ದಿನಕ್ಕೆ ಎರಡೋ, ಮೂರೋ ಧಮ್ ಹೊಡಿತಿದ್ದೆ. ಆದರೆ ಈಗ?

ಪ್ರತೀದಿನ ಕಚೇರಿಗೆ ನಾನು ಪ್ರಯಾಣಿಸುವುದು ಆಟೋದಲ್ಲೇ. ನಗರ ಪ್ರದಕ್ಷಿಣೆ ಮಾಡುವ ಆಟೋ ಚಾಲಕರಿಂದ ತಿಳಿದುಕೊಳ್ಳುವ ವಿಚಾರಗಳು ತುಂಬಾ ಇರುತ್ತೆ ಎನ್ನುವ ಅನುಭವ ಬಹಳಷ್ಟು ಬಾರಿಯೂ ಈ ಹಿಂದೆ ಆಗಿದೆ.

ನಾನೊಬ್ಬ ನಿಯಮಿತವಾಗಿ ಎರಡೋ, ಮೂರೋ ಸಿಗರೇಟ್ ಸೇದುವವನು ಸಾರ್. ಪೇಪರ್ನಲ್ಲಿ ಎಲ್ಲೋ ಓದಿದೆ, ಇನ್ಮುಂದೆ ಲೂಸ್ ಸಿಗರೇಟ್ ಸಿಗೋಲ್ಲಾ, ಪ್ಯಾಕೇ ತೆಗೋ ಬೇಕಂತೆ. ಹೌದಾ ಸಾರ್ ಎಂದು ಆಟೋದವನು ನನ್ನ ಕೇಳಿದ.

ಆ ರೀತಿಯ ಪ್ರಪೋಸಲ್ ಇದೆ, ಸದ್ಯದಲ್ಲೇ ಕಾನೂನು ಜಾರಿಗೆ ಬರಬಹುದು ಎಂದು ನಾನು ಉತ್ತರಿಸಿದೆ. ಅದಕ್ಕೆ, ಸರಕಾರಕ್ಕೆ ಸಾರ್ವಜನಿಕರ ಹಿತಾಶಕ್ತಿ ಅಷ್ಟು ಮುಖ್ಯವಾಗಿದ್ದರೆ ಸಿಗರೇಟ್, ಬೀಡಿಯನ್ನು ಕಂಪ್ಲೀಟ್ ಬ್ಯಾನ್ ಮಾಡ್ಲಿ ಸಾರ್ ಅನ್ನೋದು ಆಟೋಚಾಲಕನ ವಾದವಾಗಿತ್ತು. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಅದು ಬಿಟ್ಟು, ಲೂಸ್ ಸಿಗರೇಟ್ ನಿಷೇಧ ಮಾಡಿ ಸರಕಾರ ಏನು ಸಂದೇಶ ನೀಡುತ್ತಿದೆ. ಒಂದೋ ಎರಡೋ ಹೊಡೆಯುವವರು ಇಡೀ ಪ್ಯಾಕ್ ಹೊಡೀಲಿ ಅಂತಾನ ಸಾರ್. ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ.

ಧೂಮಪಾನಿಗಳು ಸಿಗರೇಟ್ ಸೇದುವುದನ್ನು ಕಮ್ಮಿ ಮಾಡ್ಲಿ, ಆ ಮೂಲಕ ಆರೋಗ್ಯ ಸುಧಾರಿಸಿ ಕೊಳ್ಳಲಿ ಎನ್ನುವ ಉದ್ದೇಶ ಸರಕಾರದ್ದು ಎಂದಾಗ, ಸಿಗರೇಟ್ ಸೇದದವರು ಈಸಿಯಾಗಿ ಹೇಳ್ಬಿಡ್ತಾರೆ ಸಾರ್. ಚಟ ಇರುವರಿಗೆ ಗೊತ್ತು, ಅದನ್ನು ಬಿಡೋದು ಎಷ್ಟು ಕಷ್ಟಾಂತ ಎಂದು ತನ್ನ ನಿಲುವನ್ನು ಆಟೋದವನ್ನು ಸಮರ್ಥಿಸಿಕೊಂಡ.

cigarette5

ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಸಿಗರೇಟ್ ಪ್ಯಾಕ್ ಮೇಲೆ ಪ್ರಿಂಟ್ ಮಾಡ್ತಾರಲ್ಲಾ, ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಕಂಪ್ಲೀಟ್ ಬ್ಯಾನ್ ಮಾಡ್ಲಿ. ಎಲ್ಲೂ ಸಿಗಬಾರ್ದು, ಆ ರೀತಿ ಕ್ರಮ ತೆಗೆದುಕೊಳ್ಳಬೇಕು. ಇದು ಸಾಧ್ಯನಾ ಸಾರ್ ಇವರ ಕೈಲೀ ಎನ್ನುವುದು ಈತನ ಪ್ರಶ್ನೆಯಾಗಿತ್ತು. [ಸಿಗರೇಟ್ ಬೆಲೆ ಹೆಚ್ಚಳ: ಧೂಮಪಾನಿಗಳು ಏನಂತಾರೆ?]

