ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿದ್ದ ಭೂಮಿ ವಾಪಸ್?
ಬೆಂಗಳೂರು, ಜನವರಿ 02 : ರಾಷ್ಟ್ರೋತ್ಥಾನ ಪರಿಷತ್ ಮತ್ತು ಮಿಥಿಕ್ ಸೊಸೈಟಿಗೆ ನೀಡಿರುವ ಭೂಮಿ ವಾಪಸ್ ಪಡೆಯುವ ಸರ್ಕಾರದ ನಿರ್ಧಾರ ವಿರೋಧಕ್ಕೆ ಕಾರಣವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಭೂಮಿಯನ್ನು ನೀಡಿತ್ತು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, 'ಸಂಸ್ಥೆಗಳು ನೀಡಿದ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸಲು ವಿಫಲವಾಗಿವೆ. ಆದ್ದರಿಂದ, ಅದನ್ನು ವಾಪಸ್ ಪಡೆಯುತ್ತೇವೆ' ಎಂದು ಹೇಳಿದ್ದಾರೆ.
'ಬೆಂಗಳೂರಿನ ಥಣಿಸಂದ್ರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿದ 10 ಎಕರೆ ಭೂಮಿಯನ್ನು ವಾಪಸ್ ನೀಡುವಂತೆ ನೋಟಿಸ್ ನೀಡಲಾಗಿದೆ. ಮಿಥಿಕ್ ಸೊಸೈಟಿಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯಲಾಗಿದೆ' ಎಂದು ಸಚಿವರು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಾಷ್ಟ್ರೋತ್ಥಾನ ಪರಿಷತ್‌ಗೆ ಥಣಿಸಂದ್ರದಲ್ಲಿ 10 ಎಕರೆ ಭೂಮಿಯನ್ನು ವರ್ಷಕ್ಕೆ 1 ಲಕ್ಷ ರೂ. ಆಧಾರದ ಮೇಲೆ 30 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು.
ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಯಲಹಂಕದಲ್ಲಿ 10 ಎಕರೆ ಭೂಮಿಯನ್ನು ಮಿಥಿಕ್ ಸೊಸೈಟಿಗೆ ನೀಡಲಾಗಿತ್ತು. ಈ ಭೂಮಿ ಗೋಮಾಳದ ಜಾಗ ಎಂಬುದು ವಿವಾದಕ್ಕೆ ಕಾರಣವಾಗಿತ್ತು.
ಸರ್ಕಾರ ನೀಡಿದ ಜಾಗವನ್ನು ನಿಗದಿತ ಉದ್ದೇಶಕ್ಕೆ ಬಳಸುತ್ತಿಲ್ಲ ಎಂದು ಹೇಳಿರುವ ಸರ್ಕಾರ ಅದನ್ನು ವಾಪಸ್ ಪಡೆಯಲು ಹೊರಟಿದೆ. ಆದರೆ, ಇದು ದ್ವೇಷದ ರಾಜಕಾರಣ ಎಂದು ಆರೋಪಿಸಲಾಗುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದೆ.













Click it and Unblock the Notifications