Get Updates
Get notified of breaking news, exclusive insights, and must-see stories!

GBA: ನಾಳೆ ಫೋನ್-ಇನ್ ಕಾರ್ಯಕ್ರಮ: ಕರೆ ಮಾಡಿ ನೀವು ಪಾಲ್ಗೊಳ್ಳಿ...

ಬೆಂಗಳೂರು, ನವೆಂಬರ್ 09: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ನಾಳೆ ಸೋಮವಾರ ನವೆಂಬರ್ 10ರಂದು ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಾಲಿಕೆ ವ್ಯಾಪ್ತಿಯ ನಾಗರಿಕರು ಅಹವಾಲು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಹೇಳಿದರು.

ಸೋಮವಾರ ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ಗಂಟೆಯವರೆಗೆ ನಾಗರಿಕರು ದೂರವಾಣಿ ಮೂಲಕ ಕರೆ ಮಾಡಿ (ದೂರವಾಣಿ ಸಂಖ್ಯೆ ಲ್ಯಾಂಡ್‌ ಲೈನ್: 080-22975803) ಆಯುಕ್ತರಲ್ಲಿ ನೇರವಾಗಿ ಕುಂದುಕೊರತೆ, ಅಹಲವಾಲನ್ನು ಸಲ್ಲಿಸಬಹುದು. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರೀಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶ ಆಯುಕ್ತರು ಹೊಂದಿದ್ದಾರೆ.

GBA to Hold Phone-In Program Tomorrow Nov 10th Monday for Citizen Grievances

ಫೋನ್-ಇನ್ ಕಾರ್ಯಕ್ರಮವನ್ನು ಸಾರ್ವಜನಿಕರಿಂದ ಈ ಕೆಳಕಂಡ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತಂತೆ ದೂರವಾಣಿ ಮೂಲಕ ಅಹವಾಲುಗಳನ್ನು ಸಲ್ಲಿಸಬಹುದು. ಯಾವೆಲ್ಲ ಸಮಸ್ಯೆಗಳು, ಮನವಿ ಮಾಡಿಕೊಳ್ಳಬೇಕೆಂದು ವಿಷಯಗಳ ಪಟ್ಟಿ ಕೊಡಲಾಗಿದೆ.

ಅಹವಾಲು ಸಲ್ಲಿಸಬೇಕಾದ ವಿಷಯಗಳು

* ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ಥಿ ಕಾರ್ಯಗಳು
* ಬೀದಿ ದೀಪಗಳ ನಿರ್ವಹಣೆ
* ಕಸ ವಿಲೇವಾರಿ
* ಒಣಗಿದ / ಅಪಾಯಕಾರಿ ಮರ/ಕೊಂಬೆಗಳ ಕತ್ತರಿಸುವಿಕೆ
* ಉದ್ಯಾನವನಗಳ ನಿರ್ವಹಣೆ
* ಇ-ಖಾತಾ ಸಂಬಂಧಿತ ವಿಷಯಗಳು
* ಅನಧಿಕೃತ ಬ್ಯಾನರ್/ಪೋಸ್ಟರ್ ಗಳ ತೆರವು
* ಪಾದಚಾರಿ ಮಾರ್ಗದ ನಿರ್ವಹಣೆ ಮತ್ತು ಒತ್ತುವರಿ
* ಚರಂಡಿ ಶುದ್ಧೀಕರಣ
* ನಗರಪಾಲಿಕೆಯಿಂದ ಇನ್ನಿತರೆ ಮೂಲಭೂತ ಸೌಕರ್ಯ ಕಲ್ಪಿಸುವ ಅಹವಾಲುಗಳು

ನಾಗರಿಕರಿಂದ ಸ್ವೀಕೃತವಾಗುವ ಅಹವಾಲುಗಳನ್ನು ಮಾನ್ಯ ಆಯುಕ್ತರು ಖುದ್ದಾಗಿ ಆಲಿಸಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು. ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಪಾಲಿಕೆ ಪ್ರಕಟಣೆ ಮೂಲಕ ಕೋರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+