• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು

By Vanitha
|

ಬೆಂಗಳೂರು, ಸೆಪ್ಟೆಂಬರ್, 29 : ಹೃದಯ ಮಾನವನ ಜೀವ ಚೈತನ್ಯ. ಸದಾ ಉಲ್ಲಾಸವನ್ನು ಧಾರೆ ಎರೆಯುವ ಇದರ ಕಾರ್ಯವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಾಗದು. ಜೀವನಾಡಿ ಹೃದಯ ನಿಂತರೆ....ಅಬ್ಬಾ ಊಹಿಸಿಕೊಳ್ಳೋದೇ ಕಷ್ಟ ಅಲ್ವಾ..

ನೋಡಿ....ಇಂದು ವಿಶ್ವ ಹೃದಯ ದಿನಾಚರಣೆ...ನಿಮ್ಮ ಹೃದಯ ಆರೋಗ್ಯವಾಗಿದೆಯಾ? ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯಾ ಎಂದು ಕೊಂಚ ಗಮನಹರಿಸಿ ಉತ್ತಮ ಹೃದಯ ಉತ್ತಮ ಆರೋಗ್ಯ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ

ಹಿಂದೆಲ್ಲಾ ಹೃದಯ ಮಿಡಿಯಿತು, ಹೃದಯ ಹಾಡಿತು, ಹೃದಯ ವೀಣೆ ಮೀಟಿದಾಗ ಎಂಬ ಮಾತುಗಳು ಕೇಳ್ತಾ ಇದ್ದವು. ಆದರೆ ಇಂದು ಈ ಮಾತುಗಳು ಕೇಳುವುದೇ ಇಲ್ಲಾ ಏಕೆಂದರೆ ಇಂದಿನ ಹಲವಾರು ಹೃದಯಗಳು ಬರೇ ನೋವಿನ ಅಲೆಯಲ್ಲಿಯೇ ನಡೀತಾ ಇರುತ್ತೆ.

ಹಿರಿಯರ ಹೃದಯದ ಆರೋಗ್ಯಕ್ಕೆ ಅವರು ಅನುಸರಿಸುತ್ತಿದ್ದ ಸುರಕ್ಷಾ ಆಹಾರ ಪದ್ಧತಿ ಮೂಲ ಕಾರಣವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರು ಪರಿಶ್ರಮಿಗಳು ಮತ್ತು ಎಲ್ಲಾ ಕೆಟ್ಟ ಚಟುವಟಿಕೆಯಿಂದ ದೂರ ನಿಂತವರು. ಆದರೆ ಇಂದಿನ ಪೀಳಿಗೆಯ ಸ್ಥಿತಿ?[ಹೃದಯದ ಆರೋಗ್ಯಕ್ಕೆ ಅಕ್ಕಪಕ್ಕದವರನ್ನು ಪ್ರೀತಿಸಿ]

ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಆರೋಗ್ಯಯುತ ಹೃದಯ ಇರಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಎಂದು ಕೆಲವು ಸಲಹೆ ಕೊಡುತ್ತೇವೆ. ತಪ್ಪದೇ ಪಾಲಿಸಿಕೊಂಡು ಬನ್ನಿ. ಆಗ ನಿಮ್ಮ ಹೃದಯಗಳು ಪ್ರೀತಿಯ ಹಾಡನ್ನು ಮಿಡಿಯುತ್ತೆ, ಸಂತಸದ ಮಾತನ್ನು ಆಡುತ್ತೆ.

ಮೊದಲು ಧೂಮಪಾನ ಬಿಡಿ

ಮೊದಲು ಧೂಮಪಾನ ಬಿಡಿ

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಧೂಮಪಾನ ವ್ಯಸನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನೀವು ಧೂಮಪಾನ ಆರಂಭಿಸಿ 12 ತಿಂಗಳ ನಂತರ ಬಿಡಲು ಪ್ರಯತ್ನ ಮಾಡಿದರೆ ಏನು ಪ್ರಯೋಜನ ಇಲ್ಲ. ಏಕೆಂದರೆ ಆಗಲೇ ನೀವು ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿರ್ತಿರಿ. ಹಾಗಾಗಿ ಮೊದಲು ಧೂಮಪಾನ ಬಿಡಿ.[ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ವ್ಯಾಯಾಮ ಅಭ್ಯಾಸ ಬೆಳೆಸಿಕೊಳ್ಳಿ

ವ್ಯಾಯಾಮ ಅಭ್ಯಾಸ ಬೆಳೆಸಿಕೊಳ್ಳಿ

ನಿಮಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಬಾರದೆಂದರೆ, ದಿನನಿತ್ಯ 30 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು. ನಾನಾ ವ್ಯಾಯಾಮಗಳನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.[ಆರೋಗ್ಯ ನಿಮ್ಮ ಸ್ವತ್ತೇ ಹೊರತು ಬೇರೆಯವರ ಸ್ವತ್ತಲ್ಲ]

ನಿತ್ಯದ ಆಹಾರದಲ್ಲಿ ಸಾಕಷ್ಟು ಹಣ್ಣು ತರಕಾರಿ ಇರಲಿ

ನಿತ್ಯದ ಆಹಾರದಲ್ಲಿ ಸಾಕಷ್ಟು ಹಣ್ಣು ತರಕಾರಿ ಇರಲಿ

ಕೆಲವರ ಆಹಾರ ಸೇವನೆಗೆ ಬ್ರೆಕ್ ಇರೋದೇ ಇಲ್ಲ. ಸಿಕ್ಕಿದೆಲ್ಲಾ ಮೇಯ್ತಾನೆ ಇರ್ತಾರೆ. ಇಂತಹವರು ಬೇಗನೆ ಹೃದಯವನ್ನು ಹಾಳು ಮಾಡಿಕೊಳ್ಳುತ್ತಾರೆ. ನೋಡಿದೆಲ್ಲಾ ತಿನ್ನೋ ಅಭ್ಯಾಸವನನ್ಉ ಕೊಂಚ ಕಡಿಮೆ ಮಾಡಿ. ಆಹಾರದಲ್ಲಿ ಹೆಚ್ಚಾಗಿ ತರಕಾರಿ ಸೊಪ್ಪು, ಕಾಳುಗಳನ್ನು ಉಪಯೋಗಿಸಿ. ಹಣ್ಣುಗಳನ್ನು ಸತತವಾಗಿ ತಿನ್ನಿ.

