ಬಿಡಿಎ ಕಚೇರಿಯ 25 ಭ್ರಷ್ಟ ಅಧಿಕಾರಿಗಳ‌ ಮೇಲೆ ಎಫ್​ಐಆರ್ ದಾಖಲಿಸಲು ರಾಜ್ಯ ಸರ್ಕಾರದ ಅನುಮತಿ

ಬೆಂಗಳೂರು, ಜ.27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೇಲೆ ಇತ್ತೀಚೆಗೆ ನಡೆದಿದ್ದ ಎಸಿಬಿ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಭ್ರಷ್ಟ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಲು ಕೊನೆಗೂ ಅನುಮತಿ ನೀಡಿದೆ.

ನಕಲಿ ದಾಖಲೆ ಸೃಷ್ಟಿಸಿ ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಬಳಿಸಿದ್ದ ಆರೋಪದ ಮೇಲೆ 40 ಎಫ್‌ಐಆರ್‌ಗಳನ್ನು ದಾಖಲಿಸಲು ಎಸಿಬಿ ಸರ್ಕಾರದ ಬಳಿ ಅನುಮತಿ ಕೋರಿತ್ತು. ಈ ಸಂಬಂಧ 25 ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಲು ನಗರಾಭಿವೃದ್ದಿ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಇದರಿಂದ ಭ್ರಷ್ಟ ಅಧಿಕಾರಿಗಳಿಗೆ ಬಂಧನದ ಭೀತಿ ಎದುರಾಗಿದೆ.

ಕೆಲ ದಿನಗಳ ಹಿಂದೆ ಬಿಡಿಎ ಕಚೇರಿ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳೂ ನಿರಂತರ ಮೂರು ದಿನ ಕಡತಗಳ ಪರಿಶೀಲನೆ ಮಾಡಿದ್ದರು. ದಾಳಿ ವೇಳೆ ಸುಮಾರು 200 ಕೋಟಿಗೂ ಅಧಿಕ ಅವ್ಯವಹಾರ ಪತ್ತೆಯಾಗಿತ್ತು. ಸದ್ಯ ಬೇರೆ ಬೇರೆ ಕಡೆ ವರ್ಗಾವಣೆಯಾಗಿರುವ ಅಧಿಕಾರಿಗಳು ಸೇರಿದಂತೆ ಕೆಎಸ್ಎ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಎಫ್​ಡಿಎ ಅಧಿಕಾರಿಗಳ ಸೇರಿ 25 ಭ್ರಷ್ಟ ಅಧಿಕಾರಿಗಳ ಮೇಲೆ ಎಫ್​ಐಆರ್ ದಾಖಲಾಗುವ ಸಾಧ್ಯತೆಯಿದೆ.

Govt give permission to file FIR against 25 BDA officials for fraud in online plot sale

ನಕಲಿ ದಾಖಲಾತಿ ಸೃಷ್ಟಿಸಿ ಅರ್ಹರಲ್ಲದವರಿಗೆ ಸೈಟ್ ಮಂಜೂರು, ಒಂದೇ ಸೈಟ್ ಇಬ್ಬರಿಗೂ ಮಂಜೂರು ಮಾಡಿರುವುದು ಸೇರಿದಂತೆ ಹಲವು ಆಕ್ರಮಗಳು ದಾಳಿ ವೇಳೆ ಪತ್ತೆಯಾಗಿದ್ದವು. ಎಸಿಬಿ ಅಧಿಕಾರಿಗಳು ರೂ.100 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಭಾರೀ ಭ್ರಷ್ಟಾಚಾರಕ್ಕಾಗಿ ಅಕ್ರಮವಾಗಿ ಭೂ ದಾಖಲೆಗಳನ್ನು ತಿರುಚಿ, ನಕಲಿ ದಾಖಲಾತಿಗಳ ಸೃಷ್ಟಿಸಿರುವುದರಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ತೊಡಗಿಸಿಕೊಂಡಿರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದರು.

