ರಂಗ ಶಂಕರದಲ್ಲಿ ತುಘಲಕ್ 25ನೇ ದರ್ಬಾರ್ !
ಬೆಂಗಳೂರು, ಜೂ.10: ಕನ್ನಡ ರಂಗಭೂಮಿಯ ಬಹು ಚರ್ಚಿತ ನಾಟಕಗಳಲ್ಲೊಂದಾದ, ಗಿರೀಶ್ ಕಾರ್ನಾಡರ ‘ತುಘಲಕ್' ನ್ನು ಬೆಂಗಳೂರು ಸಮುದಾಯವು, ರಂಗಶಂಕರದಲ್ಲಿ ಗುರುವಾರ (ಜೂ.12) ಮರುಪ್ರದರ್ಶಿಸಲಿದೆ.
ರಂಗಶಂಕರದಲ್ಲಿ ನಡೆದ ಕಾರ್ನಾಡ ನಾಟಕಗಳ ಉತ್ಸವದಲ್ಲಿ ಎಂಟು ಭಾಷೆಗಳಿಂದ ಎಂಟು ನಾಟಕಗಳು ಪ್ರದರ್ಶಿಸಲ್ಪಟ್ಟಿದ್ದು, 'ಸಮುದಾಯ' ಬೆಂಗಳೂರು ಕನ್ನಡದಲ್ಲಿ 'ತುಘಲಕ್' ನಾಟಕವನ್ನು ಆಯ್ಕೆ ಮಾಡಿಕೊಂಡಿತ್ತು. ಹೊಸಕಾಲದ ರಂಗ ಸಾಧ್ಯತೆ ಮತ್ತು ಅರ್ಥದ ಅಗತ್ಯತೆಗಳ ಹಿನ್ನೆಲೆಯಲ್ಲಿ ಇದನ್ನು ಪ್ರಯೋಗಿಸಿದ ಸಮುದಾಯ, ಈಗ ತುಘಲಕ್ ನಾಟಕದ 25ನೇ ಪ್ರದರ್ಶನ ನೀಡಲಿದೆ.
ಕಾರ್ನಾಡರ 'ತುಘಲಕ್' ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿವೆ.
ಗುರುವಾರ ಸರಿಯಾಗಿ ಸಮಯ 7.30ಕ್ಕೆ ನಾಟಕ ಪ್ರದರ್ಶನವಿರುತ್ತದೆ. ನಾಟಕ ಪ್ರಿಯರು 7 ಗಂಟೆಯೊಳಗೆ ರಂಗ ಶಂಕರಕ್ಕೆ ಬಂದರೆ ಒಳಿತು. ಜೆಪಿ ನಗರ ಎರಡನೇ ಹಂತದಲ್ಲಿರುವ ರಂಗಶಂಕರದಲ್ಲಿ 120 ನಿಮಿಷಗಳ ನಾಟಕ ನೋಡಲು 100 ರು ಟಿಕೆಟ್ ಮುಂಚಿತವಾಗಿ ಪಡೆದುಕೊಳ್ಳಿ. ಟಿಕೆಟ್ ಗಾಗಿ ಸಂಪರ್ಕಿಸಿ ಸಂಖ್ಯೆ: 99001 82400. ವೆಬ್ ಸೈಟ್ ನಲ್ಲಿ ಬುಕ್ ಮಾಡಲು ಇಂಡಿಯಾ ಸ್ಟೇಜ್.ಇನ್ ಕ್ಲಿಕ್ ಮಾಡಿ.. ನಾಟಕದ ಕುರಿತ ವಿವರ ಮುಂದೆ ಓದಿ...

