ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲ್ಕ್ ಬೋರ್ಡ್‌ ಮೆಟ್ರೋಗೆ ಕೂಡಿ ಬರದ ಮುಹೂರ್ತ, ಟೆಂಡರ್ ಮತ್ತೆ ರದ್ದು

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಸಿಲ್ಕ್ ಬೋರ್ಡ್ ಜಂಕ್ಷನ್‌ ಬಳಿ ಮೆಟ್ರೋ ಕಾಮಗಾರಿಗಾಗಿ ಕರೆದಿದ್ದ ಟೆಂಡರ್ ಮತ್ತೊಮ್ಮೆ ರದ್ದಾಗಿದ್ದು, ಆ ಭಾಗದಲ್ಲಿ ವಾಹನ ದಟ್ಟಣೆ ತಗ್ಗುವುದು ಇನ್ನೂ ನಿಧಾನವಾಗಲಿದೆ.

ಈಗಾಗಲೇ ಹಲವು ಬಾರಿ ಟೆಂಡರ್ ರದ್ದುಗೊಂಡಿದ್ದು, ಆ ಭಾಗದ ಕಾಮಗಾರಿ ಇನ್ನೂ ತಡವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಿಡಿಎ, ಬಿಬಿಎಂಪಿ ಸಹಯೋಗದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 133.54 ಕೋಟಿ ರೂ ವೆಚ್ಚದಲ್ಲಿ 2.84 ಕಿ.ಮೀ ಲೂಪ್ ಮತ್ತು ರಾಂಪ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ನಿರ್ಧಾರ ಮಾಡಿದೆ.

ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ

ಈ ಕಾಮಗಾರಿಗೆ 2018ರ ಮಾರ್ಚ್ ನಲ್ಲಿ ನಿಗಮ ಟೆಂಡರ್ ಆಹ್ವಾನಿಸಿತ್ತು. ಟೆಂಡರ್‌ಗೆ 2 ಕಂಪನಿಗಳು ಬಿಡ್ ಸಲ್ಲಿಸಿದ್ದವು. ಇವುಗಳಲ್ಲಿ ಒಂದು ಕಂಪನಿ ತಾಂತ್ರಿಕ ಸುತ್ತಿನಲ್ಲಿ ಅರ್ಹವಾಗಿತ್ತು.

ಯೋಜನೆಯನ್ನು 27 ತಿಂಗಳೊಳಗೆ ಮುಗಿಸುವ ಗುರಿ

ಯೋಜನೆಯನ್ನು 27 ತಿಂಗಳೊಳಗೆ ಮುಗಿಸುವ ಗುರಿ

ಯೋಜನೆಯನ್ನು 27 ತಿಂಗಳೊಳಗಾಗಿ ಮುಗಿಸುವ ಗುರಿಯನ್ನು ಮೆಟ್ರೋ ನಿಗಮ ಹೊಂದಿದೆ. ಎರಡನೇ ಬಾರಿ ಟೆಂಡರ್ ರದ್ದಾಗಿರುವ ಕಾರಣದಿಂದ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಮೆಟ್ರೋದಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಮಾಡಿದವನಿಗೆ ಧರ್ಮದೇಟು ಮೆಟ್ರೋದಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಮಾಡಿದವನಿಗೆ ಧರ್ಮದೇಟು

ರೋಡ್ ಕಂ ರೇಲ್ ಮೇಲ್ಸೇತುವೆ

ರೋಡ್ ಕಂ ರೇಲ್ ಮೇಲ್ಸೇತುವೆ

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಮಾರೇನಹಳ್ಳಿ ರಸ್ತೆಯಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ರೋಡ್ ಕಂ ರೇಲ್ ಮೇಲ್ಸೇತುವೆ ನಿರ್ಮಾಣವಾಗಲಿದೆ. 798 ಕೋಟಿ ರೂ ವೆಚ್ಚದಲ್ಲಿ 3.2 ಕಿ.ಮೀ ಈ ರೋಡ್ ಕಂ ರೇಲ್ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಮೆಟ್ರೋಗಾಗಿ ನಿರ್ಮಾಣ ಮಾಡುವ ವಾಹನ ಸಂಚಾರಕ್ಕೆ ನಾಲ್ಕು ಪಥದ ರಸ್ತೆ ಇರಲಿದೆ.

ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ

ಅಧಿಕಾರಿಗಳಿಗೆ ಉಚಿತ ಕಾರ್ಡ್

ಅಧಿಕಾರಿಗಳಿಗೆ ಉಚಿತ ಕಾರ್ಡ್

ವಿದೇಶಿ ಬ್ಯಾಂಕ್‌ಗಳಿಂದ ಸಾವಿರಾಋಉ ಕೋಟಿ ರೂ ಸಾಲದ ಹೊರೆಯಲ್ಲಿರುವ ನಿಗಮ, ಪ್ರತಿ ವರ್ಷ ನೂಉ ಕೋಟಿ ರೂಗಳಿಗೂ ಅಧಿಕ ಸಾಲ ಮರುಪಾವತಿ ಮಾಡಬೇಕು. ಸಿಬ್ಬಂದಿ ವೇತನ ಹೆಚ್ಚಳ ಸೇರಿ ಹಣಕಾಸು ವಿಚಾರದ ಬೇಡಿಕೆ ಇಟ್ಟ ಸಂದರ್ಭದಲ್ಲಿ ನಿಗಮ ನಷ್ಟದ ಕಾರಣ ನೀಡುತ್ತಿತ್ತು. ಆದರೆ, ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ನಿಗಮ ವಿಫಲವಾಗಿದೆ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ

ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಮುಂದಾಗಿದೆ. ಆದ್ದರಿಂದ, ರೈಲು ನಿಲ್ದಾಣದ ಫ್ಲಾಟ್‌ ಫಾರಂಗಳಲ್ಲಿ ಹಳಿಯ ಸಮೀಪ ಗಾಜಿನ ಬಾಗಿಲುಗಳನ್ನು ಅಳವಡಿಸಲಿದೆ. ಈಗಾಗಲೇ ವಿದೇಶಗಳಲ್ಲಿ ರೈಲ್ವೇ ಟ್ರ್ಯಾಕ್ ಸಮೀಪ ಗಾಜಿನ ಬಾಗಿಲು ಅವಳವಡಿಕೆ ಮಾಡಲಾಗಿದ್ದು, ಇದು ಯಶಸ್ವಿಯಾಗಿದೆ. ಇದರಿಂದಾಗಿ ಆಕಸ್ಮಿಕವಾಗಿ ಪ್ರಯಾಣಿಕರು ಟ್ರ್ಯಾಕ್‌ಗೆ ಬೀಳುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತಡೆ ಬಿದ್ದಿದೆ.

English summary
Work on a multi-level flyover at the Silk Board junction is likely to start at the beginning of next year as metro authorities have discharged the first tender inviting bids for the Rs 133-crore project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X