ಬೆಂಗಳೂರು: ಸ್ಯಾಂಕಿ ರಸ್ತೆ ವಿಸ್ತರಣೆ, ಮೇಲ್ಸೇತುವೆ ಯೋಜನೆ: ಪರಿಸರವಾದಿಗಳಿಗೆ ಜಯ?
ಬಿಬಿಎಂಪಿ ಸೇರಿದಂತೆ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿತ ರಸ್ತೆ ಹಾಗೂ ಮೇಲ್ಸೇತುವೆ ಯೋಜನೆಯನ್ನು ರಾಜ್ಯ ಸರ್ಕಾರ ಸಭೆ ನಡೆಸಿದ ಕೈ ಬಿಡುವ ಸಾಧ್ಯತೆ ಇದೆ. ಏನಾಯಿತು ಪ್ರಕರಣ?, ಮೌನ ಮುರಿದು ಶಾಸಕರು ಹೇಳಿದ್ದೇನು?
ಬೆಂಗಳೂರು, ಜನವರಿ 10: ಬಿಬಿಎಂಪಿ ಸೇರಿದಂತೆ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿತ ರಸ್ತೆ ಹಾಗೂ ಮೇಲ್ಸೇತುವೆ ಯೋಜನೆಯನ್ನು ರಾಜ್ಯ ಸರ್ಕಾರ ಸಭೆ ನಡೆಸಿದ ಕೈ ಬಿಡುವ ಸಾಧ್ಯತೆ ಇದೆ.
ನಗರದಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಸಂಬಂಧ ಮಲ್ಲೇಶ್ವರಂ ವ್ಯಾಪ್ತಿಯ ಸ್ಯಾಂಕಿ ರಸ್ತೆ ಅಗಲೀಕರಣ ಹಾಗೂ ಇದೇ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಈ ಸಂಬಂಧ ಪೂರ್ಣವಾಗಿ ಬೆಳೆದು ನಿಂತ ಸಾಕಷ್ಟು ಮರಗಳ ಮಾರಣಹೋಮಕ್ಕೆ ನಿರ್ಧರಿಸಲಾಗಿತ್ತು.
ಕೆಲವು ವರ್ಷಗಳಿಂದಲೂ ಮೇಲ್ಲೆಶ್ವರಂ ಭಾಗದ ಜನರು, ಪರಿಸರ ಪ್ರೇಮಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ಆನ್ಲೈನ್ ಅಭಿಯಾನ ನಡೆಸಿದ್ದರು. ಯೋಜನೆಗೆ ಸಾಕಷ್ಟು ವಿರೋಧ ಕೇಳಿ ಬರುತ್ತಲೇ ಇದ್ದವು. ಈ ಸಂಬಂದ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮಧ್ಯಸ್ಥಗಾರರೊಂದಿಗೆ ಸಭೆ ನಡೆಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು.