ರಾಜಕಾರಣದ ಮೇಲಿನ ಧರ್ಮದ ಹಿಡಿತ
ಮೇಲ್ನೋಟಕ್ಕೆ 'ತುಘಲಕ್' ಐತಿಹಾಸಿಕ ನಾಟಕವೆನ್ನಿಸಿದರೂ, ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ.
ಧರ್ಮ ದ್ವೇಷದಿಂದ ಒಡೆದು ಚೂರಾದ ತನ್ನ ರಾಜ್ಯವನ್ನು ಶಾಂತಿ ಮತ್ತು ಸಾಮರಸ್ಯದ ತಳಹದಿಯ ಮೇಲೆ ಕಟ್ಟ ಬಯಸುವ ತುಘಲಕ್ ನಿಗೆ ಎದುರಾಗುವುದು, ಧರ್ಮಾಂಧರ ವಿರೋಧ ಮತ್ತು ರಾಜಕಾರಣವನ್ನು ತಮ್ಮ ಹತೋಟಿಯಲ್ಲಿರಿಸಲು ಹುನ್ನಾರ ನಡೆಸುವ ಅಂದಿನ ವ್ಯಾಪಾರಿ ವರ್ಗವಾದ ಅಮೀರರು.
ರಾಜಕೀಯದ ಮೇಲಿರುವ ಧರ್ಮದ ಹಿಡಿತ, ತನ್ನ ರಾಜ್ಯದ ಭವ್ಯ ಭವಿತವ್ಯದ ಕನಸು ಕಂಡ 'ತುಘಲಕ್' ನಿಗೆ ಅಡ್ಡಿ ಎನಿಸುತ್ತದೆ. ಧರ್ಮಕ್ಕೂ ರಾಜಕಾರಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸುತ್ತಾ, ಧರ್ಮದ ಮೂಲಕ ತನ್ನ ಆಡಳಿತದ ಮೇಲೆ ಹಿಡಿತ ಸಾಧಿಸಲು ಹುನ್ನಾರ ನಡೆಸುವ ಪ್ರತಿ ಧರ್ಮಾಂಧರನ್ನೂ ಧಿಕ್ಕರಿಸುತ್ತಾ ಹೊರಡುವ 'ತುಘಲಕ್' 'ನನಗೆ ರಾಜ್ಯದಲ್ಲಿ ಸಮತೆ ಬೇಕು. ಪ್ರಗತಿ ಬೇಕು. ತರ್ಕಶುಧ್ಧ ನ್ಯಾಯ ಬೇಕು. ಶಾಂತಿಯಿದ್ದರೆ ಸಾಲದು, ಜೀವಕಳೆ ಬೇಕು ಎಂದು ಕನಸು ಕಾಣುತ್ತಾನೆ.

ಭವಿತವ್ಯದ ಕನಸುಗಳನ್ನು ತುಘಲಕ್ ಹಂಚಿಕೊಳ್ಳುತ್ತಾನೆ
ಮನುಷ್ಯ ಮಾಡಿದ ಕೊಳೆಯನ್ನು ತೊಳೆಯಲು ದೇವರನ್ನೇಕೆ ಕರೆಯಲಿ ಎಂದು ಪ್ರಶ್ನಿಸುವ ತುಘಲಕ್, ತನ್ನ ಭವ್ಯ ಭವಿತವ್ಯದ ಕನಸುಗಳನ್ನು ತನ್ನ ಪ್ರಜೆಗಳಲ್ಲಿ ಹಂಚಿಕೊಳ್ಳುತ್ತಾನೆ.

ಪ್ರಗತಿಪರನಾದ ಜನನಾಯಕ
ಧರ್ಮಾಂಧತೆಯನ್ನು ಅಲ್ಲಗಳೆಯುವ ರಾಜನಿಂದ ಧರ್ಮಕ್ಕೆ ಕೇಡುಂಟಾಗುತ್ತದೆ ಎಂದು ನಂಬಿ ಪ್ರಚಾರ ಮಾಡುವ ಧರ್ಮಾಧಿಕಾರಿಗಳೂ, ಮತ್ತು, ಜನಪರವಾಗಿ, ವ್ಯಾಪಾರ ವಹಿವಾಟುಗಳ ಮೇಲೆ ತೆರಿಗೆ ವಿಧಿಸಿ, ಒಂದು ಧರ್ಮೀಯರ ಮೇಲೆ ವಿಧಿಸಿದ್ದ ತೆರಿಗೆಯನ್ನು ಮನ್ನಾ ಮಾಡಿದ ಸುಲ್ತಾನನಿಂದ ತಮ್ಮ ಬೊಕ್ಕಸ ತುಂಬುವುದಿಲ್ಲ ಎಂದು ಮನಗಂಡ ಅಮೀರರು, ತುಘಲಕ್ ವಿರುದ್ಧ ನಡೆಸುವ ಸಂಚು ಹುನ್ನಾರಗಳು, ಪ್ರಗತಿಪರನಾದ ಜನನಾಯಕ ಎದುರಿಸಬಹುದಾದ ಎಲ್ಲ ತೊಡಕುಗಳನ್ನು ಬಿಂಬಿಸುವ ನಾಟಕ, 'ತುಘಲಕ್'

