ ಪಡೆಯುವುದರಲ್ಲಿ ಸಮಸ್ಯೆ ಆಗುತ್ತಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಹತ್ವದ ಅಪ್ಡೇಟ್ಸ್‌ ನೀಡಿದೆ.

ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಇ - ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಫಿಪೊ(First In - First Out) ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ / ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇ-ಖಾತ (eKhata)ಗಾಗಿ ವಿಶೇಷ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಅದರ ದೂರವಾಣಿ ಸಂಖ್ಯೆ 94806 83695 ಆಗಿದೆ. ದಯವಿಟ್ಟು ನಿಮ್ಮ ಸಮಸ್ಯೆಯನ್ನು ಅಲ್ಲಿ ನೋಂದಾಯಿಸಿ. ಆತಂಕಪಡಬೇಕಾಗಿಲ್ಲ, ಪ್ರತಿದಿನವೂ ಫಾಲೋಅಪ್ ಮಾಡಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Greater Bengaluru Authority has given important new updates to e-Khata

ಇ ಖಾತಾಗೆ ಸಂಬಂಧಿಸಿದ ಪ್ರತಿ ಪ್ರಕರಣವನ್ನು ಸಹಾಯ ತಂತ್ರಾಂಶದ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ / ಬೆಂಗಳೂರು ನಗರ ಪಾಲಿಕೆಯ ಆಂತರಿಕ ದೂರುಗಳ ಟ್ರ್ಯಾಕಿಂಗ್ ವ್ಯವಸ್ಥೆ ಮೂಲಕ ಸಂಬಂಧಿಸಿದ ಎಆರ್‌ಒ / ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

ಪ್ರತಿ ದಿನ ಬೆಳಿಗ್ಗೆ, ಬಂದಿರುವಂತಹ ಎಲ್ಲಾ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುವಂತೆ ಖಚಿತಪಡಿಸಿಕೊಳ್ಳಲು, ವಿಶೇಷ ಆಯುಕ್ತರು ಸ್ವತಃ ಎಲ್ಲಾ 64 ಸಹಾಯಕ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡುತ್ತೇನೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.

ಅರ್ಜಿಗಳು ಸ್ವೀಕರಿಸಿದ ಕ್ರಮದಲ್ಲೇ ಇತ್ಯರ್ಥವಾಗುವಂತೆ ಫಿಪೊ (First In - First Out) ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದೆ. ದಯವಿಟ್ಟು ವ್ಯವಸ್ಥೆಯ ಮೂಲಕವೇ ಮತ್ತು ಇ-ಖಾತಾ ಹೆಲ್ಪ್‌ ಲೈನ್ ಮೂಲಕವೇ ಕಾರ್ಯನಿರ್ವಹಿಸಿ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1. ಯಾವುದೇ ಜಿಬಿಎ ಅಥವಾ ನಗರ ನಿಗಮದ ಕಚೇರಿಗಳಿಗೆ ಭೇಟಿ ನೀಡಬೇಡಿ.

2. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ.

3. ಸಮಸ್ಯೆ ಇದ್ದಲ್ಲಿ ಇ-ಖಾತಾ ಹೆಲ್ಪ್‌ಲೈನ್ 94806 83695 ಗೆ ದೂರು ದಾಖಲಿಸಿ.

ಅದರ ನಂತರ ಸ್ವಲ್ಪ ಸಮಯ ಕಾಯಿರಿ - ನಿಮ್ಮ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುತ್ತದೆ.

ನಂತರ ನೀವು

1. ಹೆಲ್ಪ್‌ಲೈನ್ ಮೂಲಕ ಅನುಸರಣೆ ಮಾಡಬಹುದು ಅಥವಾ

2. ನಿಮ್ಮ ಇ-ಖಾತಾ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು:

https://bbmpeaasthi.karnataka.gov.in/citizen_core/Final_eKhatha_Status_based_on_ePID

3. FAQs (ಪದೇಪದೇ ಕೇಳುವ ಪ್ರಶ್ನೆಗಳು) ನೋಡಲು:

https://bbmpeaasthi.karnataka.gov.in/subpage.html? sid=U2FsdGVkX1%2BWw3w1xmXXcdfXaKbwZgDi%2FzpquzY0OdM%3D

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+