Darshan Thoogudeepa: ನಟ ದರ್ಶನ್‌ಗೆ ಶುಭ ಸಂಕೇತ: ಬಸವನ ವಿಡಿಯೋ ಭಾರೀ ವೈರಲ್
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ & ಪಟಾಲಂ ಗ್ಯಾಂಗ್ ಜೈಲು ಪಾಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದರ ನಡುವೆಯೇ ದರ್ಶನ್ ಪೋಟೋಗೆ ಬಸವಣ್ಣವೊಂದು ಮತ್ತಿಟ್ಟಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಿಜಯಲಕ್ಷ್ಮಿ ಟೆಂಪಲ್ ಮುಂದುವರೆಸಿದ್ದಾರೆ. ಅಲ್ಲದೆ, ಅಭಿಮಾನಿಗಳು ಸಹ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತುದ್ದಾರೆ. ಅಲ್ಲದೆ, ಪ್ರಸಾದ ತಂದು ದರ್ಶನ್ ಕೊಡುತ್ತಲೇ ಇದ್ದಾರೆ.

ಇದರ ನಡುಯೇ ಇದೀಗ ದೇವಸ್ಥಾನವೊಂದರ ಮುಂಭಾಗ ದೇವರಿಗೆ ಬಿಟ್ಟ ಬಸವ ನಟ ದರ್ಶನ್ ಪೋಟೋಗೆ ಮುತ್ತಿಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಬಸವಣ್ಣ ಮುಟ್ಟಿದರೆ, ದಾಟಿಕೊಂಡು ಹೋದರೆ, ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಹಾಗೆಯೇ ಇದೀಗ ಬಸವ ದರ್ಶನ್ ಪೋಟೋಗೆ ಮುತ್ತಿಟ್ಟಿದ್ದು, ಇದು ಶುಭ ಸಂಕೇತ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಪುಣ್ಯಾತ್ಮ 🙏🙏❤️#DBoss 👑 #DBossForever #BossOfSandalwood pic.twitter.com/olUOqsxoZ1
— Thoogudeepa Team - R (@DTEAM7999) August 12, 2024
ಇನ್ನೂ ಈ ವಿಡಿಯೋವನ್ನು Thoogudeepa Team - R ಎನ್ನುವ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 146 ಲೈಕ್ಸ್ ಬಂದಿದ್ದು, 768 ಜನ ವೀಕ್ಷಣೆ ಮಾಡಿದ್ದಾರೆ. ಇದು ಇಂದು (ಆಗಸ್ಟ್ 12) ಮಧ್ಯಾಹ್ನ 2:04 ಗಂಟೆಗೆ ಶೇರ್ ಆಗಿದೆ.
ಭವಿಷ್ಯ ನುಡಿದ ದೈವ: ಇದುವರೆಗೂ ಪರಪ್ಪನ ಅಗ್ರಹಾರ ಜೈಲು ಸೇರಿ 50 ದಿನ ಆದರೂ ಕೂಡ, ಎಷ್ಟೇ ಪ್ರಯತ್ನ ಪಟ್ಟರೂ ದರ್ಶನ್ ಬಿಡುಗಡೆ ಬಗ್ಗೆ ಯಾವುದೇ ಧನಾತ್ಮಕ ಮಾಹಿತಿಗಳನ್ನು ಲಭ್ಯವಾಗುತ್ತಿಲ್ಲ. ಆದರೆ ನಟ ದರ್ಶನ್ ಯಾವಾಗ ಬಿಡುಗಡೆ ಆಗುತ್ತಾರೆ ಎಂದು ದೇವಸ್ಥಾನದ ಅರ್ಚಕರೇ ದೈವದ ಮೊರೆ ಹೋಗಿರುವ ಘಟನೆ ನಡೆದಿದೆ. ಹಾಗಾದರೆ ದೈವ ನುಡಿದ ಭವಿಷ್ಯ ಏನು ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನ ಬಾಪೂಜಿನಗರದ ಶಾರದಾಂಬೆ ದೇವಸ್ಥಾನದ ಅರ್ಚಕರ ಮಗಳ ಮೂಲಕ ಕುಟ್ಟೊ ಕಲ್ಲು ಮೂಲವಾಗಿ ದರ್ಶನ್ ಬಗ್ಗೆ ಓಂ ಶಕ್ತಿ ಶಾರದಾಂಬೆ ದೇವಿ ಭವಿಷ್ಯ ನುಡಿದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸದ್ಯ ಓಂ ಶಕ್ತಿ ಶಾರದಾಂಬೆ ಬಿಸುವ ಕಲ್ಲು ಮೂಲಕ ಭವಿಷ್ಯ ನುಡಿದ ದೈವ, ದರ್ಶನ್ ಸದ್ಯ ಮೀನ ರಾಶಿಯಲ್ಲಿದ್ದಾರೆ. ಯಾವುದಕ್ಕೂ ಗ್ರಹಚಾರ ಸರಿಯಾಗಿಲ್ಲ. ಗುರುಬಲ ಇಲ್ಲದೇ ಇರುವುದರಿಂದ ಕೆಟ್ಟ ದೆಸೆ ನಡೆಯುತ್ತಿದೆ, ಶನಿ ಬಂದು ಕೂತಿದ್ದಾನೆ ಎಂದು ಭವಿಷ್ಯ ನುಡಿದಿದೆ ಎಂದು ತಿಳಿದುಬಂದಿದೆ.
ಇನ್ನು ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿನಗರದ ದರ್ಶನ್ ನಿವಾಸಕ್ಕೆ ವಾಸ್ತುದೋಷ ಇದೆ. ಮನೆಯ ಮೂಲೆಯೇ ಸರಿಯಿಲ್ಲ. ಈ ಎಲ್ಲಾ ಕಾರಣದಿಂದ ಅವರ ಬಿಡುಗಡೆಗೆ ಅಡ್ಡಿ ಆಗಿದೆ. ಇನ್ನೂ 2 ತಿಂಗಳು ಬಿಡುಗಡೆಯ ಭಾಗ್ಯವಿಲ್ಲ. ಬಳಿಕ ಜೈಲಿನಿಂದ ಹೊರಬರಲಿದ್ದಾರೆ ಎಂದು ದೈವ ಭವಿಷ್ಯ ನುಡಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications