ಗೌರಿ ಲಂಕೇಶ್ ಹತ್ಯೆ: ಅಗ್ನಿ ಶ್ರೀಧರ್, ಮುತ್ತಪ್ಪ ರೈ ಹೇಳಿಕೆ ದಾಖಲು
Recommended Video

ಬೆಂಗಳೂರು, ಸೆ. 20 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅಗ್ನಿ ಶ್ರೀಧರ್, ಉದ್ಯಮಿ ಮುತ್ತಪ್ಪ ರೈ ಸೇರಿದಂತೆ 15ಕ್ಕೂ ಹೆಚ್ಚು ಜನರಿಂದ ಹೇಳಿಕೆಯನ್ನು ಎಸ್ ಐಟಿ ಪಡೆದುಕೊಂಡಿದೆ.
ಈ ಹಿಂದೆ ಗೌರಿ ಲಂಕೇಶ್ ಅವರ ವಿರುದ್ಧ ವಿವಿಧ ಕಾರಣಗಳಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದವರೆಲ್ಲರನ್ನು ಪಟ್ಟಿ ಮಾಡಿ ಪ್ರಶ್ನಿಸಲಾಗಿದೆ.

ಜಯ ಕರ್ನಾಟಕ ಸಂಘಟನೆ ಮುಖ್ಯಸ್ಥ ಮುತ್ತಪ್ಪ ರೈ ಹಾಗೂ ಅಗ್ನಿ ಪತ್ರಿಕೆ ಸಂಪಾದಕ ಶ್ರೀಧರ್ ಅವರ ನಿವಾಸಕ್ಕೆ ಮಂಗಳವಾರ ಸಂಜೆ ತೆರಳಿದ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರಿ ಹತ್ಯೆ ಹಿಂದೆ ಹಿಂದೂ ಬ್ರಿಗೇಡ್ ಸ್ಲೀಪಿಂಗ್ ಸೆಲ್ಸ್ ಗಳ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಪೆರಿಯಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಇದೇ ರೀತಿ ಹೇಳಿಕೆಯನ್ನು ಅವರು ನೀಡಿದ್ದರು. ಎಸ್ ಐಟಿ ತನಿಖೆಗೆ ಅಗತ್ಯ ಸಹಕಾರ ನೀಡುವುದಾಗಿ ಶ್ರೀಧರ್ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ತನಿಖೆ ಎತ್ತ ಸಾಗಿದೆ?: ಆರೋಪಿಗಳು ಬಳಸಿದ್ದಾರೆ ಎನ್ನಲಾದ ಕೆಂಪು ಬಣ್ಣದ ಪಲ್ಸರ್ ಬೈಕ್ ಕೆಎ 02 ನೋಂದಣಿ ಹೊಂದಿದೆ ಎಂದು ಗೊತ್ತಾಗಿದೆ. ಕ್ರಿಮಿನಲ್ ಕೇಸುಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಸಿಟಿವಿ ಕೆಮೆರಾದ ದೃಶ್ಯಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.












Click it and Unblock the Notifications