IIMB Camp: ಫೆ.9ಕ್ಕೆ ಕೃತಕ ಅಂಗ ದಾನ ಶಿಬಿರ: ಅರ್ಹ ಬಿಪಿಎಲ್ ಫಲಾನುಭವಿಗಳು ಸಂಪರ್ಕಿಸಿ
ಬೆಂಗಳೂರು, ಫೆಬ್ರವರಿ 04: ರಾಜ್ಯ ರಾಜಧಾನಿ ಬೆಂಗೂರಿನ IIM ಕಾರ್ಯನಿರ್ವಾಹಕ ಸ್ನಾತಕೋತ್ತರ ಕಾರ್ಯಕ್ರಮ ನಿರ್ವಹಣೆ (ಇಪಿಜಿಪಿ) ಮತ್ತು ಸ್ನಾತಕೋತ್ತರ ಕಾರ್ಯಕ್ರಮ ಉದ್ಯಮ ನಿರ್ವಹಣೆ (ಪಿಜಿಇಪಿಎಂ) ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಉಪಕ್ರಮವಾದ ಭಾಗವಾಗಿ ಉಚಿತ ಕೃತಕ ಅಂಗ ದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಇದೇ ಫೆಬ್ರವರಿ 9 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಭಗವಾನ್ ಮಹಾವೀರ್ ವಿಕ್ಲಾಂಗ್ ಸಹಾಯತ ಸಮಿತಿ (ಜೈಪುರ ಪಾದ) ಸಹಯೋಗಲ್ಲಿ ಐಐಎಂಬಿ ವಿದ್ಯಾರ್ಥಿಗಳು ನಡೆಸುವ ಪ್ರಯಾಸ್ ವತಿಯಿಂದ ಉಚಿತ ಕೃತಕ ಅಂಗ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಐಐಎಂಬಿ ವಿದ್ಯಾರ್ಥಿಗಳು ಸಾಮಾಜಿಕವಾಗಿ, ಜವಾಬ್ದಾರಿಯುತ ಹೊಣೆಗಾರಿಕೆಯಡಿ ಈ ಕಾರ್ಯಕ್ರಮ ನಡೆಯಲಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕೃತಕ ಅಂಗಗಳು ಅಗತ್ಯವಿರುವ ವಿಭಿನ್ನ ಸಾಮರ್ಥ್ಯ ವ್ಯಕ್ತಿಗಳಿಗೆ ಸಹಾಯಾರ್ಥವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.

ಆಸಕ್ತರು ಫೆಬ್ರವರಿ 9ರ ಮೊದಲೇ ನೋಂದಾಯಿಸಿಕೊಳ್ಳಬೇಕು. ಅದಕ್ಕಾಗಿ ನೀವು 91-9538813760 ಅಥವಾ 080-2699 3759 / 3548ಗೆ ಕರೆ ಮಾಡಬೇಕು ಎಂದು ಐಐಎಂಬಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೃತಕ ಅಂಗಕ್ಕಾಗಿ ನೋಂದಣಿ ಆಗಿ, ಮಾನದಂಡಗಳೇನು?
* ಫಲಾನುಭವಿಗಳು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಒದಗಿಸಬೇಕು.
* ಗಾಯಗಳು ಕನಿಷ್ಠ 4 ತಿಂಗಳ ಹಳೆಯದಾಗಿರಬೇಕು ಮತ್ತು ನೋಂದಣಿ ಸಮಯದಲ್ಲಿ ಗಾಯದ ಛಾಯಾಚಿತ್ರ ನೀಡಬೇಕು.
ಉಚಿತ ಕೃತಕ ಅಂಗ ಶಿಬಿರವು ಮೂರು ರೀತಿಯ ಪ್ರಾಸ್ಥೆಟಿಕ್ ಅಂಗ ಫಿಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ. ಮೊಣಕಾಲಿನ ಮೇಲೆ ಪ್ರಾಸ್ಥೆಟಿಕ್ಸ್, ಕ್ಯಾಲಿಪರ್‌ಗಳು ಮತ್ತು ಮೊಣಕಾಲಿನ ಕೆಳಗಿನ ಪ್ರಾಸ್ಥೆಟಿಕ್ಸ್ ಅಂಗಗಳ ಅಂಶ ಒಳಗೊಂಡಿರುತ್ತದೆ. ಯಾರು ಮೊದಲು ಈ ಕೃತಕ ಅಂಗಗಳಿಗೆ ನೋಂದಣಿ ಆಗಿರುತ್ತಾರೆ ಅಂತಹ 50 ಮಂದಿಗೆ ನೀಡಲಾಗುವುದು ಎಂದು ಐಐಎಂಬಿ ವಿದ್ಯಾರ್ಥಿಗಳ ತಿಳಿಸಿದ್ದಾರೆ.
ಪ್ರಯಾಸ್ ಎಂಬುದು IIMB ವಿದ್ಯಾರ್ಥಿಗಳು ನಡೆಸುವ ವೇದಿಕೆಯಾಗಿದೆ. ಹಿಂದುಳಿದವರಿಗೆ ಸಹಾಯ ಮಾಡಲು, ಸಾಮಾಜಿಕ ಕಲ್ಯಾಣಕ್ಕಾಗಿ ಸುಸ್ಥಿರ ಪರಿಸರ ವ್ಯವಸ್ಥೆಯನ್ನು ರಚಿಸಲು ಈ ವೇದಿಕೆ ಮುಂಚೂಣಿಯಲ್ಲಿದೆ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ ಭಾರತ ಸೇರಿ 27 ದೇಶಗಳಲ್ಲಿ ಅಂಗವಿಕಲರಿಗೆ ಉಚಿತ ಕೃತಕ ಅಂಗಗಳನ್ನು ಒದಗಿಸಿದೆ.












Click it and Unblock the Notifications