ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರು ಯಾರಿದ್ದಾರೆ? ಸಂಪೂರ್ಣ ಪಟ್ಟಿ

Recommended Video

      ಕರ್ನಾಟಕದ ನೂತನ ಮಂತ್ರಿಗಳು ಇವರೆ..? | Cabinet Expansion

      ಬೆಂಗಳೂರು, ಆಗಸ್ಟ್ 20: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ 25 ದಿನಗಳ ಬಳಿಕ ಕೊನೆಗೂ ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರದ ಧ್ವನಿ ಕೇಳಿಸಲಿದೆ. ಹೆಚ್ಚೂ ಕಡಿಮೆ ಒಂದು ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಅಸ್ತು ಎಂದಿದೆ.

      ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

      ಸಾಕಷ್ಟು ಅಲೆದಾಟ, ಮನವೊಲಿಕೆಯ ಪ್ರಯತ್ನಗಳ ಬಳಿಕ ಯಡಿಯೂರಪ್ಪ ಅವರ ಸರ್ಕಾರ ಸೇರುವ ಕ್ಯಾಬಿನೆಟ್ ಸಚಿವರ ಪಟ್ಟಿ ಅವರ ಕೈಸೇರಿದೆ. ಯಡಿಯೂರಪ್ಪ ಅವರು ನೀಡಿದ ಪಟ್ಟಿ, ರಾಜ್ಯದ ಬೇರೆ ನಾಯಕರು ನೀಡಿದ ಪಟ್ಟಿ, ಅಮಿತ್ ಶಾ ಅವರ ಕಡೆಯಿಂದ ಸಿದ್ಧವಾದ ಪಟ್ಟಿಗಳ ಪರಿಶೀಲನೆ ನಡೆದು ಅಂತಿಮವಾಗಿ ಮೊದಲ ಹಂತದಲ್ಲಿ ಸರ್ಕಾರ ಸೇರುವ 17 ಸಚಿವರ ಹೆಸರನ್ನು ಅಮಿತ್ ಶಾ ಅವರು ಯಡಿಯೂರಪ್ಪಗೆ ಕಳಿಸಿದ್ದಾರೆ.

      ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕರಿಗೆ ಹೈಕಮಾಂಡ್ ನೀಡಿರುವ ಪಟ್ಟಿ ನಿರಾಶೆ ತಂದಿದೆ. ಅನೇಕರಲ್ಲಿ ಅಚ್ಚರಿಯೂ ಮೂಡಿದೆ. ಬಾಲಚಂದ್ರ ಜಾರಕಿಹೊಳಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ರೇಣುಕಾಚಾರ್ಯ, ರಾಮದಾಸ್, ಎಸ್‌.ಆರ್.ವಿಶ್ವನಾಥ್, ಸುನೀಲ್ ಕುಮಾರ್ ಮುಂತಾದ ಪ್ರಬಲ ಹೆಸರುಗಳು ಮೊದಲ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ.

      ಸೋತ ಶಾಸಕ ಸವದಿಗೂ ಸ್ಥಾನ

      ಸೋತ ಶಾಸಕ ಸವದಿಗೂ ಸ್ಥಾನ

      ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ
      ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶಾಸಕ ಜಗದೀಶ ಶೆಟ್ಟರ್
      ಮಾಜಿ ಶಾಸಕ ಲಕ್ಷ್ಮಣ ಸವದಿ
      ಶಿವಮೊಗ್ಗ ನಗರ ಶಾಸಕ ಕೆಎಸ್ ಈಶ್ವರಪ್ಪ
      ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು

      ಬೆಂಗಳೂರಿನ ನಾಲ್ವರಿಗೆ ಸಚಿವ ಸ್ಥಾನ

      ಬೆಂಗಳೂರಿನ ನಾಲ್ವರಿಗೆ ಸಚಿವ ಸ್ಥಾನ

      ಮಲ್ಲೇಶ್ವರಂ ಶಾಸಕ ಡಾ. ಸಿಎನ್ ಅಶ್ವತ್ಥ್ ನಾರಾಯಣ
      ಪದ್ಮನಾಭನಗರ ಶಾಸಕ ಆರ್. ಅಶೋಕ
      ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್
      ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ

      ಸಿಟಿ ರವಿ ಸಂಪುಟಕ್ಕೆ

      ಸಿಟಿ ರವಿ ಸಂಪುಟಕ್ಕೆ

      ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ
      ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ
      ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ
      ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ

      ಪಕ್ಷೇತರ ಶಾಸಕ ನಾಗೇಶ್‌ಗೆ ಸಚಿವ ಸ್ಥಾನ

      ಪಕ್ಷೇತರ ಶಾಸಕ ನಾಗೇಶ್‌ಗೆ ಸಚಿವ ಸ್ಥಾನ

      ನರಗುಂದ ಶಾಸಕ ಚಂದ್ರಕಾಂತಗೌಡ ಪಾಟೀಲ್
      ಮುಳಬಾಗಿಲು ಶಾಸಕ ಎಚ್ ನಾಗೇಶ್
      ಔರಾದ್ ಶಾಸಕ ಪ್ರಭು ಚೌಹಾಣ್
      ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+