Khata Good News: ಹೊಸ ಖಾತಾ ಪಡೆಯುವುದು ಹೇಗೆ, ಬೇಕಾಗುವ ದಾಖಲೆಗಳ ವಿವರ!

ಬೆಂಗಳೂರಿನಲ್ಲಿ ಯಾವುದೇ ಖಾತಾ ಇಲ್ಲದೆ ಇರುವವರು ಹಾಗೂ ಹೊಸ ಖಾತಾದಾರರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಕೊನೆಗೂ ಗುಡ್‌ನ್ಯೂಸ್‌ ಕೊಟ್ಟಿದೆ. ಬೆಂಗಳೂರಿನಲ್ಲಿ ಅಂದಾಜು 8 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಯಾವುದೇ ಖಾತಾವನ್ನು ಹೊಂದಿಲ್ಲ ಎಂದು ಹೇಳಲಾಗಿದೆ. ಈ ರೀತಿ ಯಾವುದೇ ಖಾತಾ ಇಲ್ಲದೆ ಇರುವವರು ಇದೀಗ ಇ - ಖಾತಾಗೆ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ರೀತಿ ಆಸ್ತಿದಾರರು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಿದ್ದು. ಇದರಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಪ್ರತಿ ವರ್ಷವೂ ನಷ್ಟವಾಗುತ್ತಿದೆ. ಈ ಆಸ್ತಿದಾರರು ಪಾಲಿಕೆಯ ಹಾಗೂ ಸರ್ಕಾರದ ಎಲ್ಲಾ ಸೇವೆಗಳನ್ನು ಪಡೆದುಕೊಂಡರೂ, ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಇದೀಗ ಈ ರೀತಿಯ ಆಸ್ತಿದಾರರಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ ಅದರ ಸಂಪೂರ್ಣ ವಿವರ ಇಲ್ಲಿದೆ.

ನಗರದಲ್ಲಿ ಆಸ್ತಿಗಳಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದು. ಈ ಗೊಂದಲಗಳನ್ನು ಹಂತ ಹಂತವಾಗಿ ಪರಿಹರಿಸುವುದಕ್ಕೆ ಬಿಬಿಎಂಪಿ ಹಾಗೂ ಸರ್ಕಾರ ಮುಂದಾಗಿದೆ. ಪ್ರತಿ ವರ್ಷವೂ ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲರನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧಾರ ಮಾಡಿದೆ. ಇದರ ಭಾಗವಾಗಿ ಯಾವುದೇ ಖಾತಾ ಇಲ್ಲದೆ ಇರುವವರಿಗೆ ಹೊಸದಾಗಿ ಖಾತಾ ನೀಡುವುದಕ್ಕೆ ವೆಬ್‌ಸೈಟ್‌ವೊಂದನ್ನು ಪರಿಚಯಿಸಿದೆ. ಅಲ್ಲದೆ ಹೊಸ ಖಾತಾಗೆ ಯಾವ ಪ್ರಮುಖ ದಾಖಲೆಗಳು ಬೇಕು ಎನ್ನುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ. ಇದರ ವಿವರ ನೋಡೋಣ.

Good News How to Get New Khata Details of Documents Required

ನಗರದಲ್ಲಿ ಇಷ್ಟು ದಿನ 8 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಯಾವುದೇ ಖಾತಾಗಳನ್ನು ಮಾಡಿಸಿಕೊಳ್ಳುವ ತಾಪತ್ರಯಕ್ಕೆ ಹೋಗಿರಲಿಲ್ಲ. ಪಾಲಿಕೆ ಈ ನಿಟ್ಟಿನಲ್ಲಿ ಎಚ್ಚರಿಕೆಗಳನ್ನು ನೀಡಿದರೂ, ಕ್ಯಾರೇ ಎಂದಿರಲಿಲ್ಲ. ಇದೀಗ ಇ - ಖಾತಾ ಮಾಡಿಸಿಕೊಳ್ಳಲು ಕಡ್ಡಾಯವಾಗಿ ಖಾತಾ ಇರಬೇಕಾಗುತ್ತದೆ. ಹೀಗಾಗಿ, ಆಸ್ತಿದಾರರು ಕೊನೆಗೂ ಖಾತಾ ಮಾಡಿಸಿಕೊಳ್ಳಲು ಮುಂದೆ ಬಂದಿದ್ದು. ನಮ್ಮ ಬಳಿ ಯಾವುದೇ ಖಾತಾ ಇಲ್ಲ ಎಂದಿದ್ದಾರೆ.

