4 ರಾಜ್ಯಗಳ ಫಲಿತಾಂಶ: ಕರ್ನಾಟಕಕ್ಕೇನು?

ಆದರೆ ನಿನ್ನೆಯ ಫಲಿತಾಂಶ ನೋಡಿದಾಗ ಜೈವರ್ಧನ್ ಸಿಂಗ್ ಸೋತುಸುಣ್ಣವಾಗಿದ್ದು, ರಾಘೋಗಢದಿಂದ ಬಿಜೆಪಿಯ ಜ್ಞಾನದೇವ್ ಅಹುಜಾ ಗೆದ್ದಿದ್ದಾರೆ. (ದಿಗ್ವಿಜಯ್ ಸಿಂಗ್ ಪುತ್ರ ವಿಧಾನಸಭೆಗೆ ಸ್ಪರ್ಧೆ) ಇದೇ ವೇಳೆ, ರಾಜ್ಯದಲ್ಲಿ ಪ್ರಮುಖ ಮೂರು ಪಕ್ಷಗಳ ಸ್ಥಿತಿಗತಿಯ ಮೇಲೆ 4 ರಾಜ್ಯಗಳ ಫಲಿತಾಂಶ ಏನು ಪರಿಣಾಮ ಬೀರಬಲ್ಲದು ಎಂಬುದನ್ನು ನೋಡಿದಾಗ
ಬಿಜೆಪಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟು ಶೋಚನೀಯ ಸ್ಥಿತಿಯಲ್ಲಿದ್ದ ರಾಜ್ಯ ಬಿಜೆಪಿಗೆ ಭಾರಿ ಟಾನಿಕ್ ನೀಡಿದಂತಾಗಿದೆ. ಆದರೆ ತಕ್ಷಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅನುಪಸ್ಥಿತಿ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಎದ್ದುಕಾಣುತ್ತಿದೆ. ಯಡಿಯೂರಪ್ಪ ವಾಪಸಾದರೆ ಪಕ್ಷಕ್ಕೆ ಮತ್ತೊಂದು ಶಕ್ತಿ ಲಭಿಸಿದಂತಾಗುತ್ತದೆ.
ನಿನ್ನೆಯ ಫಲಿತಾಂಶಗಳಲ್ಲಿಯೂ ಮೋದಿಯದ್ದೇ ಮೇಲುಗೈ ಆಗಿದೆ. ಹಾಗಾಗಿ ರಾಜ್ಯದಲ್ಲೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜಾದೂ ನಡೆಯಲಿದ್ದು, ಕರ್ನಾಟಕದ ಮತದಾರನಿಂದ ಬಿಜೆಪಿಗೆ ಭಾರಿ ಮನ್ನಣೆ ದೊರೆಯುವ ಅಂದಾಜು ಬಿಜೆಪಿ ಪಕ್ಷದ್ದಾಗಿದೆ. ಆದರೆ ಜನಪ್ರಿಯ ಯೋಜನೆಗಳ ಮೂಲಕ ರಾಜ್ಯದಲ್ಲಿ ಬೇರೂರಲು ಯತ್ನಿಸುತ್ತಿರುವ ಕಾಂಗ್ರೆಸ್, ಬಿಜೆಪಿಗೆ ಅಡ್ಡಗಾಲು ಹಾಕುವುದು ನಿಶ್ಚಿತ.
ಕಾಂಗ್ರೆಸ್: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳು ನಿಜಕ್ಕೂ ಅಗ್ನಿಪರೀಕ್ಷೆಯ ದಿನಗಳಾಗಲಿವೆ. ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು, ಬಿಜೆಪಿ ಗೆದ್ದಿದ್ದರೂ ಅದು ಮೋದಿಸಂದ ಗೆಲುವಲ್ಲ. ರಾಜ್ಯದಲ್ಲಿ ಮೋದಿ ಅಲೆ ಇಲ್ಲ' ಎಂದು ಹೇಳುವ ಮೂಲಕ ಸ್ವತಃ ಸಿದ್ದರಾಮಯ್ಯನವರೇ ಮೋದಿ ಪ್ರಭಾವವನ್ನು ಕಂಡುಕೊಂಡಿದ್ದಾರೆ.
