Get Updates
Get notified of breaking news, exclusive insights, and must-see stories!

Cabinet Reshuffle: ಸಂಪುಟ ಪುನಾರಚರಣೆ, ನಾಯಕತ್ವ ಬದಲಾವಣೆ: ಗೃಹ ಸಚಿವರ ಮಹತ್ವದ ಹೇಳಿಕೆ

ಬೆಂಗಳೂರು, ನವೆಂಬರ್ 20: ಕರ್ನಾಟಕ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸದ್ಯ ಎರಡೂವರೆ ವರ್ಷದ ಅಧಿಕಾರ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಗಳು ಮತ್ತೆ ಜೋರಾಗಿವೆ. ಆದರೆ ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಹೈಕಮಾಂಡ್ ಅಧಿಕಾರ ಹಸ್ತಾಂತರ ಕುರಿತು ಇದುವರೆಗೆ ಏನೂ ತಿಳಿಸಿಲ್ಲ. ಅದಕ್ಕೆ ಮಹತ್ವ ಬರೋದೇ ಹೈಕಮಾಂಡ್ ಹೇಳಿದಾಗ ಮಾತ್ರ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ಪೂರ್ಣಗೊಂಡಿದೆ. ಈ ವಿಚಾರಕ್ಕೆ ರಾಜಕೀಯ ಮಹತ್ವ ನೀಡುವ ಅಗತ್ಯವಿಲ್ಲ. ಹೈಕಮಾಂಡ್ ಯಾವತ್ತಿಗೂ ಅಧಿಕಾರ ಹಸ್ತಾಂತರ ಕುರಿತಂತೆ ನಮಗೆ ಸೂಚನೆ ನೀಡಿಲ್ಲ. CLP ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವೇ ಆಗಿಲ್ಲ ಎಂದರು.

G Parameshwara Responds on Karnataka Govt Leadership Change and Cabinet Expansion Update

ನಾವೇಲ್ಲರು ಅಂದುಕೊಂಡರೆ ಏನೂ ಆಗುವುದಿಲ್ಲ. ಹೈಕಮಾಂಡ್ ಏನು ನಿರ್ಧರಿಸುತ್ತಾರೋ ಅದೇ ಅಂತಿಮ ಎನ್ನುವ ಮೂಲಕ ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆ, ಇತರ ಚರ್ಚೆಗಳಿಗೆ ತೆರೆ ಎಳೆಯಲು ಯತ್ನಿಸಿದರು. ಸಂಪುಟ ಪುನಾರಚನೆ ಅಥವಾ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳಿಗೂ ಇದೇ ಅನ್ವಯವಾಗುತ್ತದೆ ಅಂತಲೂ ತಿಳಿಸಿದರು.

ಭರವಸೆಗಳ ಈಡೇರಿಕೆ ಸಮಾಧಾನವಿದಿಯೇ?

ಚುನಾವಣೆ ವೇಳೆ ನಾವು ಜನತೆಗೆ ಕೊಟ್ಟ ಭರವಸೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭರವಸೆಗಳನ್ನು ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಈಡೇರಿಸಿದ್ದೇವೆ. ಮುಂದಿನ ಅವಧಿಯಲ್ಲಿ ಅನಾವಶ್ಯಕ ವೆಚ್ಚ ಕಡಿತ, ಹಣಕಾಸಿನ ಪರಿಷ್ಕರಣೆಗಳಂತಹ ಬದಲಾವಣೆಗಳ ಅಗತ್ಯವಿದೆ. ಕೇಂದ್ರ ಸರ್ಕಾರ ಸರಕು ಸೇವಾ ತೆರಿಗೆ (GST) ಹಂಚಿಕೆ ಕಡಿಮೆ ಮಾಡಿರುವುದು, ಕೇಂದ್ರ ಪ್ರಾಯೋಜಿತ ಯೋಜನೆಗಳ ಹಣ ಬಿಡುಗಡೆ ವಿಳಂಬವಾಗಿರುವುದು ರಾಜ್ಯಕ್ಕೆ ತೊಂದರೆ ಉಂಟಾಗಿದೆ ಎಂದು ವಿವರಿಸಿದರು.

ಸಿಎಂ ಸಿದ್ದರಾಮಯ್ಯರಿಂದ 17ನೇ ಬಜೆಟ್ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ನಿರ್ವಹಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ ಈ ಬಾರಿ ಬಜೆಟ್ ಮಂಡಿಸಿದರೆ ಅದು 17ನೇ ಬಜೆಟ್ ಆಗುತ್ತದೆ ಎಂದು ಪರಮೇಶ್ವರ್ ಸಂತಸ ವ್ಯಕ್ತಪಡಿಸದಿರು. ಕೇಂದ್ರದ ಅನುದಾನ ಬಾಕಿ, ಅನಗತ್ಯ ವೆಚ್ಚ ಕಡಿತಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುತ್ತೇನೆ ಎಂದರು.

ಬೆಂಗಳೂರು ದರೋಡೆ ಪ್ರಕರಣ: ಗೃಹ ಸಚಿವರು ಹೇಳಿದ್ದೇನು?

ಬೆಂಗಳೂರಿನಲ್ಲಿ ನಡೆದ ಮಹತ್ತರ ದರೋಡೆ ಪ್ರಕರಣದ ಬಗ್ಗೆ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು, ಪೊಲೀಸರು ಈಗಾಗಲೇ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ದರೋಡೆಕೋರರು ಬಳಸಿದ ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ನಕಲಿ ಆಗಿದೆ. ಅವರು ವಾಹನ ಬದಲಾಯಿಸಿ ಪರಾರಿಯಾಗಿರುವುದು ದೃಢಪಟ್ಟಿದೆ.

ರಾಜ್ಯ ಮೀರಿದ ವಾಹನಗಳ ಚಲನೆ, ಸಿಸಿಟಿವಿ ದೃಶ್ಯಗಳು ಎಲ್ಲ ಪರಿಶೀಲನೆ ನಡೆಯುತ್ತಿದೆ. ದರೋಡೆಕೋರರನ್ನು ಖಚಿತವಾಗಿ ಬಂಧಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಸ್ಥಳ ಪ್ರಕರಣ: ಶೀಘ್ರವೇ ಚಾರ್ಜ್‌ಶೀಟ್

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಸ್ಐಟಿ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಅದರಲ್ಲಿರುವ ಸತ್ಯ-ವಿವರಗಳು ಬಹಿರಂಗವಾಗುತ್ತವೆ. ರಾಜ್ಯ ಸರ್ಕಾರದೇ ಎಸ್ಐಟಿ ರಚಿಸಿದ್ದರಿಂದ ವರದಿಯನ್ನು ಸರ್ಕಾರಕ್ಕೆ ಸಹ ಸಲ್ಲಿಸಲಾಗುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಪ್ರಕರಣದ ಅಪ್ಡೇಟ್‌ಗಳನ್ನು ವಿಧಾನಸಭೆಯಲ್ಲಿ ಪ್ರಕಟಿಸುವುದಾಗಿ ಅವರು ಮಾಹಿತಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+