RCB Final: ಆರ್‌ಸಿಬಿ ಅಭಿಮಾನಿಯಿಂದ ಉಚಿತ ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ವಿತರಣೆ; ಎಲ್ಲಿ, ಯಾವಾಗ ತಿಳಿಯಿರಿ
IPL 2025 RCB Final: ಈಗಾಗಲೇ ಐಪಿಎಲ್ 2025 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೇ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಈ ಹಿನ್ನೆಲೆ ರಾಜ್ಯದೆಲ್ಲೆಡೆ ಅಭಿಮಾನಿಗಳ ಸಂಭ್ರಮಾಚರಣೆ ಇನ್ನೂ ಜೋರಾಗಿ ನಡೆಯುತ್ತಲೇ ಇದೆ. ಈ ನಡುವೆಯೇ ಬೆಂಗಳೂರಿನಲ್ಲಿ ಅಭಿಮಾನಿಯೊಬ್ಬರು ಉಚಿತ ಪಾನಿಪೂರಿ ಹಂಚುವುದಾಗಿ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಎಲ್ಲಿ ಹಾಗೂ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜೂನ್ 29ರಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ನೇರವಾಗಿ ಫೈನಲ್ ಪ್ರವೇಶ ಮಾಡಿತ್ತು. ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಮಣಿಸುವ ಮೂಲಕ ಪಂಜಾಬ್ ಕೂಡ ಫೈನಲ್‌ಗೆ ಲಗ್ಗೆ ಇಟ್ಟಿತು. ಮಂಗಳವಾರ (ಜೂನ್ 3) ಫೈನಲ್ ಮ್ಯಾಚ್ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್‌ಸಿಬಿ ಫೈನಲ್‌ಗೆ ಪ್ರವೇಶ ಮಾಡಿದಾಗಿನಿಂದ ಕರ್ನಾಟಕದಲ್ಲಿ ಅಭಿಮಾನಿಗಳ ಸಂಭ್ರಾಮಾಚರಣೆ ಮುಂದುವರೆದಿದೆ. ಈ ನಡುವೆಯೇ ಅಭಿಮಾನಿಯೊಬ್ಬರು ಆರ್‌ಸಿಬಿ ಫೈನಲ್ ತಲುಪಿದ ಹಿನ್ನೆಲೆ ಜೂನ್ 4ರಂದು ಉಚಿತವಾಗಿ ಚಾಟ್ಸ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದರೆ. ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕರು ಉಚಿತ ಚಾಟ್ಸ್ (ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ) ಸೇರಿದಂತೆ ಇನ್ನಿತರ ಚಾಟ್ಸ್ ವಿತರಣೆ ಮಾಡುವುದಾಗಿ ಘೋಷಿಸಿದ್ದಾರೆ. ತಮ್ಮ ಚಾಟ್ ಸೆಂಟರ್ ಮುಂದೆ ಈ ಬೋರ್ಡ್ ಹಾಕಿಕೊಂಡಿದ್ದು, ಇದರಲ್ಲಿ 'ಈ ಸಲ ಕಪ್ ನಮ್ದು' ಆದ್ರೆ ಒನ್ ಡೇ ಪಾನಿಪುರಿ ನಿಮ್ದು ಎಂದು ಬರೆಯಲಾಗಿದೆ.
ಅಲ್ಲದೆ, 18ರ ನಂಟು ಆರ್‌ಸಿಬಿ ಗಂಟು ಅಂತಾ ಸಹ ಬರೆಯಲಾಗಿದ್ದು, ಇದು ವೈರಲ್ ಆಗುತ್ತಿದೆ. ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಫೂಲ್ ಎದುರು ಜೂನ್ 4ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ಮತ್ತೊಂದೆಡೆ ಫೈನಲ್ ಪಂದ್ಯದಂದು ಬೆಂಗಳೂರಿನ ಆಟೋ ಚಾಲಕ ಪರಶುರಾಮ್ ಶೆಟ್ಟಿ ಎಂಬವರು ಆರ್‌ಸಿಬಿ ಜೆರ್ಸಿ ಧರಿಸಿದ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲಿದ್ದಾರೆ. ಈ ಮೂಲಕ ತಮ್ಮ ವಿಶೇಷ ಅಭಿಮಾನ ಪ್ರದರ್ಶಿಸಲು ಮುಂದಾಗಿದ್ದಾರೆ. ಸ್ನೇಹಿತ ಅಜ್ಮಲ್ ಹುಸೇನ್ ಜೊತೆ ಸೇರಿ ಈ ರೀತಿಯ ವಿನೂತನವಾಗಿ ಅಭಿಮಾನವನ್ನು ಮೆರೆಯಲು ಅವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಇಬ್ಬರು ಚಾಲಕರ ಜೋಡಿ ಆರ್‌ಸಿಬಿ ಜೆರ್ಸಿ ಧರಿಸಿದ ಹಲವು ಪ್ರಯಾಣಿಕರಿಗೆ ಉಚಿತ ಸವಾರಿ ಸೇವೆ ಒದಗಿಸಲಿದೆ. ಆರ್‌ಸಿಬಿ ಮೇಲಿನ ಅಭಿಮಾನದ ಕುರಿತು ಪ್ರತಿಕ್ರಿಯಿಸಿದ ಪರಶುರಾಮ್ ಶೆಟ್ಟಿ ಅವರು, ಈ ವರ್ಷ ಕಪ್ ನಮ್ಮದೇ ಎಂದು ಉತ್ಸುಕರಾಗಿದ್ದೇವೆ. ನನಗೆ ಮೂವರು ಮಕ್ಕಳಿದ್ದಾರೆ. ಪಂದ್ಯದ ದಿನಗಳಲ್ಲಿ ಮನೆಯಲ್ಲಿ ಅದೊಂದು ದೊಡ್ಡ ವಿಷಯ. ಆದರೂ ನನಗೆ ನೆನಪಿರುವಷ್ಟು ಕಾಲವೂ ನಾನು ಆರ್‌ಸಿಬಿಯ ಅಭಿಮಾನಿ ಆಗಿರುತ್ತೇನೆ ಎಂದು ಹೇಳಿ ಗಮನ ಸೆಳದಿದ್ದಾರೆ.












Click it and Unblock the Notifications