ಗೌರಿ ಲಂಕೇಶ್ ಒಂದು ದಿನದ ಮಟ್ಟಿಗೆ ಹಂತಕರಿಂದ ಪಾರಾಗಿದ್ದರು!
ಬೆಂಗಳೂರು, ಆಗಸ್ಟ್ 30: ಬೆಂಗಳೂರಿನಲ್ಲಿ ಪತ್ರೆಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೋದಂತೆ ಇನ್ನಷ್ಟು ನಿಗೂಢವಾಗುತ್ತಿದೆ. ಗೌರಿ ಲಂಕೇಶ್ ಒಂದು ದಿನದ ಮಟ್ಟಿಗೆ ಹಂತಕರಿಂದ ಪಾರಾಗಿದ್ದರು.
ಎಸ್‌ಐಟಿ ತನಿಖೆಯಿಂದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಗೌರಿ ಲಂಕೇಶ್ ಹತ್ಯೆಗೆ ಅಮೋಲ್ ಕಾಳೆ ಎರಡು ಟೀಂ ತಯಾರು ಮಾಡಲಾಗಿತ್ತು. ಒಂದು ಪರಶುರಾಮ ವಾಗ್ಮೋರೆ ಟೀಂ, ಗಣೇಶ ಮಿಸ್ಕಿನ್ ಟೀಂ ಮತ್ತೊಂದು ಸುಧನ್ವ ಗೋಂದೇಳ್ಕರ್ ಇತರರ ಟೀಂ.
ಇವರ ಪ್ಲ್ಯಾನ್ ಪ್ರಾಕಾರ ಸೆಪ್ಟೆಂಬರ್ 4ರಂದೇ ಗೌರಿ ಲಂಕೇಶ್ ಹತ್ಯೆಯಾಗಬೇಕಿತ್ತು ಆದರೆ ಅಂದು ವಾಗ್ಮೋರೆ ಹೋಗುವಷ್ಟರಲ್ಲಿ ಗೌರಿ ಲಂಕೇಶ್ ಮನೆ ಸೇರಿದ್ದ ಕಾರಣ ಒಂದು ದಿನದ ಮಟ್ಟಿಗೆ ಹಂತಕರಿಂದ ಪಾರಾಗಿದ್ದರು. ಗೌರಿ ಲಂಕೇಶ್ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿನಗರ ನಿವಾಸದ ಎದುರು ಹತ್ಯೆಯಾಗುತ್ತಾರೆ.

ಅವರಿಗೆ ಸಂಭಂಧಿಸಿದಂತೆ ಈಗಾಗಲೇ 12ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಬೈಕ್ ಒಂದುಪುಣೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಹಂತಕರಿಗೆ ಆಶ್ರಯ ನೀಡಿದ್ದ, ಬೈಕ್ ಕೊಟ್ಟ ಆರೋಪ ಎದುರಿಸುತ್ತಿರುವ ಸಿವಿಲ್ ಗುತ್ತಿಗೆದಾರ ಕುಣಿಗಲ್ ಸುರೇಶ್‌ನಿಂದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈ ಬೈಕ್ ಗಳನ್ನು ಗೌರಿ ಹತ್ಯೆಗೆ ಮುನ್ನ ಅದಕ್ಕೆ ಸಂಚು ರೂಪಿಸುವ ಓಡಾಟಕ್ಕೆ ಬಳಸಲಾಗಿತ್ತು.ನರೇಂದ್ರ ದಾಭೋಲ್ಕರ್ ಹತ್ಯೆಗೆ ಬಳಸಿದ್ದ ಬೈಕ್ಅನ್ನೇ ಗೌರಿ ಹತ್ಯೆಗೆ ಕೂಡ ಬಳಸಲಾಗಿದೆ ಎಂಬ ಸುಳಿವು ಸಿಕ್ಕಿದೆ.












Click it and Unblock the Notifications