ಬಹುಮುಖಿ ನೆಲೆಯ ನಾಟಕ
ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್ ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ, ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಂಡಿದೆ. 'ತುಘಲಕ್' ನಾಟಕದ ಹಲವು ಸಾಧ್ಯತೆಗಳಲ್ಲಿ ಇದೂ ಒಂದು ಸಾಧ್ಯತೆ. ಇಂದಿನ ಸಮಕಾಲೀನ ವಸ್ತು ಸ್ಥಿತಿಯ ಆಶಯವನ್ನು ಆಕೃತಿಗೊಳಿಸುವ ಪ್ರಮುಖ ಸಾಧ್ಯತೆ. ಹೊಸಕಾಲದ ಹೊಸ ಅಗತ್ಯಗಳಿಗೆ ಸ್ಪಂದಿಸುವ ಇಂಥ ಬಹುಮುಖಿ ನೆಲೆಯ ನಾಟಕವೊಂದನ್ನು ಪ್ರಯೋಗಿಸುವದಕ್ಕೆ 'ಸಮುದಾಯ' ಹೆಮ್ಮೆ ಪಡುತ್ತಿದೆ.

ಬೆಂಗಳೂರಿನ ಸಮುದಾಯ ತಂಡದ ಬಗ್ಗೆ
ಸಾಮಾಜಿಕ ಚಳವಳಿ ಮತ್ತು ಹೋರಾಟಗಳಿಗೆ ಸಾಂಸ್ಕೃತಿಕ ಆಯಾಮದ ಬದಲಾದ ಮಾದರಿಗಳನ್ನು ಕಟ್ಟಿಕೊಟ್ಟ ಸಂಘಟನೆಯೇ ಸಮುದಾಯ. ತುರ್ತು ಪರಿಸ್ಥಿತಿಯ ಸಾಮಾಜಿಕ ತುರ್ತಿನಲ್ಲಿ ಜನಪರ ಹಾಗೂ ಪ್ರಜಾಪ್ರಭುತ್ವವಾದೀ ಚಿಂತಕರು ನಿರಂತರ ಚಳವಳಿಗಳ ಮೂಲಕ ಹೋರಾಟದ ಬೇರನ್ನು ಗಟ್ಟಿಗೊಳಿಸಿದ್ದಾರೆ.
1975ರಿಂದ ಸತತವಾಗಿ ಹಲವು ಪ್ರಮುಖ ನಾಟಕಗಳಾದ 'ತಾಯಿ', 'ಕುರಿ', 'ಸಂಕ್ರಾಂತಿ', 'ಮಹಾಚೈತ್ರ', 'ಕತ್ತಲೆದಾರಿದೂರ', 'ರುಡಾಲಿ', 'ಪಂಪಭಾರತ', 'ಜುಗಾರಿಕ್ರಾಸ್' ಹಾಗೂ ಇನ್ನು ಹತ್ತು ಹಲವು ವಿನೂತನ ನಾಟಕಗಳನ್ನು ಪ್ರಯೋಗಿಸಿರುವ ಸಮುದಾಯ ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ನಿರಂತರವಾದ ಜನ ಸಂಸ್ಕೃತಿ ಜಾಥಾಗಳು, ವಿಚಾರ ಸಂಕಿರಣಗಳು, ಬೀದಿನಾಟಕಗಳು, ರಂಗ ತರಬೇತಿ ಕಾರ್ಯಾಗಾರಗಳು ಹಾಗೂ ಇತರೆ ಸಾಮಾಜಿಕ ಚಿಂತನೆಗಳುಳ್ಳ ಚಟುವಟಿಕೆಗಳು ಮುಖ್ಯ ಹೋರಾಟವನ್ನು ಶಕ್ತಗೊಳಿಸಿವೆ.

ತುಘಲಕ್ ನಾಟಕ ತಂಡ ವಿವರ
ರಚನೆ: ಗಿರೀಶ ಕಾರ್ನಾಡ್
ಅಭಿನಯ: ‘ಸಮುದಾಯ' ಬೆಂಗಳೂರು
ವಿನ್ಯಾಸ ಮತ್ತು ನಿರ್ದೇಶನ: ಡಾ. ಸ್ಯಾಮ್ ಕುಟ್ಟಿ ಪಟ್ಟಂಕಾರಿ
ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
ಸ್ಥಳ: ರಂಗಶಂಕರ
ದಿನಾಂಕ ಮತ್ತು ಸಮಯ: 12/06/2014; ಸಂಜೆ 7:30ಕ್ಕೆ,
ಟಿಕೆಟ್ ದರ: ರೂ. 100/-
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 99001 82400
ವೆಬ್ ಸೈಟ್ : www.indianstage.in, bookmyshow.com
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications