ಗೌರಿ ಲಂಕೇಶ್ ಮಾಜಿ ಪತಿ ಚಿದಾನಂದ್ ಹೇಳಿದ್ದೇನು?
ಗೌರಿ ಲಂಕೇಶ್ ಹತ್ಯೆ ಬಗ್ಗೆ ಅವರ ಮಾಜಿ ಪತಿ ಪ್ರತಿಕ್ರಿಯೆ. ಫೇಸ್ ಬುಕ್ ನಲ್ಲಿ ಗೌರಿ ಲಂಕೇಶ್ ಹತ್ಯೆ ಬಗ್ಗೆ ಸಾಂತ್ವನ.
ಬೆಂಗಳೂರು, ಸೆಪ್ಟೆಂಬರ್ 6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಬಗ್ಗೆ ಅವರ ಮಾಜಿ ಪತಿ ಚಿದಾನಂದ ರಾಜಘಟ್ಟ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ, ಅದರ ಜತೆಯಲ್ಲೇ, ತಮ್ಮ ಮಾಜಿ ಪತ್ನಿಯ ವೈಚಾರಿಕತೆಯನ್ನು ಶ್ಲಾಘಿಸಿದ್ದಾರೆ.
ಸೆಪ್ಟೆಂಬರ್ 5ರ ರಾತ್ರಿ ಸುಮಾರು 8 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದ ಬಳಿ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದರು.

ಫೇಸ್ ಬುಕ್ ನಲ್ಲಿ ಇಂಗ್ಲೀಷ್ ನಲ್ಲಿ ತಮ್ಮ ಸಾಂತ್ವನ ಹೇಳಿರುವ ಅವರು, ''ಘನತೆ, ಸಮಗ್ರತೆ, ನಿರ್ಭೀಡೆ. ಕೆಲಸಗಳು ಮುಂದುವರಿಯುತ್ತವೆ'' ಎಂದು ಹೇಳಿದ್ದಾರೆ.
ಈ ಮೂಲಕ, ಗೌರಿ ಲಂಕೇಶ್ ಅವರ ವೈಚಾರಿಕತೆಯು ಎಂದಿಗೂ ಅಜರಾಮರ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.
ಇದು ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆಯಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿಗೂ ಕಾರಣವಾಗಿದೆ.











Click it and Unblock the Notifications