ಇದರ ಬೆನ್ನಲ್ಲೇ ಸ್ಥಳೀಯ ನಿವಾಸಿಗಳ ಆಗ್ರಹಕ್ಕೆ ಮೌನ ಮುರಿದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು, ಇಲ್ಲಿನ ಜನರ ಆಶಯಕ್ಕೆ ವಿರುದ್ಧವಾಗಿ ನಮ್ಮ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ನಂತರದ ಬೆಳವಣಿಗೆ ಪರಿಗಣಿಸಿದರೆ ಯೋಜನೆ ಅನುಷ್ಠಾನ ಕೈ ಬಿಡಲು ಸರ್ಕಾರ ತಿರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಂಕಿ ರಸ್ತೆ ಯೋಜನೆ ಸಂಬಂಧ ಸರ್ಕಾರವು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ (BMLTA) ಮುಂದೆ ಪ್ರಸ್ತಾವನೆ ಒಯ್ಯಲಿದೆ. ನಂತರ ಅಲ್ಲಿ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ ಬಳಿಕವೇ ಯೋಜನೆ ಕೈ ಬಿಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.
ಮೇಲ್ಸೇತುವೆ ಯೋಜನೆಯ ಪ್ರಸ್ತಾವನೆಯನ್ನು ನಾನು ಮಾಡಿಲ್ಲ. ಹೈಕೋರ್ಟ್ ನಿರ್ದೇಶನದಂತೆ ನಡೆದುಕೊಳ್ಳಲು ಪಾಲಿಕೆಗೆ ತಿಳಿಸಿದ್ದೆ. ರಸ್ತೆಯ ಅಗಲೀಕರಣ ಆದರೆ ಅಧಿಕಾರಿಗಳು ಮೇಲ್ಸೇತುವೆಯನ್ನು ಅಗಲೀಕರಣದ ಪ್ರಸ್ತಾವನೆಗೆ ಸೇರಿಸಿದರು. ಇದು ಸಮಸ್ಯೆ, ಆಕ್ಷೇಪಣೆಗೆ ಕಾರಣವಾಯಿತು. ಬಿಬಿಎಂಪಿ ಅಧಿಕಾರಿಗಳೇ ಈ ಸಮಸ್ಯೆ ಪರಿಹರಿಸುತ್ತಾರೆಂದು ನಾನು ಮಧ್ಯಪ್ರವೇಶಿಸಲಿಲ್ಲ ಎಂದು ತಿಳಿಸಿದರು.

ಮಕ್ಕಳಿಂದ ಸಿಎಂಗೆ ಅಂಚೆ ಕಾರ್ಡ್ ಮನವಿ
2011ರಲ್ಲಿ ನ್ಯಾ.ಎನ್.ಕುಮಾರ್ ಹಾಗೂ ನ್ಯಾ. ಎಚ್.ಎಸ್.ಕೆಂಪಣ್ಣ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಸ್ಯಾಂಕಿ ರಸ್ತೆಯನ್ನು 12 ತಿಂಗಳೊಳಗೆ ವಿಸ್ತರಿಸಲು ಆದೇಶಿಸಿತು. ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯಡಿ ಸೂಚಿಸಿದ ಕಾರ್ಯವಿಧಾನ ಅನುಸರಿಸಲು ಪಾಲಿಕೆಗೆ ನಿರ್ದೇಶಿಸಿತು.
ಯೋಜನೆಯ ಡಿಪಿಆರ್ ಪ್ರಕಾರ ಮಲ್ಲೇಶ್ವರಂ 6ನೇ ಅಡ್ಡರಸ್ತೆಯಿಂದ ಭಾಷ್ಯಂ ವೃತ್ತದ ಬಳಿವರೆಗೆ 560 ಮೀಟರ್ ವ್ಯಾಪಿಸಿರುವ ನಾಲ್ಕುಲೇನ್ ದ್ವಿ ಪತ ಮೇಲ್ಸೇತುವೆ (ಗ್ರೇಡ್ ಸಪರೇಟರ್) ಜೊತೆಗೆ ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆಯನ್ನು ಮಲ್ಲೇಶ್ವರಂ ಕಡೆಗೆ ವಿಸ್ತರಿಸಲಾಗುವುದು. ಈ ಯೋಜನೆಗೆ 60 ಕೋಟಿ ರೂ. ವೆಚ್ಚವಾಗಬಹದು ಎಂದು ಬಿಬಿಎಂಪಿ ಅಂದಾಜಿಸಿತ್ತು. ಇದರ ವಿರುದ್ಧ ಸ್ಥಳಿಯರು ಸಿಟಿಜನ್ ಫಾರ್ ಸ್ಯಾಂಕಿ ಎಂಬ ಬ್ಯಾನರ್ ಅಡಿ ಸಮಾಲೋಚನೆ ನಡೆಸಿದರು. ಮಕ್ಕಳು ಸಿಎಂಗೆ ಅಂಚೆ ಕಾರ್ಡ್ ಅಭಿಯಾನ ನಡೆಸಿ ಮನವಿ ಮಾಡಿದರು. ಪರಿಸರವಾದಿಗಳು ಆಕ್ಷೇಪಿಸಿದ್ದರು.












Click it and Unblock the Notifications