ಬೆಂಗಳೂರಲ್ಲಿ ಜರ್ಮನಿ ಕಂಪನಿಯ ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಲ್ಯಾಬ್, ಕಚೇರಿ
ಬೆಂಗಳೂರು, ಡಿಸೆಂಬರ್ 14: ರಾಜಧಾನಿ ಬೆಂಗಳೂರಿನಲ್ಲಿ ಜರ್ಮನಿ ಮೂಲದ ಪರೀಕ್ಷೆ, ಲೆಕ್ಕ ಪರಿಶೋಧನೆ, ತಪಾಸಣೆ ಮತ್ತು ತರಬೇತಿ ಕಂಪನಿಯಾದ ಟಿಯುವಿ ಎಸ್‌ಯುಡಿ ತನ್ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದೆ. ಈ ಯೋಜನೆಯಲ್ಲಿ ಎರಡನೇ ಹಂತದಲ್ಲಿ ಎಲೆಕ್ಟ್ರಿಕ್ ವಾಹನ ಬ್ಯಾಟರಿ ಲ್ಯಾಬ್ ಅನ್ನು ಕಂಪನಿ ಸ್ಥಾಪಿಸಲಿದೆ ಎಂಬ ಮಾಹಿತಿ ಇದೆ.
ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿಯ ಸದಸ್ಯ ಇಶಾನ್ ಪಾಲಿತ್ ಅವರು ಎರಡನೇ ಹಂತದ ಹೂಡಿಕೆ ಮಾಡುವ ವಿಚಾರದ ಕುರಿತು ಮಾತನಾಡಿದ್ದಾರೆ. ಎಲೆಕ್ಟ್ರಿಕ್ ಬ್ಯಾಟರಿಗಳ ಜೀವಿತಾವಧಿಯು ತೀವ್ರ ಪರೀಕ್ಷೆಗಳು ಈ ಬೆಂಗಳೂರಿನ ಕ್ಯಾಂಪಸ್‌ನಲ್ಲಿ 1.5 ಎಕರೆ ಪ್ರದೇಶದ ಬ್ಯಾರಿ ಉತ್ಪನ್ನ ಸಂಬಂಧಿ ಘಟಕದಲ್ಲಿ ನಡೆಯಲಿವೆ. ಈ ಕುರಿತು 'ಡಿಎಚ್' ವರದಿ ಮಾಡಿದೆ.

ಬೆಂಗಳೂರಿನಲ್ಲಿ ಕಂಪನಿಯು €15 ಮಿಲಿಯನ್ (15 ಯುರೋ) ಹೂಡಿಕೆ ಮಾಡುತ್ತಿದೆ. ಈ ವೆಚ್ಚದಲ್ಲಿ ಸಮಗ್ರ ಕಚೇರಿ, ತರಬೇತಿ ಕೇಂದ್ರ ಮತ್ತು ಪ್ರಯೋಗಾಲವನ್ನು ನಿರ್ಮಾಣದ ಉದ್ದೇಶ ಹೊಂದಿದೆ. ಒಟ್ಟು ಉದ್ದೇಶಿತ ಕಚೇರಿಯಲ್ಲಿ 70,000 ಚದರ ಅಡಿ ದೇವನಹಳ್ಳಿಯ KIADB ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಜಾಗ ಸಹ ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
ರಾಜಧಾನಿಯಲ್ಲಿ ಎರಡನೇ ಲ್ಯಾಬ್ ಹೊಂದಿದೆ
ಬೆಂಗಳೂರಿನ ಮಟ್ಟಿಗೆ ಇದು ಎರಡನೇ ಪ್ರಯೋಗಾಲವಾಗಿದೆ. ಏಕೆಂದರೆ ಈ ಮೊದಲು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಫುಡ್ ಅನಾಲಿಟಿಕಲ್ ಮತ್ತು ಕೆಮಿಕಲ್ ಮತ್ತು ಮೈಕ್ರೋಬಯಾಲಜಿ ಲ್ಯಾಬ್ ನಿರ್ಮಾಣವಾಗಿದೆ. ಕಂಪನಿಯು 150 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಜರ್ಮನಿ ಮೂಲದ ಈ ಕಂಪನಿಯು ತನ್ನ ಹೊಸ ಪ್ರಯೋಗಾಲಯಕ್ಕೆ 200 ನೌಕರರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ. ವಿದ್ಯುತ್ ಸುರಕ್ಷತೆ, ವಿದ್ಯುತ್ಕಾಂತೀಯ ಹೊಂದಾಣಿಕೆ (EMC), ಮತ್ತು ವೈದ್ಯಕೀಯ ಸಾಧನ ಜೈವಿಕ ಹೊಂದಾಣಿಕೆ, ಸೂಕ್ಷ್ಮ ಜೀವವಿಜ್ಞಾನ ಪರೀಕ್ಷೆ ಮತ್ತು ಪ್ರಮಾಣೀಕರಣ ಸೇವೆಗಳನ್ನು ಇಲ್ಲಿನ ಘಟಕದಿಂದ ಒದಗಿಸಲಿದೆ. ಇದು ಎಲೆಕ್ಟ್ರಿಕ್ ವಾಹನಗಳ ಸೇವೆಗೆ ಪೂರಕವಾಗಿರಲಿದೆ.