ಹೊಸ ಖಾತಾ ಮಾಡಿಸಿಕೊಳ್ಳಲು ವೆಬ್‌ಸೈಟ್‌: ಇನ್ನು ಬೆಂಗಳೂರಿನಲ್ಲಿ ಯಾವುದೇ ಖಾತಾ ಇಲ್ಲದೆ ಇರುವವರು ಬಿಬಿಎಂಪಿಯ ಹೊಸ ವೆಬ್‌ಸೈಟ್‌ನ ಮೂಲಕ ಹೊಸ ಖಾತಾ ಮಾಡಿಸಿಕೊಳ್ಳಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯ ವರೆಗೆ ಯಾವುದೇ ಖಾತಾ ಇಲ್ಲದೆ ಇರುವವರು ಆಸ್ತಿಗಳನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದೆ. ಈ ರೀತಿ ಖಾತಾ ಇಲ್ಲದೆ ಇರುವವರು ವೆಬ್ ಸೈಟ್ https://BBMP.karnataka.gov.in/NewKhata ಗೆ ಭೇಟಿ ನೀಡಬಹುದಾಗಿದೆ.

ಹೊಸ ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳ ವಿವರ

ಬಿಬಿಎಂಪಿ ವ್ಯಾಪ್ತಿಯಲ್ಲಿ ನೀವು ಅತ್ಯಂತ ಸರಳವಾಗಿ ಇ - ಖಾತಾ ಪಡೆದುಕೊಳ್ಳಬಹುದಾಗಿದೆ. ಅದಕ್ಕೆ ನೀವು ಕೆಲವೊಂದು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಬಳಿ ಬಿಬಿಎಂಪಿ ಖಾತೆ ಇಲ್ಲವೇ, ಕೈಬರಹ ಖಾತೆಯೂ ಸಹ ಇಲ್ಲವೇ. ಬಿಬಿಎಂಪಿಯಿಂದ ಆನ್‌ಲೈನ್ ಮೂಲಕ ಹೊಸ ಖಾತೆ ಪಡೆದುಕೊಳ್ಳಿ https://BBMP.Karnataka.gov.in/NewKhata

ಹೊಸ ಖಾತೆಗೆ ಅರ್ಜಿ ಸಲ್ಲಿಸಲು ಸರಳ ವಿಧಾನಗಳ ವಿವರ

* ನಿಮ್ಮ ಮೊಬೈಲ್ ಮತ್ತು ಓಟಿಪಿ ಬಳಸಿ ಲಾಗಿನ್ ಆಗಿರಿ

* ಕ್ರಯ ಅಥವಾ ನೋಂದಾಯಿತ ಪತ್ರದ ಸಂಖ್ಯೆಯನ್ನು ಹಾಕಿ (ಉಪ ನೋಂದಾಣಾಧಿಕಾರಿಯಿಂದ ಎಲೆಕ್ಟ್ರಿಕ್ ಆಗಿ ಪಡೆಯಲಾಗುವುದು)

* ಆಧಾರ್ ಕಾರ್ಡ್‌ ಪರಿಶೀಲನೆ

* ಸ್ವತ್ತಿನ ಋಣಭಾರ ಪ್ರಮಾಣ ಪತ್ರ

* ಬೆಸ್ಕಾಂ ಐಡಿ

* ಸ್ವತ್ತಿನ ಚಿತ್ರ

* ತಹಲ್‌ವರೆಗಿನ ಸ್ವತ್ತಿನ ತೆರಿಗೆಯನ್ನು ಪಾವತಿಸಿ.

ನಿಮ್ಮ ಮಾಹಿತಿಯನ್ನು ಪರಿಶೀಲಿಸಿದ ನಂತರ ಹೊಸ ಖಾತೆಯನ್ನು ಆನ್‌ಲೈನ್ ಮೂಲಕ ವಿತರಿಸಲಾಗುವುದು ಎಂದು ಬಿಬಿಎಂಪಿಯು ಹೇಳಿದೆ. ಒಂದು ವೇಳೆ ನೀವು ಈಗಾಗಲೇ ಕೈಬರಹ ಖಾತೆ ಹೊಂದಿದ್ದಲ್ಲಿ ಹೊಸ ಖಾತೆಗಾಗಿ ಅರ್ಜಿ ಸಲ್ಲಿಕೆ ಮಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಈ ರೀತಿ ಮಾಡಿದರೆ ಆ ನಿರ್ದಿಷ್ಟ ಆಸ್ತಿದಾರರ ಮೇಲೆ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರನನ್ನಾಗಿ ಮಾಡಲಾಗುವುದು

ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತೆಯನ್ನು ಪಡೆಯಿರಿ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+