ಗೌರಿ ಹತ್ಯೆ ಆರೋಪಿ ಪರಶುರಾಮ್ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು, ಜೂನ್ 25: ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಘ್ಮೋರೆಯ ನ್ಯಾಯಾಂಗ ಬಂಧನವನ್ನು ವಿಸ್ತರಣೆಗೊಳಿಸುವಂತೆ ಎಸ್‌ಐಟಿ ನೀಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

14 ದಿನಗಳ ಎಸ್‌ಐಟಿ ಕಸ್ಟಡಿ ಅಂತ್ಯವಾದ ಕಾರಣ ಪರಶುರಾಮ್‌ನನ್ನು ಎಸ್ಐಟಿಯು 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು.

ಪರಶುರಾಮ್‌ಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿತು. ಆದೇಶಕ್ಕೂ ಮುನ್ನಾ ಪರಶುರಾಮ್‌ನನ್ನು ಹಲವು ಪ್ರಶ್ನೆಗಳನ್ನು ನ್ಯಾಯಾಧೀಶರು ಕೇಳಿದರು.

Gauri Lankesh murder accused judicial costedy extension

ಪೊಲೀಸರು ಹೊಡೆದರಾ, ನಿಂದಿಸಿದರಾ, ಕಸ್ಟಡಿಯಲ್ಲಿ ಏನಾದರೂ ತೊಂದರೆಯಾಯಿತಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ನೀಡಿದರು.

ಪರಶುರಾಮ್ ವಾಘ್ಮೋರೆಯನ್ನು ಎಸ್‌ಐಟಿ ತಂಡ 14 ದಿನಗಳಿಂದ ತೀವ್ರ ವಿಚಾರಣೆ ನಡೆಸಿದ್ದು, ಹಲವು ಮಹತ್ವದ ವಿಚಾರಗಳನ್ನು ಬಯಲಿಗೆಳೆದಿದೆ. ವಾಘ್ಮೋರೆಯೇ ಗೌರಿ ಲಂಕೇಶ್‌ಗೆ ಗುಂಡು ಹೊಡೆದಿರುವುದು ಎಂದು ಎಸ್‌ಐಟಿ ಕೋರ್ಟ್‌ಗೆ ಹೇಳಿದ್ದು ಹೆಚ್ಚಿನ ತನಿಖೆ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+