ಕಂಪನಿಯಿಂದ ದೇಶದ ಜಿಡಿಪಿಗೆ ಕೊಡುಗೆ
ಇಂಧನ ಪರಿವರ್ತನೆ ಅಂದರೆ ಎಲೆಕ್ಟ್ರಿಕ್ ವಾಹನಗಳ ವಲಯವು ಭಾರತಕ್ಕೆ ಎರಡನೇ ದೊಡ್ಡ ಕ್ಷೇತ್ರವಾಗಿದೆ ಎಂದು ಪಾಲಿತ್ ಹೇಳಿದರು. ಈವರೆಗೆ 39 ಕಚೇರಿಗಳು ಮತ್ತು ಆರು ಲ್ಯಾಬ್‌ಗಳನ್ನು ಹೊಂದಿರುವ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ €3.2 ಬಿಲಿಯನ್ ಯೂರೋ ಕಂಪನಿ €60 ಯುರೋ ಮಿಲಿಯನ್ (Rs 500 ಕೋಟಿಗಳು) ಕೊಡುಗೆ ನೀಡಲಿದೆ. ಇದರಿಂದ ಜಿಡಿಪಿಗೆ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ.
ಹೊಸ ವರ್ಷದಲ್ಲಿ ಶೇ.15ರಷ್ಟು ಬೆಳವಣಿಗೆ ಗುರಿ
ಪ್ರಸ್ತುತ ಇಷ್ಟು ಹೂಡಿಕೆಯೊಂದಿಗೆ ಕಂಪನಿಯು ಮುಂದಿನ ವರ್ಷ ಶೇಕಡಾ 15ರಷ್ಟು ಬೆಳವಣಿಗೆ ಹೊಂದುವ ಗುರಿ ಇಟ್ಟುಕೊಂಡಿದೆ. ಸದ್ಯ ಕಂಪನಿಯು ಬೆಂಗಳೂರಲ್ಲಿ ಪ್ರಯೋಗಾಲ ಸೌಲಭ್ಯ ಘಟಕ ಹೊಂದಿದೆ. ರಾಣಿಪೇಟ್ ನಲ್ಲಿ ಚರ್ಮ ಮತ್ತು ಪಾದರಕ್ಷೆ ಉತ್ಪಾದನೆ, ಗುರುಗ್ರಾಮ್ ಆಟಿಕೆಗಳು ಮತ್ತು ಉಡುಪು, ಮುಂಬೈ ಗೃಹಬಳಕೆಯ ರಾಸಾಯನಿಕಗಳು, ತಿರುಪ್ಪೂರ್ ನಲ್ಲಿ ಉಡುಪು ಮತ್ತು ವಿಶಾಖಪಟ್ಟಣಂ ಮಸಾಲೆಗಳು ಮತ್ತು ಸಮುದ್ರಾಹಾರ ನಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಹೊಂದಿದೆ.
ಆಹಾರ ಸುರಕ್ಷತೆ, ವೈದ್ಯಕೀಯ ಸಾಧನ, ಎಲೆಕ್ಟ್ರಿಕ್ ವಾಹನ, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಸುರಕ್ಷತೆ ಮತ್ತು ಉಡುಪುಗಳು ಮತ್ತು ಶೂಗಳು ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಕಂಪನಿಯು ಭಾರತದಲ್ಲಿ ಸುಮಾರು 10,000 ಗ್ರಾಹಕರನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.












Click it and Unblock the Notifications