ಪಾನ್ ಪರಾಗ್ ಬ್ಯಾನ್ ಮಾಡಿದ್ರಲ್ಲಾ, ಸರಕಾರದ ಈ ನಿರ್ಧಾರವನ್ನು ಚಿಲ್ಲರೆ ಅಂಗಡಿಯವರು ಪಾಲಿಸುತ್ತಿದ್ದಾರಾ, ರಾಜಾರೋಷವಾಗಿ ಮಾರುತ್ತಿದ್ದಾರೆ. ಸರಕಾರಕ್ಕೆ ಜನರ ಕಣ್ಣೊರೆಸಲು ಕಾನೂನು ರೂಪಿಸ ಬೇಕಾಗಿದೆ ಅಷ್ಟೇ, ಅದರ ಪಾಲನೆ ಬೇಕಾಗಿಲ್ಲ ಎನ್ನುವುದು ಆಟೋದವನ ಮಾತಾಗಿತ್ತು.

ಜನರ ಆರೋಗ್ಯ ನಮಗೆ ಮುಖ್ಯ ಎಂದು ಸರಕಾರ ಸಾರಾಯಿ ನಿಷೇಧ ಮಾಡಿತ್ತಲ್ಲಾ, ಜನ ಕುಡಿಯೋದು ನಿಲ್ಸ್ ಬಿಟ್ರಾ? ವಿಸ್ಕಿ, ಬೀರ್ ಕುಡಿಯೋಕೆ ಶುರು ಮಾಡಿಲ್ವಾ?. ಜನರ ಜೇಬಿಗೆ ಮತ್ತಷ್ಟು ಕತ್ತರಿಬಿತ್ತು. ಅಬ್ಕಾರಿ ಇಲಾಖೆಗೆ ಇನ್ನಷ್ಟು ಆದಾಯ ಬಂತು ಎನ್ನುವುದು ಆಟೋದವನ ಅಂಬೋಣ.

cigarette4

ಗುಜರಾತಿನಲ್ಲಿ ಬ್ಯಾನ್ ಮಾಡಿದ ಹಾಗೆ ಲಿಕ್ಕರ್ ಬ್ಯಾನ್ ಮಾಡ್ಲಿ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಬಾರದು ಎನ್ನುವ ಕಾನೂನು ಇದೆ. ಸರಿಯಾಗಿ ಇದರ ಪಾಲನೆ ಎಲ್ಲಾದ್ರೂ ಆಗ್ತಾ ಇದ್ಯಾ ಸಾರ್ ಹೇಳಿ?

ಜನರ ಆರೋಗ್ಯದ ಬಗ್ಗೆ ಸರಕಾರಕ್ಕೆ ನಿಜವಾಗ್ಲೂ ಆಸಕ್ತಿಯಿದ್ದರೆ, ಸಿಗರೇಟ್ ಸಂಪೂರ್ಣ ನಿಷೇಧ ಮಾಡ್ಲಿ, ಅದು ಬಿಟ್ಟು ಲೂಸ್ ಮಾರಾಟ ನಿಷೇಧ ಮಾಡಿದ್ರೆ ಏನ್ ಸಾರ್ ಪ್ರಯೋಜನ? ಜನ ಸಿಗರೇಟ್ ಸೇದೋದು ಕಮ್ಮಿ ಮಾಡ್ತಾರೆ ಅನ್ನೋದು ಮುಠಾಳತನ ಎನ್ನುವುದು ಆಟೋ ಚಾಲಕನ ನಿಲುವಾಗಿತ್ತು.

ನನ್ನ ಸ್ಟೇಷನ್ ಬಂತು ನಾನು ಇಳೀತಿನಪ್ಪಾ ಎಂದು ನಾನು ಇಳ್ಕೊಂಡೆ, ಇವನು ಆಡೋ ಮಾತಲ್ಲೂ ಒಂದು ಸತ್ಯ ಇದೆಯಲ್ವಾ ಎಂದು ನನಗೂ ಅನಿಸಿದ್ದು ವಾಸ್ತವತೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+