ಕರ್ನಾಟಕದಲ್ಲಿ 20+ ಸಂಸತ್ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಗೆದ್ದರೂ ದೊಡ್ಡ ಸಾಧನೆಯೇ. ಅದಕ್ಕಿಂತ ಒಂದು ಹೆಚ್ಚು ಬಂದರೂ ಬೋನಸ್ ಅಂಡ್ ಸಿದ್ದು ಆಡಳಿತಕ್ಕೆ ಸಿಕ್ಕ ಮನ್ನಣೆ ಎನ್ನಬಹುದು. ಏನೇ ಆಗಲಿ ಅಹಿಂದ ಓಲೈಕೆಗಾಗಿ ಜನಪ್ರಿಯ ಯೋಜನೆಗಳನ್ನು ಜಾರಿಯಲ್ಲಿರುವಂತೆ ನೋಡಿಕೊಳ್ಳುವುದು ಸಿಎಂ ಸಿದ್ದುಗೆ ಅನಿವಾರ್ಯ. ಆದರೆ ಅದೇ ಮುಳುವಾಗುತ್ತದಾ?
ಇನ್ನು ಜೆಡಿಎಸ್ : ತೀರಾ ಪ್ರಾದೇಶಿಕ ಪಕ್ಷವಾದ ಜೆಡಿಎಸ್ಸಿಗೂ ನಿನ್ನೆಯ ಫಲಿತಾಂಗಳಿಗೂ ಯಾವುದೇ ಸಂಬಂಧವಿಲ್ಲವಾದರೂ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನಿನ್ನೆಯ ಫಲಿತಾಂಶಗಳ ಪ್ರಭಾವ ಜೆಡಿಎಸ್ ಮೇಲೂ ಬೀರಲಿದೆ. ದೊಡ್ಡ ಗೌಡರು ಅದಾಗಲೇ 'ಮೋದಿ ಅಲೆ ರಾಜ್ಯದಲ್ಲಿ ಇಲ್ಲ. ನಿನ್ನೆಯ ಫಲಿತಾಂಶಗಳಲ್ಲಿ ಮೋದಿ ಪ್ರಭಾವ ಕಂಡುಬಂದಿಲ್ಲ' ಎಂದು ಸಿದ್ದರಾಮಯ್ಯ ಧಾಟಿಯಲ್ಲೇ ಹೇಳಿದ್ದರೂ ಅದು ಪಕ್ಕಾ ರಾಜಕೀಯ ಪ್ರತಿಕ್ರಿಯೆ ಅನ್ನಬಹುದಾಗಿದೆ ಅಷ್ಟೇ!
ಈ ಮಧ್ಯೆ, ಕಾಂಗ್ರೆಸ್ ನಾಲ್ಕೂ ರಾಜ್ಯಗಳಲ್ಲಿ ನುಚ್ಚುನೂರಾಗಿರುವುದು ಜೆಡಿಎಸ್ಸಿ ಸಂತೋಷದಾಯಕವಾಗಿರುತ್ತದೆ. ಆದರೆ ಅಲ್ಲಿ ಗೆದ್ದಿರುವುದು ಯಾರು ಮತ್ತು ಮತದಾರ ಅವರನ್ನೇ ಏಕೆ ಗೆಲ್ಲಿಸಿದ್ದಾನೆ ಎಂಬುದನ್ನು ತರ್ಕದೊಂದಿಗೆ ನೋಡಿದಾಗ ಜೆಡಿಎಸ್ಸಿಗೆ ಆತಂಕವುಂಟುಮಾಡುವುದು ಖರೆ. ಕಳೆದ ವಿಧಾನಸಭೆಯಲ್ಲಿಯೂ ಗಣನೀಯ ಸಾಧನೆ ತೋರಲಾಗದ ಜೆಡಿಎಸ್, ಈ ಬಾರಿ ಕಾಂಗ್ರೆಸ್ ಜತೆಗೆ ಬಿಜೆಪಿಯನ್ನೂ ಎದುರಿಸಲು ಮುಂದಿನ ಲೋಕಸಭೆಗೆ ಬೇರೆಯದೇ ಆದ ಕಾರ್ಯತಂತ್ರ ರೂಪಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ಜತೆಗೆ ತೃತೀಯ ರಂಗಕ್ಕೆ ಸಾಕಷ್ಟು ನೀರೆರೆಯಬೇಕಾಗುತ್ತದೆ.












Click it and Unblock the Notifications