Bengaluru Rent: ಬೆಂಗಳೂರಿನಲ್ಲಿ ಗೂಗಲ್ ಹೊಸ ಕಚೇರಿ; ಬಾಡಿಗೆ ಎಷ್ಟು ಕೋಟಿ ಗೊತ್ತಾ?
ಬೆಂಗಳೂರಿನಲ್ಲಿ ಗೂಗಲ್ ಹೊಸ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದುಕೊಂಡಿದೆ. ಇಟಿ ವರದಿಯ ಪ್ರಕಾರ ಬೆಂಗಳೂರಿನ ವೈಟ್‌ಫೀಲ್ಡ್‌ನ ಅಲೆಂಬಿಕ್ ಸಿಟಿಯಲ್ಲಿ ಗೂಗಲ್ 649,000 ಚದರ ಅಡಿ ಕಚೇರಿ ಸ್ಥಳವನ್ನು ಗುತ್ತಿಗೆಗೆ ಪಡೆದಿದೆ.
ಪ್ರತಿ ಚದರ ಅಡಿಗೆ ರೂ 62 ರ ಮಾಸಿಕ ಬಾಡಿಗೆ ದರದಲ್ಲಿ ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಕಛೇರಿಯನ್ನು ಬಾಡಿಗೆಗೆ ನೀಡಲಾಗಿದೆ ಎಂದು ವರದಿ ಹೇಳಿದೆ. ಈ ಪ್ರಕಾರ ಪ್ರತಿ ತಿಂಗಳ ಬಾಡಿಗೆ ಮೊತ್ತ ₹4,02,38,000 ಆಗಲಿದೆ.

ಮೇ ತಿಂಗಳ ಆರಂಭದಲ್ಲಿ ಗೂಗಲ್ ತನ್ನ ಯುಎಸ್ ಕಚೇರಿಗಳಿಂದ ಕೆಲವು ಪ್ರಮುಖ ಉದ್ಯೋಗಿಗಳನ್ನು ಕೈಬಿಟ್ಟ ನಂತರ ಹೊಸ ಕಚೇರಿ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು ಕೆಲವು ಸ್ಥಾನಗಳನ್ನು ಭಾರತಕ್ಕೆ ವರ್ಗಾಯಿಸಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಗೂಗಲ್ ಕಚೇರಿ
ವರದಿಯ ಪ್ರಕಾರ, 2022 ರಲ್ಲಿ, ಗೂಗಲ್ ಕನೆಕ್ಟ್ ಸರ್ವಿಸಸ್ ಇಂಡಿಯಾ ಪ್ರೈವೇಟ್ (Google Connect Services India Pvt.) ಲಿಮಿಟೆಡ್ ಹೈದರಾಬಾದ್‌ನಲ್ಲಿ 600,000 ಚದರ ಅಡಿ ಕಚೇರಿ ಜಾಗದ ಗುತ್ತಿಗೆಯನ್ನು ನವೀಕರಿಸಿದೆ. ಬೆಂಗಳೂರಿನಲ್ಲಿರುವ ಬಾಗ್‌ಮನೆ ಡೆವಲಪರ್ಸ್‌ನಿಂದ 1.3 ಮಿಲಿಯನ್ ಚದರ ಅಡಿ ಕಚೇರಿ ಸ್ಥಳವನ್ನು ಗುತ್ತಿಗೆ ಪಡೆಯಲು ಗೂಗಲ್ ಒಪ್ಪಿಕೊಂಡಿದೆ.
2020 ರಿಂದ, ಭಾರತದಲ್ಲಿ ಗೂಗಲ್‌ನ ಆಫೀಸ್ ಸ್ಪೇಸ್ ಪೋರ್ಟ್‌ಫೋಲಿಯೊ 3.5 ಮಿಲಿಯನ್ ಚದರ ಅಡಿಗಳಷ್ಟು ವಿಸ್ತರಿಸಿದೆ. ಕಂಪನಿಯು ಈಗ ಭಾರತದಾದ್ಯಂತ ಐದು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಒಟ್ಟು 9.3 ಮಿಲಿಯನ್ ಚದರ ಅಡಿಗಳಷ್ಟು ಕಚೇರಿಯನ್ನು ಹೊಂದಿದೆ.
ಗೂಗಲ್ ಉತ್ಪಾದನೆಯನ್ನು ಆರಂಭಿಸುವ ಮೂಲಕ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಕಂಪನಿಯು ತಮಿಳುನಾಡಿನ ಫಾಕ್ಸ್‌ಕಾನ್ ಸೌಲಭ್ಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮತ್ತು ರಾಜ್ಯದಲ್ಲಿ ಡ್ರೋನ್ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ. ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯು ಪಿಕ್ಸೆಲ್ 8 ಮಾದರಿಯೊಂದಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.












Click it and Unblock the Notifications