Bengaluru Traffic: ಜೀವನದಲ್ಲಿ ಇನ್ನೆಂದೂ ರ್‍ಯಾಪಿಡೋ ಬಳಸಲ್ಲ ಎಂದ ಬೆಂಗಳೂರು ಯುವತಿ
ಬೆಂಗಳೂರಿನ 23 ವರ್ಷದ ಗೂಗಲ್ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ರಾಪಿಡೋ ಚಾಲಕನ ಅಜಾಗರೂಕ ಚಾಲನೆಯಿಂದ ತನ್ನ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.
ಗೂಗಲ್ ಟೆಕ್ಕಿಯೊಬ್ಬರು ರಾಪಿಡೋ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಬೈಕ್ ಸವಾರನ ದುಡುಕಿನ ಡ್ರೈವಿಂಗ್‌ನಿಂದ ಅಪಘಾತ ಸಂಭವಿಸಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅಪರಿಚಿತರು ತನಗೆ ಹೇಗೆ ಸಹಾಯ ಮಾಡಿದರು ಎನ್ನುವ ವಿಚಾರವನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿಯಾಗಿರುವ 23 ವರ್ಷದ ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್, ರಾಪಿಡೊ ಚಾಲಕನ ಅವಸರದ ಡ್ರೈವಿಂಗ್‌ನಿಂದಾಗಿ ನಾನು ಗಾಯಗೊಂಡು ಆಸ್ಪತ್ರೆಗೆ ಸೇರಿಸಿದೆ ಎಂದು ಆರೋಪಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ತನ್ನ ಪೋಸ್ಟ್‌ನಲ್ಲಿ, ಬ್ರೂಕ್‌ಫೀಲ್ಡ್‌ನಿಂದ ಮಾರತಹಳ್ಳಿ ಮಲ್ಟಿಪ್ಲೆಕ್ಸ್‌ಗೆ ಹೋಗಲು ರ್‍ಯಾಪಿಡೋ ಬೈಕ್ ಸೇವೆಯನ್ನು ಬುಕ್ ಮಾಡಿದ ನಂತರ ಹೊರ ವರ್ತುಲ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಆಕೆಯ ಹೆಲ್ಮೆಟ್ ಉತ್ತಮ ಗುಣಮಟ್ಟದ್ದಾಗಿದೆ ಎಂಬ ಏಕೈಕ ಕಾರಣದಿಂದ ಗಂಭೀರವಾಗಿ ಗಾಯಗೊಳ್ಳುವುದನ್ನು ತಪ್ಪಿಸಿಕೊಂಡೆ ಎಂದಿದ್ದಾರೆ.
Never taking a Rapido bike again :) pic.twitter.com/EAwkyCjfb1
— Amisha Aggarwal 📌 (@awwmishaaa) June 30, 2024
ಇನ್ನೆಂದೂ ರಾಪಿಡೋ ಬಳಸಲ್ಲ
ಇನ್ನು ಮುಂದೆ ಎಂದಿಗೂ ರಾಪಿಡೋ ಬೈಕ್ ಸೇವೆ ಬಳಸುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಶುಕ್ರವಾರ ರಾತ್ರಿ ರಾಪಿಡೋ ಬೈಕ್ ಅನ್ನು ಬುಕ್ ಮಾಡಿದ್ದೇನೆ. ಚಾಲಕ ನಿಯಮ ಪಾಲಿಸದೆ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ.
ಕಾಡುಬೀಸನಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಇಂಡಿಕೇಟರ್ ಇಲ್ಲದೆ ಸರ್ವೀಸ್ ಲೇನ್ ಪ್ರವೇಶಿಸಲು ಇದ್ದಕ್ಕಿದ್ದಂತೆ ತಿರುವು ತೆಗೆದುಕೊಂಡರು. ಅದೇ ಕ್ಷಣದಲ್ಲಿ ಹಿಂದಿನಿಂದ ಕಾರೊಂದು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು, ಈ ವೇಳೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಚಾಲಕನು ಆಕೆಯನ್ನು ಅಲ್ಲೇ ಬಿಟ್ಟು ಸ್ಥಳದಿಂದ ಓಡಿಹೋದನು ಎಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾರು ಚಾಲಕ ಓಡಿ ಬಂದು ಸಹಾಯ ಮಾಡಿದ ಎಂದು ಯುವತಿ ಹೇಳಿದ್ದಾರೆ. ಅವರು ನನಗೆ ಅವರ ಚಪ್ಪಲಿಗಳನ್ನು ಕೂಡ ನೀಡಿದರು. ಆದರೆ ಬೈಕ್ ಚಾಲಕನನ್ನು ಕ್ಷಮಿಸಿಲ್ಲ. ಅದೃಷ್ಟ ಸರಿಯಾಗಿದ್ದ ಕಾರಣ ಸಣ್ಣಪುಟ್ಟ ಗಾಯಗಳೊಂದಿಗೆ ನಾನು ಪಾರಾಗಿದ್ದೇನೆ, ಸ್ವಲ್ಪ ಯಾಮಾರಿದ್ದರೂ ಜೀವಕ್ಕೆ ಹಾನಿಯಾಗುತ್ತಿತ್ತು ಎಂದು ಹೇಳಿದ್ದಾರೆ.
ಆತ ನನಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಕೊಟ್ಟಿದ್ದರಿಂದ ನನ್ನ ಜೀವ ಉಳಿಯಿತು. ಒಂದು ವೇಳೆ ಅದೇನಾದರೂ ಕಳಪೆ ಗುಣಮಟ್ಟದ್ದಾಗಿದ್ದರೆ, ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು, ಅತಿ ಹೆಚ್ಚು ವಾಹನ ದಟ್ಟಣೆ ಇರುವ ಹೊರ ವರ್ತುಲ ರಸ್ತೆಯಲ್ಲಿ ಬಿದ್ದರೂ ಯಾವ ವಾಹನಗಳ ನನ್ನ ಮೇಲೆ ಹರಿಯಲಿಲ್ಲ ಎಂದಿದ್ದಾರೆ.
ಘಟನೆ ಬಗ್ಗೆ ರ್‍ಯಾಪಿಡೋಗೆ ದೂರು ಕೊಟ್ಟಿದ್ದೇನೆ. ರ್‍ಯಾಪಿಡೋ ವಿರುದ್ಧ ನನಗೆ ಯಾವ ದೂರು ಇಲ್ಲ. ಆದರೆ ಬೈಕ್ ಸವಾರ ಅಜಾಗರೂಕತೆಯಿಂದ ಚಚಾಲನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications