Get Updates
Get notified of breaking news, exclusive insights, and must-see stories!

ಬೆಂಗಳೂರಿನ ಅತಿ ಮೌಲ್ಯಯುತ ಭೂಮಿ ಬಳಕೆಯ ಬಗ್ಗೆ ಜಿಬಿಎ ಕಮಿಷನರ್ ಮಹತ್ವದ ಅಪ್ಡೇಟ್ಸ್‌

ಕರ್ನಾಟಕದ ಇನ್ನುಳಿದ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಮೌಲ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲೇ ಇದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಭೂಮಿ, ಪ್ರಾಪರ್ಟಿ ಅದರಲ್ಲೂ ಮೌಲ್ಯಯುತ ಭೂಮಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಮಾಡಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಮೌಲ್ಯಯುತ ಭೂಮಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶ ಮತ್ತು ಯೋಜನಾ ದೃಷ್ಟಿಯಿಂದ ಪ್ರೀಮಿಯಂ ಎಫ್.ಎ.ಆರ್ (Floor Area Ratio) ಅನ್ನು ಬಳಸಲು ಕೆ.ಟಿ.ಸಿ.ಪಿ ಕಾಯ್ದೆ 1961ರ ಕಲಂ 18(B) ಮತ್ತು ಯೋಜನಾ ಪ್ರಾಧಿಕಾರ ನಿಯಮ 37(E) ರಲ್ಲಿ ಮೂಲ ಎಫ್.ಎ.ಆರ್ ಗೆ ಹೆಚ್ಚುವರಿಯಾಗಿ ಪ್ರೀಮಿಯಂ ಎಫ್.ಎ.ಅರ್ ಅನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.

GBA Commissioner gives important updates highly valuable land in Bengaluru

ಕೆ.ಟಿ.ಸಿ.ಪಿ ಕಾಯ್ದೆ 1961ರ ಕಲಂ 13(ಇ) ಅಡಿಯಲ್ಲಿ ಆರ್.ಎಂ.ಪಿ-2015ರ ವಲಯ ನಿಯಮಾವಳಿಗಳಿಗೆ ತಿದ್ದುಪಡಿ ತರಲು, ವಲಯ ನಿಯಮಾವಳಿಗಳಿಗೆ ಅಧ್ಯಾಯ - 11ನ್ನು ಸೇರ್ಪಡೆಗೊಳಿಸಿ ("PREMIUM F.A.R GRANTED BY LEVY OF PREMIUM CHARGES") ನಿಯಮಗಳಿಗೆ ತಿದ್ದುಪಡಿ ತಂದು ದಿನಾಂಕ: 02.04.2025 ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ ಎಂದು ಹೇಳಲಾಗಿದೆ.

1. ಅಭಿವೃದ್ಧಿದಾರರು/ಮಾಲೀಕರುಗಳು ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ಕೋರುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಪ್ರೀಮಿಯಂ ಎಫ್.ಎ.ಆರ್ ಉಪಯೋಗಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲು ನಕ್ಷೆ ತಯಾರಿಸಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಬಹುದಾಗಿರುತ್ತದೆ.

2. ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಶುಲ್ಕಗಳನ್ನು ಪಾವತಿಸಲು ತಿಳಿಸುವ ಸಂದರ್ಭದಲ್ಲಿ ಪ್ರೀಮಿಯಂ ಎಫ್.ಎ.ಆರ್ ವಿಸ್ತೀರ್ಣಕ್ಕೆ ತಗಲುವ ಶುಲ್ಕಗಳನ್ನು ಲೆಕ್ಕಾಚಾರ ಮಾಡಿ ಕಟ್ಟಡ ಶುಲ್ಕಗಳೊಂದಿಗೆ ಪ್ರೀಮಿಯಂ ಎಫ್.ಎ.ಆರ್ ಶುಲ್ಕವನ್ನು ಸಹ ಪಾವತಿಸಲು ಸಂಬಂದಪಟ್ಟ ನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣದಾರರಿಗೆ ತಿಳಿಸಲಾಗುತ್ತದೆ.

3. ಮೇಲ್ಕಂಡ ಎಲ್ಲಾ ಶುಲ್ಕಗಳನ್ನು ಪಾಲಿಕೆಗೆ ಪಾವತಿಸಿದಲ್ಲಿ ಮೂಲ ಎಪ್.ಎ.ಆರ್. ನೊಂದಿಗೆ ಪ್ರಿಮಿಯಂ ಎಫ್.ಎ.ಆರ್ ಅನ್ನು ಸಹ ಬಳಸಿ ನಿರ್ಮಾಣ ಮಾಡಲು ಕಟ್ಟಡ ನಕ್ಷೆ ಮಂಜೂರಾತಿಯನ್ನು ನಗರ ಪಾಲಿಕೆಗಳಿಂದ ನೀಡಲಾಗುವುದು.