ಅಲ್ಲದೇ, ಒಂದೇ ನಿವೇಶನವನ್ನು ಅನೇಕ ಜನರಿಗೆ ಹಂಚಿಕೆ ಮಾಡಿ, ತದನಂತರ ಅವರನ್ನು ಕೋರ್ಟ್‌ಗೆ ಹೋಗುವಂತೆ ಹೇಳಲಾಗಿದೆ. ಉಪ ಕಾರ್ಯದರ್ಶಿಗಳ ಕಚೇರಿ, ವಿಶೇಷ ಭೂಸ್ವಾಧೀನ ಮತ್ತಿತರರ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಒಂದೇ ಆಸ್ತಿಯಲ್ಲಿ ವಿವಿಧ ವ್ಯಕ್ತಿಗಳಿಗೆ ದಾಖಲೆ ನೀಡಿರುವುದು ಪತ್ತೆಯಾಗಿದೆ. ಕೆ.ಆರ್. ಪುರಂನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ 35 ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದ್ದವು. ಅಕಾರ್ವತಿ ಲೇಔಟ್, ಕೆಂಪೇಗೌಡ ಲೇಔಟ್, ಚಂದ್ರ ಲೇಔಟ್ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಬಿಡಿಎ ನಿವೇಶನ ಹಂಚಿಕೆ ಮಾಡಿರುವುದನ್ನು ಕೂಡಾ ಅಧಿಕಾರಿಗಳು ಪತ್ತೆ ಮಾಡಲಾಗಿತ್ತು.

ಜಮೀನು ಮಂಜೂರು ಅಕ್ರಮ, ಅಧಿಕಾರಿಗಳಿಂದ ಲಂಚಕ್ಕಾಗಿ ಬೇಡಿಕೆ ಸೇರಿದಂತೆ ವಿವಿಧ ದೂರುಗಳ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಸಂಘವೊಂದಕ್ಕೆ 34 ಸೈಟ್ ಮಂಜೂರು ಮಾಡಿರುರುವುದು ಬೆಳಕಿಗೆ ಬಂದಿದೆ.

Govt give permission to file FIR against 25 BDA officials for fraud in online plot sale

ನಗರದ ಪೂರ್ವ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಇರುವ ಅಸೊಶಿಯೇಷನ್‌ಗೆ ಅರ್ಹತೆ ಇಲ್ಲದಿದ್ದರೂ 34 ನಿವೇಶನಗಳ ಹಂಚಿಕೆ ಮಾಡಲಾಗಿದೆ. ಇದರಿಂದ ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಒಂದೇ ನಿವೇಶನವನ್ನು ಇಬ್ಬರಿಗೆ ಮಂಜೂರು ಮಾಡಿರುವ ಅಕ್ರಮ ಸಹ ಪತ್ತೆಯಾಗಿದ್ದವು. ಎಸಿಬಿಗೆ ಸೈಟ್ ವಿಚಾರದ ಕುರಿತು ದೂರುಗಳು ಬಂದಿದ್ದವು. ಸೈಟ್ ಹಂಚಿಕೆಯಲ್ಲಿ ಅಕ್ರಮ, ಕ್ರಯ ಪತ್ರ ನೀಡಲು ಲಂಚ, ನಾಲ್ಕು ವರ್ಷಗಳಿಂದ ಅಲೆದಾಡಿದರೂ ದಾಖಲೆ ನೀಡದೆ ಕಿರಿಕಿರಿ, ಕಾರ್ನರ್ ಸೈಟ್ ವಿಚಾರವಾಗಿ ಹಲವು ತಕರಾರು ಸೇರಿದಂತೆ ವಿವಿಧ ದೂರಗಳ ಹಿನ್ನಲೆ ದಾಳಿ ಮಾಡಲಾಗಿತ್ತು. ದಾಳಿಯ ವೇಳೆ ಎಸಿಬಿ ಅಧಿಕಾರಿಗಳು ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಬ್ಯಾಗ್ ಗಟ್ಟಲೇ ದಾಖಲೆಗಳನ್ನು ಪತ್ತೆ ಹಚ್ಚಿದ್ದರು.

ನಾಲ್ವರ ವಿರುದ್ಧ ಈಗಾಗಲೇ ಎಫ್‌ಐಆರ್‌

ನಾಲ್ವರು ಉಪ ಕಾರ್ಯದರ್ಶಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಧ್ಯವರ್ತಿಗಳು ಮತ್ತು ಇತರರ ವಿರುದ್ಧವೂ ಎಫ್ಐಆರ್ ದಾಖಲಾಗಿಸಲಾಗಿದೆ. ಎಫ್ಐಆರ್ ನಲ್ಲಿ ನಿರ್ದಿಷ್ಟ ಅಧಿಕಾರಿ ಹೆಸರನ್ನು ಎಸಿಬಿ ಉಲ್ಲೇಖಿಸಿಲ್ಲ. ಅಧಿಕಾರಿಗಳ ಹುದ್ದೆಗಳ ಮೇಲಷ್ಟೆ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+