HD Revanna: ಜೈಲು ಪಾಲಾಗಿದ್ದ ಎಚ್.ಡಿ.ರೇವಣ್ಣಗೆ ಜಾಮೀನು ಮಂಜೂರು
HD Revanna: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನದಲ್ಲಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಮೇ 13) ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ 5 ಲಕ್ಷ ಬಾಂಡ್, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್ ಸುಧೀರ್ಘವಾಗಿ ವಿಚಾರಣೆ ನಡೆಸಿದ್ದು, ವಿಶೇಷ ತನಿಖಾ ತಂಡ ಪರ ವಕೀಲರು ರೇವಣ್ಣ ಪ್ರಭಾವಿ ಆಗಿದ್ದು, ಸಾಕ್ಷ್ಯ ನಾಶ ಮಾಡುವ ಆತಂಕವಿದೆ. ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದ್ದರು.
ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಜಾಮೀನು ತಿರಸ್ಕರಿಸಬಹುದು. ಆದರೆ ನನ್ನ ಕಕ್ಷಿದಾರ ಎಚ್.ಡಿ.ರೇವಣ್ಣ ಪ್ರಕರಣದಲ್ಲಿ ಇಲ್ಲಿ ಯಾವುದೇ ಸತ್ಯ ಮತ್ತು ಸಂದರ್ಭಿಕ ಸಾಕ್ಷಿಗಳು ಇಲ್ಲ. ಇನ್ನು ರೇವಣ್ಣ ಅವರ ಮನೆಯಲ್ಲಿ ಮಹಿಳೆ 10 ವರ್ಷ ಕೆಲಸ ಮಾಡಿದ್ದಾರೆ. ಆದ್ದರಿಂದ ಯಾವುದೇ ಅಪಹರಣ ಮಾಡಿಲ್ಲ. ಜಾಮೀನು ನೀಡಬಹುದು ಎಂದು ವಕೀಲ ನಾಗೇಶ್ ವಾದ ಮಂಡಿಸಿದ್ದರು.
ಜಿ.ಟಿ.ದೇವೇಗೌಡ ಹೇಳಿದ್ಮದೇನು?: ತ್ಪತೊಂದೆಡೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡ ಅವರು, ಜೈಲಿಗೆ ಬಂದು ಎಚ್.ಡಿ.ರೇವಣ್ಣ ಅವರ ಆರೋಗ್ಯವನ್ನು ವಿಚಾರಿಸಬೇಕೆಂದು ಮೂರು ದಿನಗಳಿಂದ ಅಂದುಕೊಂಡಿದ್ದೆ. ಭಾನುವಾರ ಬಿಡಲ್ಲ ಎಂದು ಹೇಳಿದ್ದರು.
ಆದ್ದರಿಂದ ಇಂದು ಅನುಮತಿ ಪಡೆದುಕೊಂಡು ರೇವಣ್ಣ ಅವರನ್ನು ಭೇಟಿಯಾದೆ. ಇಬ್ಬರು ಚಹಾ ಕುಡಿದು, ಸ್ಮಾಲ್ಪ ಹೊತ್ತು ಮಾತನಾಡಿದೆವು. ಈ ವೇಳೆ ಅವರು ಹಳೆಯ ಕಥೆಯೆಲ್ಲ ಹೇಳಿದರು. ಇವತ್ತು ಕೂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೇ ಚಿಂತೆ ಮಾಡುತ್ತಿದ್ದಾರೆ ಅಂತಾ ಹೇಳಿದರು.












Click it and Unblock the Notifications