Get Updates
Get notified of breaking news, exclusive insights, and must-see stories!

ಕೊವೀಡ್ ಬೂಸ್ಟರ್ ಡೋಸ್ ಪಡೆದವರಿಗೆ ನಾಲ್ಕನೇ ಡೋಸ್ ಅಗತ್ಯವಿಲ್ಲ: ಜಯದೇವ ಸಂಸ್ಥೆ ಅಧ್ಯಯನ

ಬೆಂಗಳೂರು, ಜ.11: ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆದವರು ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ನೀಡಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಬೂಸ್ಟರ್ ಡೋಸ್ ಪಡೆದ 350 ಆರೋಗ್ಯ ಕಾರ್ಯಕರ್ತರ ಮೇಲೆ ಪ್ರಯೋಗ ನಡೆಸಿದ್ದು, ರೋಗನಿರೋಧಕ ಸ್ಥಿತಿಯನ್ನು ಹೆಚ್ಚಿಸುವ ಪ್ರತಿಕಾಯಗಳ ಗಮನಾರ್ಹವಾಗಿ ವೃದ್ಧಿಯಾಗಿದೆ ಎಂದು ವರದಿ ನೀಡಿದೆ. ಈ ಹಿನ್ನೆಲೆ ಬೂಸ್ಟರ್ ಡೋಸ್ ಪಡೆದವರು ಕೊರೊನಾ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಅಧ್ಯಯನವು ತೀರ್ಮಾನಿಸಿದೆ.

ಈ 350 ಮಂದಿಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು, ನರ್ಸ್‌ಗಳು, ತಂತ್ರಜ್ಞರು, ವಾರ್ಡ್ ಸಹಾಯಕರು ಮತ್ತು ಇತರ ಕಚೇರಿ ಸಿಬ್ಬಂದಿ ಸೇರಿದ್ದಾರೆ.

Fourth dose of Covid vaccine not required, who have received booster dose

19 ರಿಂದ 60 ವರ್ಷಗಳ ನಡುವಿನ ಎಲ್ಲಾ ವಯಸ್ಕರಲ್ಲೂ ಅಂದರೆ 148 ಪುರುಷರು ಮತ್ತು 202 ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂದು ತೋರಿಸಿದೆ ಎಂದು ಅಧ್ಯಯನವು ತಿಳಿಸಿದೆ.

ಬೆಂಗಳೂರು ಕೇಂದ್ರ ಕಛೇರಿಯ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಈ 19 ರಿಂದ 60 ವರ್ಷಗಳ ನಡುವಿನ ಎಲ್ಲರಲ್ಲೂ ಬೂಸ್ಟರ್ ಡೋಸ್ ಪಡೆದ 12 ತಿಂಗಳ ನಂತರವೂ ರೋಗನಿರೋಧಕ ಶಕ್ತಿಯು ಉತ್ತಮವಾಗಿದೆ ಎಂದಿದ್ದಾರೆ.

"ವಿಶ್ವದ ಕೆಲವು ಭಾಗಗಳಲ್ಲಿ ಒಮಿಕ್ರಾನ್‌ನ ಬಿಎಫ್ 7 ಮತ್ತು ಎಕ್ಸ್‌ಬಿಬಿಯ ಹೊಸ ರೂಪಾಂತರಗಳು ಕಾಣಿಸಿಕೊಂಡಿದ್ದು, ಹೊಸ ಕೊರೊನಾ ಸಾಂಕ್ರಾಮಿಕದ ಆತಂಕ ಎದುರಾಗಿದೆ. ಹೀಗಾಗಿ ಆರೋಗ್ಯ ಸಂಪನ್ಮೂಲಗಳು, ಮಾನವಶಕ್ತಿ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ನಮ್ಮ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಇದರಿಂದ ಸಾರ್ವಜನಿಕ ಆರೋಗ್ಯ ನೀತಿಗಳನ್ನು ನಮ್ಮ ಜನಸಂಖ್ಯೆಗೆ ತಕ್ಕಂತೆ ರೂಪಿಸಬಹುದು" ಎಂದಿದ್ದಾರೆ.

Fourth dose of Covid vaccine not required, who have received booster dose

ಮುಂದುವರಿದು "ಅನೇಕ ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಮಾನ್ಯವಾಗಿ ಎರಡನೇ ಬೂಸ್ಟರ್ ಅಥವಾ ನಾಲ್ಕನೇ ಡೋಸ್ ಲಸಿಕೆ ತೆಗೆದುಕೊಳ್ಳಬೇಕೇ ಎಂದು ಪದೇ ಪದೇ ಕೇಳುತ್ತಿದ್ದರು. ಈ ಹಿನ್ನೆಲೆ ನಡೆದ ಅಧ್ಯಯನದಲ್ಲಿ 99.4 ಪ್ರತಿಶತದಷ್ಟು ಆರೋಗ್ಯ ಕಾರ್ಯಕರ್ತರ ರೋಗನಿರೋಧಕ ಶಕ್ತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿರುವುದು ಕಂಡು ಬಂದಿದೆ. ಹೀಗಾಗಿ ನಾಲ್ಕನೇ ಡೋಸ್ ಲಸಿಕೆ ಅಗತ್ಯವಿಲ್ಲ ಎಂಬ ಅಂಶವನ್ನು ಈ ಅಧ್ಯಯನವು ತಿಳಿಸುತ್ತದೆ. ಆದರೆ, ಬೂಸ್ಟರ್ ಡೋಸ್ ತೆಗೆದುಕೊಳ್ಳದವರು ಅದನ್ನು ತೆಗೆದುಕೊಳ್ಳಬೇಕು ಎಂದು ಅಧ್ಯಯನ ಮತ್ತಷ್ಟು ಒತ್ತಿಹೇಳುತ್ತದೆ" ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+