ಉತ್ತಮ ಸ್ನೇಹಿತರಿರಲಿ

ಉತ್ತಮ ಸ್ನೇಹಿತರಿರಲಿ

ನಮಗಿರುವ ಸ್ನೇಹಿತರಲ್ಲಿ ಕೆಲವರು ಧೂಮಪಾನ, ಮಧ್ಯಪಾನ ವ್ಯಸನಿಗಳಿರಬಹುದು. ನಕಾರಾತ್ಮಕ ಮನೋಭಾವದವರು ಇರಬಹುದು ಇಂತಹ ಸ್ನೇಹಿತರನ್ನು ಆದಷ್ಟು ದೂರ ಇರಿಸಿ.

ಮೀನನ್ನು ಯಥೇಚ್ಛವಾಗಿ ತಿನ್ನಿ

ಮೀನನ್ನು ಯಥೇಚ್ಛವಾಗಿ ತಿನ್ನಿ

ಮೀನು ಸೇವನೆ ಅಭ್ಯಾಸ ಇರುವವರು ಹೆಚ್ಚಾಗಿ ಎಣ್ಣೆ ಅಂಶವಿರುವ ಮೀನುಗಳನ್ನು ಸೇವನೆ ಮಾಡಿ

ಚಾಕೋಲೆಟ್ ತಿನ್ನುವುದನ್ನು ಬಿಡಿ

ಚಾಕೋಲೆಟ್ ತಿನ್ನುವುದನ್ನು ಬಿಡಿ

ಈಗ ಎಲ್ಲರೂ ಚಾಕಲೇಟ್ ಪ್ರಿಯರೇ ಆಗಿರುತ್ತಾರೆ. ಚಾಕೊಲೆಟ್ ತಿನ್ನೊದು ತಪ್ಪಲ್ಲ. ಆದರೆ ಬಹಳ ತಿನ್ನಬೇಡಿ. ಅದರಲ್ಲಿ ಹಾಲಿನ ಅಂಶವಿರುವ ಚಾಕೊಲೇಟ್ ಸೇವಿಸಬೇಡಿ

ಮದ್ಯಪಾನ ಬೇಡವೇ ಬೇಡ

ಮದ್ಯಪಾನ ಬೇಡವೇ ಬೇಡ

ಮದ್ಯಪಾನ ಮಾತ್ರ ಹೃದಯ ಸಂಬಂದಿ ಕಾಯಿಲೆಗಳಿಗೆ ಸುಲಭವಾಗಿ ಆಹ್ವಾನ ನೀಡುತ್ತದೆ. ಹಾಗಾಗಿ ಮದ್ಯಪಾನ ಸೇವನೆಯನ್ನು ಮರೆತರೆ ಹೃದಯದ ಆರೋಗ್ಯ ಸುರಕ್ಷಿತ.[ಮದ್ಯಪ್ರಿಯರಿಗೆ ಕಿಕ್ ಕೊಡುವ ಸುದ್ದಿ : ಓಲ್ಡ್ ಮಾಂಕ್ ಅಲೈವ್!]

ಹೆಚ್ಚು ಉಪ್ಪು ಬೇಡ

ಹೆಚ್ಚು ಉಪ್ಪು ಬೇಡ

ಆಹಾರದಲ್ಲಿ ಹೆಚ್ಚು ಉಪ್ಪು ಹಾಗೂ ಸೋಡಿಯಂ ಬಳಕೆಯನ್ನು ಕಡಿಮೆ ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ

ಡಯಾಬಿಟಿಸ್ ಪರೀಕ್ಷೆ ಮರೆಯಬೇಡಿ

ಡಯಾಬಿಟಿಸ್ ಪರೀಕ್ಷೆ ಮರೆಯಬೇಡಿ

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಾಗಾಗಿ ತಿಂಗಳಿಗೊಮ್ಮೆಯಾದರೂ ಪ್ರತಿಯೊಬ್ಬರು ಡಯಾಬಿಟಿಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಫಿಟ್ ನೆಸ್ ಸಂಬಂಧಿತ ಚಟುವಟಿಕೆಗಳು ಜೊತೆಗಿರಲಿ

ಫಿಟ್ ನೆಸ್ ಸಂಬಂಧಿತ ಚಟುವಟಿಕೆಗಳು ಜೊತೆಗಿರಲಿ

ಫಿಟ್ ನೆಸ್ ಗೆ ಸಂಬಂಧಿಸಿದ ಡ್ಯಾನ್ಸ್, ಸೈಕ್ಲಿಂಗ್, ಏರೋಬಿಕ್ಸ್, ಯೋಗ ಮಾಡುವುದನ್ನು ಕಲಿಯಿರಿ. ಆರೋಗ್ಯದಲ್ಲಿ ಫಿಟ್ ಆಗಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Good heart is a good health. Heart is the very important part of the human. So please follow the 10 tips in life for good heart.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more