ನೀರಿನ ಸಂಪ್‌ನಲ್ಲಿ ಬಾಲಕಿ ಮೃತದೇಹ ಪತ್ತೆ, ವಾಮಾಚಾರ ಶಂಕೆ
ಬೆಂಗಳೂರು, ಮೇ 7: ನೀರಿನ ಸಂಪ್‌ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವ ಘಟನೆ ನಗರದ ರಾಜಗೋಪಾಲನಗರದಲ್ಲಿ ಮಂಗಳವಾರ ನಡೆದಿದೆ. ಬಾಲಕಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಾಲಕಿ ಸಾವಿಗೆ ಮನೆಯ ಮಾಲಿಕನೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಜ್ಯೋತಿ ಮೃತ ಬಾಲಕಿ.ಮನೆಯ ಮಾಲೀಕ ಈ ಹಿಂದೆ ಒಮ್ಮೆ ಮನೆಯಲ್ಲಿ ಗ್ರಹಚಾರವಿದೆ ಅದಕ್ಕೆ ನರಬಲಿಕೊಡಬೇಕು ಎನ್ನುವ ಮಾತನಾಡಿದ್ದರು, ನಾವೆಲ್ಲಾ ಯಾಕೆ ತಮಾಷೆ ಮಾಡುತ್ತೀರ ಸುಮ್ಮನಿರಿ ಎಂದು ಸುಮ್ಮನಾಗಿದ್ದೆವು ಆದರೆ ಅವರು ತಮ್ಮ ಮಗಳನ್ನು ಬಲಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಮನೆ ಮಾಲೀಕ ಅಲ್ಫರಾಜ್ ವಿರುದ್ಧ ದೂರು ನೀಡಲಾಗಿದೆ. ಜ್ಯೋತಿ ತಂಗಿ ಮಾಹಿತಿ ನೀಡಿದ ಪ್ರಕಾರ ಜ್ಯೋತಿ ನೀರಿಗೆ ಬೀಳುವಾಗ ತಾನು ಅಲ್ಲಿಯೇ ಇದ್ದೆ,ಮಾಲೀಕ ಕೂಡ ಅಲ್ಲೇ ಇದ್ದ, ಆಕೆಯನ್ನು ಕಾಪಾಡುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಸತ್ತರೆ ಸಾಯಲಿ ಬಿಡು ಎಂದು ಕೋಪದಿಂದ ಆತ ನುಡಿದಿದ್ದ , ಅಕ್ಕನ ಸಾವಿಗೆ ಅಲ್ಫರಾಜ್ ಕಾರಣ ಎಂದಿದ್ದಾಳೆ.

ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, 9.30ರ ಸುಮಾರಿಗೆ ಸಂಪ್ ಬಾಗಿಲು ತೆರೆದು ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಆ ಸಂಪ್ ಗಮನಿಸಿದರೆ ಯಾರೂ ಕೂಡ ಜಾರಿ ಬೀಳಲು ಸಾದ್ಯವೇ ಇಲ್ಲ ಎನ್ನುವುದು ತಿಳಿದುಬರುತ್ತದೆ.












Click it and Unblock the Notifications