Bengaluru Property: ಬೆಂಗಳೂರಿನ ಈ ಆಸ್ತಿದಾಗಳಿಗೆ ಸೆಟ್‌ಬ್ಯಾಕ್ ನಿಯಮ ಸಡಿಲಿಕೆ
ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಮತ್ತೊಂದು ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಆಸ್ತಿದಾರರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಇದೀಗ ಪರಿಹಾರ ಕಂಡಕೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಆಸ್ತಿದಾರರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಇದೀಗ ಪರಿಹಾರ ಸಿಕ್ಕಂತಾಗಿದೆ. ಬೆಂಗಳೂರಿನ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳೇನು ಹಾಗೂ ಇದರಿಂದ ಬೆಂಗಳೂರಿನ ಆಸ್ತಿದಾರರಿಗೆ ಹೇಗೆ ಅನುಕೂಲವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದೆ. ಸರ್ಕಾರವು ಸಣ್ಣ ವಸತಿ ಪ್ಲಾಟ್‌ಗಳಿಗೆ ಹಾಗೂ ಬಹು ವರ್ಷಗಳಿಂದ ಸಮಸ್ಯೆ ಆಗಿಯೇ ಉಳಿದಿದ್ದ ವಿವಾದಿತ ಕಟ್ಟಡ ನಿಯಮಗಳಲ್ಲಿ ಬದಲಾವಣೆಗಳನ್ನು ಜಾರಿ ಮಾಡಲು ಮುಂದಾಗಿದೆ. ಇದರಿಂದ ಬೆಂಗಳೂರಿನಲ್ಲಿ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಆಸ್ತಿದಾರರಿಗೆ ಪರಿಹಾರ ಸಿಕ್ಕಂತಾಗಿದೆ.

ಬೆಂಗಳೂರು ಕಟ್ಟಡಗಳ ಸೆಟ್‌ಬ್ಯಾಕ್ ನಿಯಮ ಸಡಿಲಿಕೆ
ಇನ್ನು ಬೆಂಗಳೂರಿನಲ್ಲಿ ಕಟ್ಟಡಗಳ ಸೆಟ್‌ಬ್ಯಾಕ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. 4,000 ಚದರ ಮೀಟರ್‌ವರೆಗಿನ ಪ್ಲಾಟ್‌ಗಳಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಸೆಟ್‌ಬ್ಯಾಕ್ ನಿಯಮಗಳನ್ನು ಸಡಿಲಿಸಲು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ) 2015 ಅನ್ನು ತಿದ್ದುಪಡಿ ಮಾಡಲಾಗಿದೆ. ಪರಿಷ್ಕೃತ ಆದೇಶದ ಅನ್ವಯ ಯುಡಿಡಿ ಪ್ಲಾಟ್ ಗಾತ್ರವನ್ನು ಆಧರಿಸಿ ವಿಭಿನ್ನ ಅಳತೆಗಳನ್ನು ಪರಿಚಯಿಸುವ ಮೂಲಕ ಸೆಟ್‌ಬ್ಯಾಕ್ ಮಾನದಂಡಗಳನ್ನು ಹೊಂದಾಣಿಕೆ ಮಾಡಲಾಗಿದೆ.
60 ಚದರ ಮೀಟರ್ (20x30 ಅಡಿ) ಅಳತೆಯ ಪ್ಲಾಟ್‌ಗಳಿಗೆ, ಮುಂಭಾಗದ ಸೆಟ್‌ಬ್ಯಾಕ್ ಅನ್ನು 0.7 ಮೀ ಗೆ ಇಳಿಸಲಾಗಿದೆ. ಅಲ್ಲದೇ ಎರಡೂ ಬದಿಗಳಲ್ಲಿ 0.6 ಮೀ ಜಾಗಕ್ಕೆ ಅನುಮತಿ ನೀಡಲಾಗಿದೆ. ಈ ನಿರ್ದಿಷ್ಟ ಆಸ್ತಿದಾರರಿಗೆ ಹಿಂಭಾಗದ ಸೆಟ್‌ಬ್ಯಾಕ್ ಅಗತ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇನ್ಮುಂದೆ ಸಣ್ಣ ಆಸ್ತಿದಾರರು ಸೆಟ್‌ಬ್ಯಾಕ್ ತಲೆನೋವಿನಿಂದ ಮುಕ್ತರಾಗಲಿದ್ದಾರೆ.
ಮುಂದುವರಿದು 150 ಚದರ ಮೀಟರ್‌ವರೆಗಿನ ಪ್ಲಾಟ್‌ಗಳಿಗೆ - ಸಾಮಾನ್ಯವಾಗಿ 30x40 ಅಡಿ - ಮುಂಭಾಗದ ಸೆಟ್‌ಬ್ಯಾಕ್ ಪ್ರದೇಶವನ್ನು 0.9 ಮೀ ಗೆ ನಿಗದಿಪಡಿಸಲಾಗಿದೆ. ಹಿಂಭಾಗದಲ್ಲಿ ಸೆಟ್‌ಬ್ಯಾಕ್ ಅಗತ್ಯವಿದೆ. ಜೊತೆಗೆ ಮನೆಗಳ ಪಕ್ಕದ ಪ್ರದೇಶಗಳಲ್ಲಿ ಒಂದರಲ್ಲಿ 0.7 ಮೀ ಗ್ಯಾಪ್ ಇರುತ್ತದೆ. ಹೆಚ್ಚುವರಿಯಾಗಿ, ಅಧಿಸೂಚನೆಯು ನೆಲಮಹಡಿಯನ್ನು ಹೊರತುಪಡಿಸಿ, 12 ಮೀಟರ್‌ನಲ್ಲಿ 250 ಚದರ ಮೀಟರ್‌ವರೆಗಿನ ಪ್ಲಾಟ್‌ಗಳಿಗೆ ಕಟ್ಟಡ ಎತ್ತರವನ್ನು ಮಿತಿಗೊಳಿಸಲಾಗಿದೆ. ಮಳೆನೀರು ಹರಿದು ಹೋಗುವುದಕ್ಕೆ, ಅಂತರ್ಜಲ ಮರುಪೂರಣ ಪದ್ಧತಿ ಹಾಗೂ ಭೂಕುಸಿತದಂತಹ ಅಪಾಯಗಳು ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಏನಿದು ಸೆಟ್‌ಬ್ಯಾಕ್ ನಿಯಮ
ಕಟ್ಟಡಗಳಿಗೆ ಸೆಟ್‌ಬ್ಯಾಕ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಮುಖ್ಯವಾಗಿ ಬೆಂಗಳೂರಿನಂತಹ ಪ್ರದೇಶಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳ ನಡುವೆ ಅಂತರ ತೀರ ಕಡಿಮೆ ಇರುತ್ತದೆ. ಈ ರೀತಿ ಗ್ಯಾಪ್ ಕೊಡದೆ ಕಟ್ಟಡಗಳನ್ನು ನಿರ್ಮಾಣ ಮಾಡುವುದರಿಂದ ಭಾರೀ ಮಳೆ, ಬೆಂಕಿ ಅವಘಡ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲೂ ಸಮಸ್ಯೆ ಆಗುವುದು ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸೆಟ್‌ಬ್ಯಾಕ್ ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ. ಇದೀಗ ಬೆಂಗಳೂರಿನಲ್ಲಿ ಈ ನಿಯಮಗಳಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಕೆಲವೊಂದು ನಿರ್ದಿಷ್ಟ ವಿನಾಯಿತಿಗಳನ್ನು ಸಹ ಕೊಡಲಾಗಿದೆ.












Click it and Unblock the Notifications