Foxconn: ಬೆಂಗಳೂರಲ್ಲಿ ಎಲೆಕ್ಟ್ರಿಕ್ ಉತ್ಪಾದನಾ ಘಟಕ ಸ್ಥಾಪನೆ ಖಚಿತಪಡಿಸಿದ ಫಾಕ್ಸ್‌ಕಾನ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ 'ಪ್ರಾಜೆಕ್ಟ್ ಎಲೆಫೆಂಟ್' ಮುನ್ನಡೆಸುವ ಸಲುವಾಗಿ ಫಾಕ್ಸಕಾನ್ ಕಂಪನಿ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿರುವ ಬಗ್ಗೆ ಕಂಪನಿ ಅಧ್ಯಕ್ಷ ಯಂಗ್ ಲಿಯು ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 06: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ 'ಪ್ರಾಜೆಕ್ಟ್ ಎಲೆಫೆಂಟ್' ಮುನ್ನಡೆಸುವ ಸಲುವಾಗಿ ಫಾಕ್ಸಕಾನ್ ಕಂಪನಿ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿರುವ ಬಗ್ಗೆ ಕಂಪನಿ ಅಧ್ಯಕ್ಷ ಯಂಗ್ ಲಿಯು ತಿಳಿಸಿದ್ದಾರೆ.
ಹಾನ್ ಹೈ ಪ್ರೆಸಿಷನ್ ಇಂಡಸ್ಟ್ರಿ (ಫಾಕ್ಸ್‌ಕಾನ್) ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದರು. ಬೆಂಗಳೂರಿನ ಹೊರವಲಯದಲ್ಲಿ ಕಂಪನಿಯು ಎಲೆಕ್ಟ್ರಾನಿಕ್ ಉತ್ಪಾದನಾ ಯೋಜನೆ/ಘಟಕ ಆರಂಭಿಸಲಿದೆ. ಈ ಸಂಬಂಧ ರಾಜ್ಯದೊಂದಿಗೆ ನಿಕಟ ಸಂಪರ್ಕವನ್ನು ಕಂಪನಿ ಅಧಿಕೃತಗೊಳಿಸಿದೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಕಂಪನಿ ಅಧ್ಯಕ್ಷ ಯಂಗ್ ಲಿಯು ಅವರು, ಬೆಂಗಳೂರಿನಲ್ಲಿ "ಪ್ರಾಜೆಕ್ಟ್ ಎಲಿಫೆಂಟ್" ಅನ್ನು ಯಶಸ್ವಿ ಆರಂಭ ಬಗ್ಗೆ ಖಚಿತಪಡಿಸಿದ್ದಲ್ಲದೇ, ಈ ಹಿಂದೆ ರಾಜ್ಯದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂಬ ಹೇಳಿಕೆಯಿಂದ ಉಂಟಾಗಿದ್ದ ಗೊಂದಲ ನಿವಾರಿಸಿದ್ದೇವೆ ಎಂದರು.
ವಿವಿಧ ನಮೂನೆಯ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದನೆಗೆ "ಪ್ರಾಜೆಕ್ಟ್ ಎಲಿಫೆಂಟ್"ಈ ಯೋಜನೆಯಡಿ ರಾಜ್ಯದಲ್ಲಿ ಹೂಡಿಕೆ ಮಾಡಲಾಗುವುದು. ಈ ಮೂಲಕ ಕರ್ನಾಟಕವು ಬಂಡವಾಳ ಹೂಡಕೆ ತಾಣವನ್ನಾಗಿ ನಾವು ಪರಿಗಣಿಸಲಿದ್ದೇವೆ. ರಾಜ್ಯ ಯಾಂತ್ರಿಕ/ಯಂತ್ರೋಪಕರಣಗಳು, ಎಲೆಕ್ಟ್ರಿಕ್ ವಾಹನ, ಐಸಿ ವಿನ್ಯಾಸ ಮತ್ತು ಸೆಮಿಕಂಡಕ್ಟರ್ ವಿಭಾಗಗಳನ್ನು ತಯಾರಿಸುವ ಬಹು ಯೋಜನೆಗಳಿಗೆ ಬಲವಾದ ಅಡಿಪಾಯ ಇಲ್ಲಿ ಬೀಳಲಿದೆ ಎಂದು ಯಂಗ್ ಲಿಯು ವಿಶ್ವಾಸ ವ್ಯಕ್ತಪಡಿಸದಿರು.
ಕರ್ನಾಟಕದ ಪರವಾಗಿ ಐಟಿ/ಬಿಟಿ ಖಾತೆ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ ಹಾಗೂಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಫಾಕ್ಸ್‌ಕಾನ್ ತಂಡವನ್ನು ಸ್ವಾಗತಿಸಿ ಒಪ್ಪಂದದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೂಲಸೌಕರ್ಯ ಸನ್ನದ್ಧತೆಯ ಟೈಮ್‌ಲೈನ್‌ಗಳು, ಕೌಶಲ್ಯ ಮತ್ತು ಪ್ರತಿಭೆಗಳ ಸಂಪಾದನೆಗೆ ಕರ್ನಾಟಕ ಸರ್ಕಾರದ ಬೆಂಬಲ ಸೇರಿದಂತೆ ಯೋಜನೆಗೆ ಅಗತ್ಯ ಮೂಲಸೌಕರ್ಯ, ಸ್ಥಳದ ಲಭ್ಯತೆ ಎಲ್ಲವು ಇಲ್ಲಿದೆ ಎಂದು ಫಾಕ್ಸ್‌ಕಾನ್ ಅಧ್ಯಕ್ಷರು ಹೇಳಿದರು. ತೈವಾನ್ ಮೂಲದ ವಿಶ್ವದ ಅತಿದೊಡ್ಡ ಗುತ್ತಿಗೆ ತಯಾರಕರು ಬೆಂಗಳೂರಿನ ಹೊರವಲಯದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಅಸೆಂಬ್ಲಿ ಘಟಕ ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ. ಆಪಲ್ ಐಫೋನ್‌ಗಳು ಸಹ ಉತ್ಪಾದಿಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications