ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಸಿಸಿಬಿ ಪೊಲೀಸರಿಗೆ ಶರಣಾಗತಿ
ಬೆಂಗಳೂರು, ಅಕ್ಟೋಬರ್ 3: ಉದ್ಯಮಿ ದಿ.ಆದಿಕೇಶವುಲು ಅವರ ಮೊಮ್ಮಗ ಗೀತಾ ವಿಷ್ಣು ಮಂಗಳವಾರ ಸಿಸಿಬಿ ಪೊಲೀಸರಿಗೆ ಶರಣಾಗಿದ್ದಾನೆ. ಸೆಪ್ಟೆಂಬರ್ ಇಪ್ಪತ್ತೆಂಟರಂದು ಕಾರು ಅಪಘಾತ ಮಾಡಿದ್ದ ವಿಷ್ಣು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ. ಆ ನಂತರ ಅಲ್ಲಿಂದ ಪರಾರಿಯಾಗಿದ್ದ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.
ವಿಷ್ಣುವಿನ ಕುಟುಂಬದವರ ವಿಚಾರಣೆ ಕೂಡ ನಡೆದಿತ್ತು. ಇದೇ ವೇಳೆ ಅಪಘಾತ ನಡೆದ ದಿನ ಕಾರಿನಲ್ಲಿ ಕನ್ನಡ ಚಿತ್ರರಂಗದ ನಟರೂ ಇದ್ದರು ಎಂಬ ಮಾತು ಕೇಳಿಬಂದಿತ್ತು. ನಟ ದೇವರಾಜ್ ಅವರ ಮಗ ಪ್ರಣಾಮ್ ನ ವಿಚಾರಣೆಯನ್ನು ಕೂಡ ಪೊಲೀಸರು ನಡೆಸಿದ್ದರು. ಆಗ ಮಾತನಾಡಿದ್ದ ಪ್ರಣಾಮ್, ನಾನು ಹಾಗೂ ವಿಷ್ಣು ಸ್ನೇಹಿತರು. ಅಪಘಾತದ ನಂತರ ಆ ಸ್ಥಳಕ್ಕೆ ಹೋಗಿದ್ದೆ ಎಂದು ಹೇಳಿದ್ದರು.

ಮೂಲಗಳ ಪ್ರಕಾರ ಗೀತಾ ವಿಷ್ಣು ಹೈದರಾಬಾದ್ ಹಾಗೂ ಗೋವಾದಲ್ಲಿ ತಲೆ ಮರೆಸಿಕೊಂಡಿದ್ದ. ಅಪಘಾತ ಪ್ರಕರಣದ ತನಿಖೆ ಬಗ್ಗೆ ಸಿಸಿಬಿ ಪೊಲೀಸರಿಗೂ ಒತ್ತಡ ಹೆಚ್ಚಿದ್ದರಿಂದ ಗೀತಾ ವಿಷ್ಣುವಿನ ತಂದೆ ಶ್ರೀನಿವಾಸ್ ಮೂರ್ತಿ ಅವರ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ವಿಷ್ಣು ಪೊಲೀಸರಿಗೆ ಶರಣಾಗಿದ್ದಾನೆ.











Click it and Unblock the Notifications