ಬಾಲಬ್ರೂಯಿ ಅತಿಥಿ ಗೃಹ ನೆಲಸಮಗೊಳಿಸಲ್ಲ : ಸಿದ್ದರಾಮಯ್ಯ
ಬೆಂಗಳೂರು, ಅ.26: ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಬಾಲಬ್ರೂಯಿ ಅತಿಥಿ ಗೃಹವನ್ನು ದುರಸ್ತಿಗೊಳಿಸುವ ಅಥವಾ ನೆಲಸಮಗೊಳಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಈ ಬಗ್ಗೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟನೆ ಬಿಪ್ಯಾಕ್ ನ ಸದಸ್ಯೆ ಕಿರಣ್ ಮುಜುಂದಾರ್ ಶಾ ಸೇರಿದಂತೆ ಅನೇಕ ಸಂಘಟನೆಗಳು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದು, ಪಾರಂಪರಿಕ ಕಟ್ಟಡ ಉಳಿಸಿದ ಸಂತಸದಲ್ಲಿದ್ದಾರೆ.
ಬಾಲಬ್ರೂಯಿ: ಬಲ ಬೆರಾವಿ ಎಂಬ ಪಾರ್ಸಿ ಪದ ಅಪಭ್ರಂಶವಾಗಿ ಬಾಲಬ್ರೂಯಿ ಆಗಿರಬಹುದು. ಸದಾ ಅಭಿವೃದ್ಧಿ ಎಂಬರ್ಥ ನೀಡುತ್ತದೆ. ಮಾರ್ಕ್ ಕಬ್ಬನ್ ಅವರು ತಮ್ಮ ಹುಟ್ಟೂರು ಐಲ್ ಆಫ್ ಮ್ಯಾನ್ ಬಳಿಯ ಬಾಲಬ್ರೂಯಿ ಎಂಬ ಸ್ಥಳದ ನೆನಪಿಗಾಗಿ ಈ ಕಟ್ಟಡಕ್ಕೆ ಆ ಹೆಸರು ಇಟ್ಟರು ಎಂಬ ಕಥೆಯೂ ಎಂಬ ಇತಿಹಾಸಕಾರ ಸುರೇಶ್ ಮೂನ ವಿವರಿಸುತ್ತಾರೆ.
ಆಗಾ ಅಲಿ ಅಸ್ಕರ್ ಅವರು ಸುಮಾರು 150 ವರ್ಷಗಳ ಹಿಂದೆ ಈಗಿನ ಬಸವೇಶ್ವರ ವೃತ್ತದ ಸಮೀಪದಲ್ಲಿ ನಿರ್ಮಿಸಿದ ಬಾಲಬ್ರೂಯಿ ಬಂಗಲೆ ಸರ್ಕಾರಿ ಅತಿಥಿ ಗೃಹವಾಗಿ ಅನೇಕ ಗಣ್ಯರಿಗೆ ಆತಿಥ್ಯ ನೀಡಿದೆ. ಮಾರ್ಕ್ ಕಬ್ಬನ್, ರವೀಂದ್ರನಾಥ್ ಠಾಗೋರ್, ಜವಹಾರ್ ಲಾಲ್ ನೆಹರೂ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ, ಅಧಿಕಾರ ಅವಧಿಯಲ್ಲಿದ್ದಾಗಲೇ ಎಸ್ ನಿಜಲಿಂಗಪ್ಪ, ದೇವರಾಜ ಅರಸ್, ಎಸ್ ಆರ್ ಬೊಮ್ಮಾಯಿ ಹೀಗೆ ಪಟ್ಟಿ ಬೆಳೆಯುತ್ತದೆ.

