ರೌಡಿ ಲಕ್ಷ್ಮಣ ಕೊಲೆ ಹತ್ಯೆ ಬಳಿಕ 'ಗುಡ್ ಜಾಬ್' ಎಂದ ವ್ಯಕ್ತಿ ಯಾರು?

ಬೆಂಗಳೂರು, ಮಾರ್ಚ್ 27 : ಬೆಂಗಳೂರಿನ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಒಂದು ಫೋನ್‌ ಕರೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಲಕ್ಷ್ಮಣ ಹತ್ಯೆಯಾದ ಬಳಿಕ 4 ನೇ ಆರೋಪಿ ಹೇಮಂತ್ ಕುಮಾರ್ ಮಾಡಿದ ಕೊನೆ ಕರೆ ಇದಾಗಿದೆ.

ರೌಡಿ ಲಕ್ಷ್ಮಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 6 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ. ತನಿಖೆ ನಡೆಯುವಾಗ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕನ್ಯಾಕುಮಾರಿ ಮತ್ತು ಕುಕ್ಕೆ ಸುಬ್ರಮಣ್ಯದಲ್ಲಿ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಕರೆಗಳ ಮಾಹಿತಿ ಸಂಗ್ರಹಿಸಿದಾಗ ಹತ್ಯೆಗೆ ಸಂಬಂಧಿಸಿದಂತೆ ಹೊಸ ಸುಳಿವು ಸಿಕ್ಕಿದೆ.

ಲಕ್ಷ್ಮಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ವರ್ಷಿಣಿ ಮತ್ತು ರೂಪೇಶ್ ಕೊಲೆಗೆ ಸುಪಾರಿ ನೀಡಿದ್ದರು. ಆರೋಪಿ ಹೇಮಂತ್ ಕುಮಾರ್ 80 ಸಾವಿರ ರೂ. ಹಣ ಪಡೆದು ಹತ್ಯೆಗೆ ಒಪ್ಪಿಕೊಂಡಿದ್ದ...

ಗುಡ್ ಜಾಬ್ ಎಂದಿದ್ದು ಯಾರು?

ಗುಡ್ ಜಾಬ್ ಎಂದಿದ್ದು ಯಾರು?

ಹತ್ಯೆ ಪ್ರಕರಣದ 4ನೇ ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಹೇಮಿ ರೌಡಿ ಲಕ್ಷ್ಮಣ ಹತ್ಯೆಯಾದ ಕೆಲವೇ ಕ್ಷಣದಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ಕಡೆ ಇದ್ದ ವ್ಯಕ್ತಿ 'ಗುಡ್ ಜಾಬ್' ಎಂದು ಉತ್ತರ ನೀಡಿದ್ದಾರೆ. ಆ ವ್ಯಕ್ತಿ ಯಾರು? ಎಂದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಸುಪಾರಿ ನೀಡಿದ್ದ ರೂಪೇಶ್

ಸುಪಾರಿ ನೀಡಿದ್ದ ರೂಪೇಶ್

ಲಕ್ಷ್ಮಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ವರ್ಷಿಣಿ ಮತ್ತು ರೂಪೇಶ್ ಕೊಲೆಗೆ ಸುಪಾರಿ ನೀಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಲಕ್ಷ್ಮಣನಿಂದ 1 ಲಕ್ಷ ಹಣ ಪಡೆದಿದ್ದ ವರ್ಷಿಣಿ, ಅದರಲ್ಲಿ 80 ಸಾವಿರ ರೂ.ಗಳನ್ನು ರೂಪೇಶ್‌ಗೆ ನೀಡಿದ್ದಳು. ಅದೇ ಹಣವನ್ನು ಆತ ಹೇಮಂತ್ ಕುಮಾರ್‌ಗೆ ಕೊಟ್ಟಿದ್ದ.

ಒಟ್ಟಿಗೆ ಇರಲು ಬಿಡುವುದಿಲ್ಲ

ಒಟ್ಟಿಗೆ ಇರಲು ಬಿಡುವುದಿಲ್ಲ

ರೂಪೇಶ್ ಮತ್ತು ವರ್ಷಿಣಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಲಕ್ಷ್ಮಣ ವಿರೋಧ ವ್ಯಕ್ತಪಡಿಸುತ್ತಿದ್ದ. ರೂಪೇಶ್‌ನನ್ನು ಪ್ರೀತಿಸುವ ವಿಚಾರವನ್ನು ಮನೆಯಲ್ಲಿ ಹೇಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ. ಲಕ್ಷ್ಮಣ ಬದುಕಿದ್ದರೆ ಇಬ್ಬರನ್ನು ಒಟ್ಟಿಗೆ ಇರಲು ಬಿಡುವುದಿಲ್ಲ ಆದ್ದರಿಂದ, ಆತನನ್ನು ಕೊಲ್ಲಲು ಸಂಚು ರೂಪಿಸಿದೆವು ಎಂದು ವರ್ಷಿಣಿ ತಪ್ಪೊಪ್ಪಿಕೊಂಡಿದ್ದಾಳೆ.

ಹೆಸರು ಮಾಡಲು ಹತ್ಯೆಗೆ ಸಹಕರಿಸಿದ

ಹೆಸರು ಮಾಡಲು ಹತ್ಯೆಗೆ ಸಹಕರಿಸಿದ

ಹತ್ಯೆ ಪ್ರಕರಣದ 3ನೇ ಆರೋಪಿ ಕ್ಯಾಟ್ ರಾಜ ಹಳೆಯ ದ್ವೇಷ ಮತ್ತು ನಗರದಲ್ಲಿ ಹೆಸರು ಮಾಡಲು ಈ ಹತ್ಯೆಗೆ ಕೈ ಜೋಡಿಸಿದ್ದ. ಆತನಿಗೆ ಇಂಡಿಕಾ ಕಾರು ಕೊಡಿಸುವುದಾಗಿಯೂ ರೂಪೇಶ್ ಭರವಸೆ ನೀಡಿದ್ದ.

ಮಾ.26ರ ಸೋಮವಾರ ಆರೋಪಿಗಳಾದ ರೂಪೇಶ್, ವರ್ಷಿಣಿ, ದೇವರಾಜ್, ವರುಣ್ ಕುಮಾರ್, ಮಧು ಕುಮಾರ್ ಮತ್ತು ಅಲೋಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಎಲ್ಲರನ್ನು 14 ದಿನ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+