ಗಣಪನಿಗೂ ತಟ್ಟಿದ ಆರ್ಥಿಕ ಹಿಂಜರಿತ ಬಿಸಿ
ಬೆಂಗಳೂರು, ಆಗಸ್ಟ್ 31: ಆರ್ಥಿಕ ಹಿಂಜರಿತದ ಬಿಸಿ ಗಣಪನಿಗೂ ತಟ್ಟಿದೆ. ಗಣೇಶನ ವಿಗ್ರಹಕ್ಕೆ ಬೇಡಿಕೆ ತೀರ ಡಿಮೆ ಎಂದು ಜೋಲುಮುಖ ಹಾಕಿಕೊಂಡಿದ್ದಾರೆ ಗಣಪನ ಮೂರ್ತಿ ಮಾರುವ ವ್ಯಾಪಾರಿಗಳು.
ಜಿಡಿಪಿ ಕುಸಿತ, ತೀವ್ರ ಆರ್ಥಿಕ ಹಿಂಜರಿತ, ಜನರ ಕೊಳ್ಳುವ ಶಕ್ತಿ ಕುಂಠಿತ ಹೀಗೆ ಹಲವು ಕಾರಣಗಳಿಂದಾಗಿ ಗಣೇಶ ಹಬ್ಬ ಹಳೆಯ ಕಳೆಯನ್ನು ಈ ಬಾರಿ ಕಳೆದುಕೊಂಡಿದೆ.
ಇದೆಲ್ಲವುದರ ಜೊತೆಗೆ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರ ಕಠಿಣ ನಿಯಮಗಳು ಸಹ ಗಣೇಶ ಇರಿಸುವ ಸಂಘಗಳು ಹಿಂದೆ ಸರಿಯುವಂತೆ ಮಾಡಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೊದಲಿನ ಕಳೆ ಇಲ್ಲದೆ ವ್ಯಾಪಾರ ಮಂಕಾಗಿದೆ.

ಆನ್‌ಲೈನ್‌ನಲ್ಲಿಯೂ ವಿವಿಧ ಎತ್ತರ-ಗಾತ್ರದ ಗಣೇಶನ ಮೂರ್ತಿ ಮಾರಾಟ ಮಾಡುತ್ತಿರುವುದರಿಂದಲೂ ಸಹ ಗಣೇಶ ಮೂರ್ತಿ ವ್ಯಾಪಾರಸ್ತರಿಗೆ ತೊಂದರೆ ಆಗಿದೆ. ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಬಿಬಿಎಂಪಿ ಕೊಕ್ಕೆ ಹಾಕಿರುವುದರಿಂದಲೂ ಸಹ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಗಣೇಶ ವ್ಯಾಪಾರಿಗಳು ಮಾತ್ರವಲ್ಲದೆ, ಹೂವು-ಹಣ್ಣು, ತರಕಾರಿ ಇನ್ನಿತರೆ ದಿನಬಳಕೆ ವಸ್ತುಗಳ ಬೆಲೆಯೂ ಮಾಮೂಲಿನಂತೆ ಏರಿಕೆ ಕಂಡಿದ್ದು ಮಾರುಕಟ್ಟೆಯಲ್ಲಿ ಹಿಂದಿನ ಉತ್ಸಾಹವೇ ಇಲ್ಲದಂತಾಗಿದೆ.












Click it and Unblock the Notifications