ಏನಿದು ವಿವಾದ? : ಬಾಲಬ್ರೂಯಿ ಕಟ್ಟಡವನ್ನು ನವೀಕರಣಗೊಳಿಸಿ ಅದನ್ನುಶಾಸಕರ ಉಪಯೋಗಕ್ಕಾಗಿ ಕ್ಲಬ್ ಹೌಸ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಬೆಂಗಳೂರು ಮಿರರ್ ನಲ್ಲಿ ವರದಿ ಬಂದಿತ್ತು., ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಹೀಗಾಗಿ ಇತಿಹಾಸ ತಜ್ಞರು, ಪಾರಂಪರಿಕ ಕಟ್ಟಡ ಉಳಿಸಲು ಹೋರಾಡುವ ಎನ್ ಜಿಒಗಳು, ಕಲಾವಿದರು, ಬಿಪ್ಯಾಕ್ ಸಂಘಟನೆ ಆತಂಕ ವ್ಯಕ್ತಪಡಿಸಿದ್ದವು.
There is no proposal to demolish the Balabrooie Guest House. The Government has not taken a decision to alter or demolish it. #Balabrooie
— Chief Minister (@CMofKarnataka) October 26, 2014 ಸ್ಪೀಕರ್ ಗೆ ಮನವಿ ಸಲ್ಲಿಸಲು ಮುಂದಾದರು: ಕಲಾವಿದ ಎಸ್ ಜಿ ವಾಸುದೇವ್, ಬಿ.ಸುರೇಶ್, ಶ್ರೀನಿವಾಸ್ ಕಪ್ಪಣ್ಣ ಮುಂತಾದವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಬಾಲಬ್ರೂಯಿ ಕಟ್ಟಡ ಉಳಿಸುವಂತೆ ಮನವಿ ಸಲ್ಲಿಸಲು ಮುಂದಾದರು. ಬಹುಜನ ಸಮಾಜವಾದಿ ಪಕ್ಷದ ಮಾರ್ತಾಂಡ ಮುನಿಯಪ್ಪ ಎಂಬ ಮುಖಂಡರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾದರು.
ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನ: ಬಾಲಬ್ರೂಯಿ ಕಟ್ಟಡ ಉಳಿಸಿ ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಭಿಯಾನ ಆರಂಭವಾಯಿತು.ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಭಾನುವಾರ ಬೆಳಗ್ಗೆ ಹಲವಾರು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆಗೆ ಸಿಎಂ ಅವರ ಟ್ವೀಟ್ ಬಂದಿದ್ದರಿಂದ ಪ್ರತಿಭಟನಾಕಾರರಲ್ಲಿ ಸಂತಸ ಮೂಡಿದೆ.
@CMofKarnataka thank you for clarifying this important issue. We now need to have a clear Heritage legislation Sir Many Tks
— Kiran Mazumdar Shaw (@kiranshaw) October 26, 2014 ಕೈಜೋಡಿಸಿದ ಸಂಘಟನೆಗಳು: Bangalore Political Action Committee (BPAC) ನ ರೇವತಿ ಅಶೋಕ್, ರಜತಾ ಪ್ರಭಾಕರ್, ಅನಿಲ್ ಶೆಟ್ಟಿ, ಕಿರಣ್ ಮಜುಂದಾರ್ ಶಾ ಅವರ ಜೊತೆಗೆ ಅನೇಕ Intact ಸೇರಿದಂತೆ ಅನೇಕ ಸಂಘಟನೆಗಳು ಒಟ್ಟಿಗೆ ಕೈಜೋಡಿಸಿದ ಪರಿಣಾಮ ಬಾಲಬ್ರೂಯಿ ಕಟ್ಟಡ ಉಳಿಯುವಂತಾಗಿದೆ. ಪೃಥ್ವಿ ಅರಸ್ ಎಂಬುವರು ಆನ್ ಲೈನ್ ಪಿಟೀಷನ್ ಹಾಕಿದ್ದರು. ಜಾರಿಎ ಬಾಟ್ಲಿವಾಲ ಅವರು ಮುಖ್ಯಮಂತ್ರಿಗೆ 500ಜನರ ಸ್ಸಹಿವುಳ್ಳ ಮನವಿ ಸಲ್ಲಿಸಿದ್ದರು. ಬಾಲಬ್ರೂಯಿ ಅತಿಥಿ ಗೃಹ ಎಲ್ಲಿದೆ: ಈ ಮ್ಯಾಪ್ ನೋಡಿ
Bangalore: Protest against demolition of Balabrooie heritage building pic.twitter.com/GHW9H8yPUc
— ANI (@ANI_news) October 26, 2014 -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications