Traffic Capital of India: ಬೆಂಗಳೂರಿನಲ್ಲಿ ವಾಹನ ಚಲಾವಣೆಗಿಂತಲೂ ನಡೆದು ಹೋಗುವುದೇ ಲೇಸು: ಪೋಸ್ಟ್ ವೈರಲ್
ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೆಚ್ಚಿನದ್ದೇನು ಹೇಳುವ ಅವಶ್ಯಕತೆ ಇಲ್ಲವೇ ಇಲ್ಲ. ಇಲ್ಲಿ ಇದ್ದವರು ಇದರ ಕಿರಿಕಿರಿ ಅನುಭವಿಸದರೆ ಇರಲು ಸಾಧ್ಯವೇ ಇಲ್ಲ. ಟೆಕ್ ಪಾರ್ಕ್‌ಗೆ ಬೆಂಗಳೂರು ಎಷ್ಟು ಹೆಸರುವಾಸಿ ಆಗಿದೆಯೋ ಅಷ್ಟೇ ಟ್ರಾಫಿಕ್‌ಗೆ ಹೆಸರುವಾಸಿ. ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಬಿಂಬಿಸುವ ಪೋಸ್ಟ್ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪೋಸ್ಟ್ ನೋಡಿದರೆ, ಬೆಂಗಳೂರಿನಲ್ಲಿ ವಾಹನ ಚಲಾಯಿಸುವವರು ಪಾಡು ಎಂತಹದ್ದು ಎಂಬುದು ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಪೀಕ್ ಟೈಮ್‌ನಲ್ಲಿ ವಾಹನ ಚಾಲನೆ ಮಾಡುವುದೇ ದೊಡ್ಡ ತಲೆ ನೋವು ಅದಕ್ಕೆ ಬೆಸ್ಟ್ ಎಕ್ಸಾಮ್ ಪಲ್ ಇಲ್ಲಿದೆ. ಇಲ್ಲಿನ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲು ಹಲವು ಕಾರಣಗಳಿವೆ ಅದರಲ್ಲಿ ಪ್ಲ್ಯಾನ್ ಇಲ್ಲದೇ ನಗರ ಬೆಳೆದಿದ್ದೂ ಸಹ ಒಂದಾಗಿದೆ.

ನಡಿಯುವುದೇ ಬೆಸ್ಟ್?
ಇತ್ತೀಚಿಗೆ ಟ್ವಿಟರ್ ಖಾತೆಯಲ್ಲಿ ಆಯುಷ್ ಸಿಂಗ್ ಹಾಕಿರುವ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಗೂಗಲ್ ಮ್ಯಾಪ್‌ನ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಬ್ರಿಗೇಡ್ ಮೆಟ್ರೋಪೊಲ್ಸ್‌ನಿಂದ ಕೆಆರ್ ಪುರಂ ರೈಲು ನಿಲ್ದಾಣಕ್ಕೆ ಮ್ಯಾಪ್ ಹಾಕಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.
This happens only in Bangalore pic.twitter.com/MQlCP7DsU7
— Ayush Singh (@imabhinashS) July 25, 2024
ಈ ಸ್ಕ್ರೀನ್ ಶಾಟ್‌ನ್ನೇ ನಂಬುವುದಾದರೆ ಈ ಮಾರ್ಗ ಸುಮಾರು ಆರು ಕಿಲೋಮೀಟರ್ ದೂರವನ್ನು ಹೊಂದಿದ್ದು, ಕಾರ್ ಚಲಾಯಿಸಿಕೊಂಡು ಹೋದರೆ ಸುಮಾರು 44 ನಿಮಿಷಗಳ ವೇಳೆಯನ್ನು ತೋರಿಸಿದರೆ, ನಡಿಯುತ್ತಾ ಹೋದರೆ 42 ನಿಮಿಷ ತೋರಿಸುತ್ತಿದೆ. ಇದನ್ನು ನೋಡಿದ ಮೇಲೆ ನೆಟ್ಟಿಗರು ಬೆಂಗಳೂರಿನಲ್ಲಿ ವಾಹನ ಚಲಾಯಿಸುವುದಕ್ಕಿಂತಲೂ ಕಾಲ್ನಡಿಗೆಯೇ ಹೆಚ್ಚು ಸೂಕ್ತ ಎಂದು ತಿಳಿಸಿದ್ದಾರೆ.
ಸಖತ್ ವೈರಲ್ ಪೋಸ್ಟ್
ಈ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಸಿಂಗ್ ಅವರು "ಹೀಗೆ ಬೆಂಗಳೂರಿನಲ್ಲಿ ಆಗಲು ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗಿದೆ. 3.76 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದ್ದು, 10 ಸಾವಿರಕ್ಕೂ ಹೆಚ್ಚು ಲೈಕ್, 519 ಜನರಿಂದ ರೀ ಟ್ವೀಟ್ ಮಾಡಲ್ಪಟ್ಟಿದೆ.
ದೊಡ್ಡ ನಗರದಲ್ಲಿ ಇದೇ ಸ್ಥಿತಿ
ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಒಬ್ಬರು ಜಗತ್ತಿನ ಮೆಟ್ರೋನಗರಗಳಲ್ಲಿ ಇದೇ ಸ್ಥಿತಿ ಎಂದು ವಿವರಿಸಿದ್ದಾರೆ. ಇನ್ನೊಬ್ಬ ಬಳಕೆದಾರ ನವದೆಹಲಿ ಹಾಗೂ ಮುಂಬೈ ನಗರಗಳಲ್ಲಿ ಪೀಕ್ ಟೈಮ್‌ನಲ್ಲಿ ಇದೇ ಪರಿಸ್ಥಿತಿ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರ ಸಿಂಗ್ ಅವರೇ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ಹೀಗೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ವಿಶ್ವದ ಮುಂದೆ ತೆರೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲೂ ಈ ಸಮಸ್ಯೆಯನ್ನು ಬೆಂಗಳೂರು ಅನುಭವಿಸಿದೆ. ಇದರಿಂದ ಪಾರಾಗಲು ಸರ್ಕಾರಗಳು ಹಲವು ಯೋಜನೆಗಳನ್ನು ತಂದರೂ, ಪ್ರಯೋಜನವಾಗುತ್ತಿಲ್ಲ.












Click it and Unblock the Notifications