4. ಇದು ಸರಳವಾದ ಪ್ರಕ್ರಿಯೆಯಾಗಿದ್ದು, ಈ ವ್ಯವಸ್ಥೆಯು ಈಗಾಗಲೇ ಚಾಲ್ತಿಯಲ್ಲಿದೆ. ಇಒಡಿಬಿ ತಂತ್ರಾಂಶದಲ್ಲಿ ಇದನ್ನು ಅಳವಡಿಸಲಾಗಿದ್ದು, ಸಂಬಂಧಪಟ್ಟ ಎಲ್ಲರು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

5. ಪ್ರೀಮಿಯಂ ಎಫ್.ಎ.ಆರ್ ನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಐದು ನಗರ ಪಾಲಿಕೆಗಳಿಂದ ವಾರ್ಷಿಕ ಸರಿಸುಮಾರು 2,000 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಜಿಬಿಎ ಹೇಳಿದೆ.

ಮೇಲ್ಕಂಡ ಕೋಷ್ಟಕದಲ್ಲಿ ವಿವರಿಸಿರುವಂತೆ, ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರವನ್ನು ಪರಿಗಣಿಸಿ ಮೂಲ ಎಪ್.ಎ.ಆರ್‌ಗೆ ಹೆಚ್ಚುವರಿ ಎಫ್.ಎ.ಆರ್ (ಪ್ರಿಮಿಯಂ ಎಫ್.ಎ.ಆರ್) ಅನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅದರಂತೆ, ಮಾರ್ಗಸೂಚಿ ದರದ ಅನ್ವಯ ಶುಲ್ಕಗಳನ್ನು ಲೆಕ್ಕಾಚಾರ ಮಾಡಿ ಹೆಚ್ಚುವರಿ ಎಫ್.ಎ.ಆರ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಕೋಷ್ಟಕದಲ್ಲಿ (ಪ್ರತಿ ಲಗತ್ತಿಸಿದೆ) ವಿವರಿಸಿರುವಂತೆ ಅಗತ್ಯ ಶುಲ್ಕಗಳನ್ನು ಪಾವತಿಸುವ ಮೂಲಕ ಮೂಲ ಎಫ್.ಎ.ಆರ್‌ನ 0.4 ರಷ್ಟು(ಅಂದರೆ ಶೇ. 40 ರಷ್ಟು) ಪ್ರೀಮಿಯಂ ಎಫ್.ಎ.ಆರ್ ಅನ್ನು ಪಡೆಯಬಹುದಾಗಿರುತ್ತದೆ. ಅದನ್ನು ಹೊರತುಪಡಿಸಿ ಮೂಲ ಎಫ್.ಎ.ಆರ್‌ನ 0.2 ರಷ್ಟು (ಅಂದರೆ ಶೇ. 20 ರಷ್ಟು) ಟಿಡಿಆರ್ ಅನ್ನು ಬಳಸುವ ಮೂಲಕ ಹೆಚ್ಚುವರಿಯಾಗಿ ಪಡೆಯಬಹುದಾಗಿದ್ದು, ಒಟ್ಟಾರೆ ಗರಿಷ್ಠ ಮೂಲ ಎಫ್.ಎ.ಆರ್‌ನ 0.6 ರಷ್ಟು(ಅಂದರೆ ಶೇ. 60 ರಷ್ಟು) ಹೆಚ್ಚುವರಿ ಎಫ್.ಎ.ಆರ್ ಬಳಸಬಹುದಾಗಿರುತ್ತದೆ.

ಈ ತಿದ್ದುಪಡಿಗೆ ಕೆಲವರು ಹೈಕೋರ್ಟ್‌ನಲ್ಲಿ WP no: 6347/2025 ಹಾಗೂ WP No: 11201/2025 ರಲ್ಲಿ ದಾವೆ ಹೂಡಿದ್ದರು. ಆದರೆ, ಹೈಕೋರ್ಟ್‌ ದಿನಾಂಕ: 05.12.2025 ರಂದು ಸದರಿ ದಾವೆಯನ್ನು ವಜಾಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪರವಾಗಿ ತೀರ್ಪು ಬಂದಿರುತ್ತದೆ. ಅದರಿಂದಾಗಿ ಇನ್ನು ಮುಂದೆ ಸಾರ್ವಜನಿಕರು, ಭೂ ಮಾಲೀಕರು, ಅಭಿವೃದ್ದಿದಾರರು ಮತ್ತು ನಿರ್ಮಾಣದಾರರು ಪ್ರಿಮಿಯಂ ಎಫ್.ಎ.ಆರ್ ಅನ್ನು ಸದುಪಯೋಗ ಪಡಿಸಿಕೊಳ್ಳಲು ಈ ಕೆಳಕಂಡ ವಿಧಾನದಡಿಯಲ್ಲಿ ಪ್ರಿಮಿಯಂ ಎಫ್.ಎ.ಆರ್ ಅನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+